ಸುದ್ದಿಗಳು

ಚಂದನವನದಲ್ಲಿ ಶುರುವಾಯ್ತು ‘ಗೌಡ್ರು ಸೈಕಲ್’ ಹವಾ

ಬೆಂಗಳೂರು, ಮಾ.25:

ಸ್ಯಾಂಡಲ್‌ ವುಡ್‌ ನಲ್ಲಿ ವಿಭಿನ್ನ ಟೈಟಲ್‌ ಗಳ ಮೂಲಕವೇ ಅನೇಕ ಸಿನಿಮಾಗಳು ಸದ್ದು ಮಾಡ್ತಾ ಇವೆ. ಈಗಾಗಲೇ ಅನೇಕ ಸಿನಿಮಾಗಳು ಟೈಟಲ್ ಮೂಲಕವೇ ಗೆದ್ದಿವೆ. ಇದೀಗ ಮತ್ತೊಂದು ವಿಭಿನ್ನ ಟೈಟಲ್ ಮೂಲಕ ಸದ್ದು ಮಾಡ್ತಾ ಇದೆ ‘ಗೌಡ್ರು ಸೈಕಲ್’.

ಹಳ್ಳಿಗಾಡಿನ ಸಿನಿಮಾ

ಹೌದು, ‘ಗೌಡ್ರು ಸೈಕಲ್’ ಸಿನಿಮಾ ಇದೀಗ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ. ಈ ಬೆನ್ನಲ್ಲೇ ಈ ಸಿನಿಮಾ ಆಡಿಯೋ ಲಾಂಚ್ ಕೂಡ ನಡೆದಿದೆ. ಊರ ಗೌಡನಿಗೆ ತನ್ನ ಸೈಕಲ್ ಮೇಲಿನ ಪ್ರೀತಿ ಎಂಥಹದ್ದು ಅಂತಾ ತೋರಿಸುವ ಪರಿ. ಅದೇ ಹಾಸ್ಯ ಶೈಲಿಯನ್ನು ಸೈಕಲ್ ಕಥೆಯ ಮೂಲಕ ತೋರಿಸಲಾಗಿದೆ.

ಪ್ರಶಾಂತ್ ಕೆ.ಎಳ್ಳಂಪಲ್ಲಿ ನಿರ್ದೇಶನದ ಸಿನಿಮಾ

ಪ್ರಶಾಂತ್ ಕೆ.ಎಳ್ಳಂಪಲ್ಲಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಇದಾಗಿದೆ. ಇನ್ನೂ ಈ ಸಿನಿಮಾದ ನಾಯಕನಾಗಿ ಶಶಿಕಾಂತ್ ನಟಿಸಿದ್ದಾರೆ. ನಾಯಕಿಯಾಗಿ ಬಿಂಬಶ್ರೀ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇನ್ನು ಸಿನಿಮಾದಲ್ಲಿ ಸುಂದರವಾದ ಮೂರು ಹಾಡುಗಳಿದ್ದು ಸಾಯಿ ಸರ್ವೇಶ್ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದು, ಸಿನಿಮಾಗೆ ಬಂಡವಾಳ ಹೂಡಿದ್ದಾರೆ ಸವಿತಾ ರಾಜೇಶ್ ಚೌಟ. ಸದ್ಯ ಬಾರೀ ಸದ್ದು ಮಾಡ್ತಾ ಇರುವ ಈ ಸಿನಿಮಾ ಮುಂದಿನ ತಿಂಗಳೂ ಬಿಡುಗಡೆಯಾಗಲಿದೆ.

ಮಲೆನಾಡ ಹುಡುಗಿಯ ಬಣ್ಣದ ಪಯಣ

#sandalwood #kannadamovies #balkaninews #gowdrucyclekannadamovie #gowdrucycleaudiolaunch

Tags