ಸುದ್ದಿಗಳು

ಯಶ್ ಗೆ ಸ್ಟಾರ್ ಗಿರಿ ತಂದು ಕೊಟ್ಟ ಈ ಚಿತ್ರಕ್ಕೆ 6 ವರ್ಷ !!

ಗೂಗ್ಲಿ’ ಕನ್ನಡ ಸಿನಿಮಾದಲ್ಲಿ ಸೂಪರ್ ಹಿಟ್ ಸಿನಿಮಾ. ಯಶ್ ಹಾಗೂ ಕೃತಿಕರಬಂಧ ಅಭಿನಯದ ಈ ಸಿನಿಮಾ ಜುಲೈ 19 2013 ರಲ್ಲಿ ಬಿಡುಗಡೆಯಾಗಿ ಇಂದುಗೆ 6 ವರ್ಷ.. ಯಶ್ ಹಾಗೂ ಕೃತಿಕರಬಂಧ ಜೋಡಿ ಸ್ಕ್ರೀನ್ ಮೇಲೆ ಸಿಕ್ಕಾಪಟ್ಟೆ ಸಖತ್ ಆಗಿ ವರ್ಕೌಟ್ ಆಗಿತ್ತು..

Image result for googly film

ಒಂದು ಯೂತ್ ಫುಲ್, ರೊಮ್ಯಾಂಟಿಕ್ ಹಾಗೂ ಕಾಮಿಡಿ ಕಥೆಯ ಮೂಲಕ ಪವನ್ ಒಡೆಯರ್  ನಿರ್ದೇಶನದ ‘ಗೂಗ್ಲಿ’ಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗಿದ್ದರು.  ಚಿತ್ರದ ನಾಯಕ ನಟ ಬ್ರಿಲಿಯಂಟ್ ರಾಸ್ಕಲ ಸ್ಟೂಡೆಂಟ್. ಹಾಗಂತ ಅವರ ಪ್ರಾಂಶುಪಾಲರೇ ಹೇಳುತ್ತಾರೆ. ಇನ್ನು ಚಿತ್ರದ ನಾಯಕಿ ದಂತದಗೊಂಬೆ. ಇಲ್ಲಿ ಹುಡುಗಿ ಹಿಂದೆ ಹುಡುಗ ಬೀಳಲ್ಲ. ತುಂಬಾ ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಆದ ಹುಡುಗನ ಹಿಂದೆ ಹುಡುಗಿ ಬೀಳುತ್ತಾಳೆ. ಕಥೆ ಸ್ಪಿನ್ ಆಗುತ್ತಾ ಆಗುತ್ತಾ ಪ್ರೇಕ್ಷಕರ ಜೊತೆ ಗೂಗ್ಲಿ ಆಟ ಆಡುತ್ತದೆ..

Image result for googly film

ಈ ಚಿತ್ರಕ್ಕೆ ಜಯಣ್ಣ, ಭೋಗೇಂದ್ರ  ನಿರ್ಮಾಣವಿದೆ.. ಇನ್ನು ಪವನ್ ಒಡೆಯರ್ ಕಥೆ, ಚಿತ್ರಕಥೆ, ನಿರ್ದೇಶನ, ಸಂಭಾಷಣೆ  ಬರೆದಿದ್ದಾರೆ.. ವೈದಿ ಅವರ ಛಾಯಾಗ್ರಹಣವಿದ್ದು ಜೋಶ್ವಾ ಶ್ರೀಧರ್ ಅವರ ಸಂಗೀತವಿದೆ..

Related image

ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದು ,  ಹಾಗೂ ಸಾಹಿತ್ಯ ಯೋಗರಾರ್ ಭಟ್, ಜಯಂತ ಕಾಯ್ಕಿಣಿ, ಕವಿರಾಜ್ ಬರೆದಿದ್ದಾರೆ ..ಯಶ್, ಕೃತಿ ಖರಬಂದ, ಅನಂತನಾಗ್, ಸುಧಾಬೆಳವಾಡಿ, ಸಾಧುಕೋಕಿಲ, ನೀನಾಸಂ ಅಶ್ವತ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ

ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಕೊಂಡಾಡಿದ ಶೃತಿ ಹಾಸನ್

#yash #googly #yashgooglymovie #sandalwood

 

Tags