ಸುದ್ದಿಗಳು

ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗೌತಮಿ ಗೌಡ ದಂಪತಿಗಳು

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ 3 ರ ಸ್ಪರ್ಧಿಯಾಗಿದ್ದ ನಟಿ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ದಂಪತಿಗಳು ಇಂದು ಮದುವೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಅಂದ ಹಾಗೆ ಗೌತಮಿಯವರು ಈ ಹಿಂದೆ ‘ಚಿ.ಸೌ ಚಾವಿತ್ರಿ’ ಧಾರಾವಾಹಿ ಮೂಲಕ ಮನೆ ಮಾತಾಗಿದ್ದರು.

‘ಚಿ.ಸೌ ಚಾವಿತ್ರಿ’ ಧಾರಾವಾಹಿ ಬಳಿಕ ಗೌತಮಿಯವರು ‘ತಾಯವ್ವ’, ‘ಚೆಲುವಿ’, ‘ಚಲಿಸುವ ಮೋಡಗಳು’, ‘ಅಮ್ಮ ನಿನಗಾಗಿ’ , ‘ಕುಣಿಯೋಣು ಬಾರಾ’, ‘ಯಾರಿಗುಂಟು ಯಾರಿಗಿಲ್ಲ’ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿ ನಂತರ ‘ಬಿಗ್ ಬಾಸ್’ ಮನೆಯ ಮೂಲಕ ಕರ್ನಾಟಕದ ಜನರಿಗೆ ಮತ್ತಷ್ಟು ಪರಿಚಯವಾದವರು.

ಅಂದ ಹಾಗೆ ಗೌತಮಿ ಗೌಡ ಈಗಾಗಲೇ ‘ಮಳೆ’, ‘ಜೆಸ್ಸಿ’, ‘ಮಾತುಕಥೆ’, ‘ಅಂಬಿ ನಿಂಗ್ ವಯಸ್ಸಾಯ್ತೋ’ ಹಾಗೂ ‘ಪೂರ್ಣ ಸತ್ಯ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿಯೂ ಪ್ರಖ್ಯಾತಿ ಪಡೆದುಕೊಂಡಿದ್ದಾರೆ.

ಇಂದು ಮದುವೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ದಂಪತಿಗಳ ದಾಂಪತ್ಯ ಜೀವನ ನೂರು ಕಾಲ ಸದಾ ಸಂತೋಷದಿಂದಿರಲಿ ಎಂದು ಬಾಲ್ಕನಿ ನ್ಯೂಸ್ ಶುಭ ಹಾರೈಸುತ್ತದೆ.

#gowthamiGowda #weddingAniversary #movieNews #kannadaSuddigalu

Tags