ಸುದ್ದಿಗಳು

ಗೋಲ್ಡನ್ ಸ್ಟಾರ್ ಗಣೇಶ್ ಸಿನಿ ಪಯಣಕ್ಕೆ 13 ವರ್ಷ

'ಚೆಲ್ಲಾಟ' ಚಿತ್ರದ ಮೂಲಕ ನಾಯಕನಟರಾಗಿ ಎಂಟ್ರಿ ಕೊಟ್ಟಿದ್ದ ಗಣೇಶ್

ಬೆಂಗಳೂರು.ಏ.21: ಅಂದು ಉದಯ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ‘ಕಾಮಿಡಿ ಟೈಂ’ ಕಾರ್ಯಕ್ರಮದ ಮೂಲಕ ಉತ್ತುಂಗಕ್ಕೆ ಏರಿದ ನಟ ಗಣೇಶ್. ಅಂದು ಸಾಮಾನ್ಯ ನಟರಾಗಿದ್ದ ಅವರಿಂದು ಗೋಲ್ಡನ್ ಸ್ಟಾರ್ ಆಗಿ ಬೆಳೆದಿದ್ದು, ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿ ತರುವಂತಹ ವಿಚಾರ.

ಹೌದು, ಯಾವುದೇ ಗಾಡ್ ಫಾದರ್ ಇಲ್ಲದೇ ಇಂದು ಯಶಸ್ಸಿನ ಉತ್ತುಂಗಕ್ಕೆ ಏರಿರುವ ನಟರಲ್ಲಿ ಗಣೇಶ್ ಕೂಡಾ ಒಬ್ಬರು. ಇವತ್ತಿಗೆ ಇವರು ಚಿತ್ರರಂಗಕ್ಕೆ ನಾಯಕನಟರಾಗಿ ಎಂಟ್ರಿ ಕೊಟ್ಟು 13 ವರ್ಷ ಆಗಿದೆ.

ಹೌದು, 2006 ಏಪ್ರಿಲ್ 21ನೇ ತಾರೀಖು ಗಣೇಶ್ ಅಭಿನಯದ ಚೊಚ್ಚಲ ಚಿತ್ರ ‘ಚೆಲ್ಲಾಟ’ ಸಿನಿಮಾ ತೆರೆಕಂಡಿತ್ತು. ಬರೀ ಕಾಮಿಡಿ ಟೈಮ್ ಗಣೇಶನ ಸಿನಿಮಾ ಅಂತ ಥಿಯೇಟರ್ ಗೆ ಬಂದ ಜನ, ನಂತರ ಸಿನಿಮಾ ಇಷ್ಟವಾಗಿ ಗಣೇಶ್ ಮತ್ತೊಂದು ಸಿನಿಮಾ ಮಾಡಲು ಸ್ಪೂರ್ತಿಯಾದರೂ. ಇದಾದ ನಂತರ ‘ಮುಂಗಾರುಮಳೆ’ಯಲ್ಲಿ ಗಣೇಶ್ ಕಾಣಿಸಿಕೊಂಡರು. ಈ ಚಿತ್ರವು ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸ ಬರೆಯಿತು.

ಅಂದಿನಿಂದ ಸೂಪರ್ ಸ್ಟಾರ್ ಪಟ್ಟಕ್ಕೆ ಏರಿದ ಗಣೇಶ್ ‘ಹುಡುಗಾಟ’, ‘ಗಾಳಿಪಟ’, ಸರ್ಕಸ್’, ‘ಸಂಗಮ’, ‘ಮದುವೆ ಮನೆ’, ‘ಚೆಲುವಿನ ಚಿತ್ತಾರ’, ‘ಕೂಲ್’, ‘ಮಳೆಯಲಿ ಜೊತೆಯಲಿ’, ಸುಂದರಾಂಗ ಜಾಣ’, ‘ಬುಗುರಿ’, ‘ಚಮಕ್’, ‘ಆರೆಂಜ್’… ಹೀಗೆ 30 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ‘ಗಿಮಿಕ್’, ‘ಗೀತಾ’, ‘ವೇರ್ ಈಸ್ ಮೈ ಕನ್ನಡಕ’.. ಚಿತ್ರಗಳಲ್ಲಿ ನಟಿಸುತ್ತಿದ್ದು, ‘99’ ರಿಲೀಸ್ ಗೆ ರೆಡಿಯಾಗಿದೆ.

 

View this post on Instagram

 

ನಮಸ್ಕಾರ ನಮಸ್ಕಾರ ನಮಸ್ಕಾರ ಎನ್ನುತ್ತಾ ಚಿತ್ರರಂಗಕ್ಕೆ ಬಂದ 19 ವರ್ಷಗಳು ಹಾಗೂ ನಾಯಕ ನಟನಾಗಿ ‘ಚೆಲ್ಲಾಟ’ ಆರಂಭಿಸಿದ 13 ವರ್ಷಗಳ ಸಿನಿಜರ್ನಿಯಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ನನ್ನ ಏಳಿಗೆಗೆ ಸಹಕರಿಸಿ,ಹಾರೈಸಿದ ಚಿತ್ರರಂಗದ ಪ್ರತಿಯೊಬ್ಬರಿಗೂ, ಮಾಧ್ಯಮ ಮಿತ್ರರಿಗೂ ಹಾಗೂ ಪ್ರೀತಿಯ ಅಭಿಮಾನಿಗಳಿಗೂ ಧನ್ಯವಾದಗಳು. ನಿಮ್ಮ ಪ್ರೀತಿ, ಹಾರೈಕೆ ಸದಾ ಇರಲಿ.🙏🙏🙏

A post shared by Ganesh (@goldenstar_ganesh) on

‘ಚೆಲ್ಲಾಟ’ ಚಿತ್ರದಿಂದ ಹಿಡಿದು, ಸದ್ಯ ರಿಲೀಸ್ ಆಗಿರುವ ‘ಆರೇಂಜ್’ ವರೆಗೆ ಸಕ್ಸಸ್,ಫೇಲ್ಯೂರ್ ಎರಡನ್ನೂ ಕಂಡಿದ್ದಾರೆ ಗಣೇಶ್. ಸದ್ಯ ರಿಲೀಸ್ ಗೆ ರೆಡಿಯಿರುವ ‘99’ ಚಿತ್ರದ ಬಗ್ಗೆಯೂ ಕುತೂಹಲವಿದೆ.

ಅಂದು ಸಾಮಾನ್ಯ ನಟರಾಗಿದ್ದ ಗಣೇಶ್ ಇಂದು ನಿರ್ಮಾಪಕರಾಗಿ ‘ಕೂಲ್’ ಚಿತ್ರದ ಮೂಲಕ ನಿರ್ದೇಶಕರಾಗಿ ಯಶಸ್ಸು ಕಂಡಿದ್ದಾರೆ. ಇನ್ನು ತಮ್ಮ ಟ್ಯಾಲೆಂಟ್ ನಿಂದಲೇ ಮೇಲೆ ಬಂದ ಅವರು ಹೀಗೆಯೇ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರಲಿ ಎನ್ನುವುದು ಬಾಲ್ಕನಿ ನ್ಯೂಸ್ ನ ಆಶಯ.

ರಾಧಿಕಾ ಶರತ್ ಕುಮಾರ್ ರೊಂದಿಗೆ ಸೆಲ್ಪೀ ತೆಗೆದುಕೊಂಡ ‘ಯುವರತ್ನ’ ಅಪ್ಪ

#goldenstarganesh, #13years, #balkaninews #filmnews, #kannadasuddigalu, #chellata

Tags