ಸುದ್ದಿಗಳು

‘ಗ್ರಾಮಾಯಣ’ ಟೀಸರ್: ದುಡಿಮೆಗಾಗಿ ಊರು ಬಿಟ್ಟು ವಲಸೆ ಹೋದವರು ನೋಡಲೇ ಬೇಕಾದ ಚಿತ್ರ

‘ಗ್ರಾಮಾಯಣ’ ಚಿತ್ರದ ಟೀಸರ್ ಬಿಡುಗಡೆಯ ಸಂದರ್ಭದಲ್ಲಿ ಡಾ. ರಾಜ್ ಪುತ್ರರು

ವಿನಯ್ ರಾಜ್ ಕುಮಾರ್ ಅಭಿನಯದ ನಾಲ್ಕನೆಯ ಚಿತ್ರ ‘ಗ್ರಾಮಾಯಣ’ ಈಗಾಗಲೇ ತನ್ನ ಮೊದಲ ನೋಟದಿಂದ ಗಮನ ಸೆಳೆಯುತ್ತಿದೆ. ಇನ್ನು ನಿನ್ನೆಯಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯ ಸಮಾರಂಭ ನಡೆದಿದೆ.

ಬೆಂಗಳೂರು,ಸ. 07: ‘ನಾವು ನಮ್ಮ ಹಳ್ಳಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಹೆಚ್ಚು ಕಡಿಮೆ ನಾವು ಊರು ಬಿಟ್ಟು ಬಂದು 10 ರಿಂದ 20 ವರ್ಷಗಳಾಗಿವೆ’ ಹೀಗೆ.. ‘ಗ್ರಾಮಾಯಣ’ಟೀಸರ್ ನಲ್ಲಿ ಜನಸಾಮಾನ್ಯರು ಹೇಳುವುದನ್ನು ನೋಡಬಹುದು. ಸದ್ಯ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಊರು ಬಿಟ್ಟು ಬಂದವರ ಕಥೆ

ದುಡಿಮೆಗಾಗಿ ಹುಟ್ಟಿ ಬೆಳೆದಿದ್ದ ಊರನ್ನು ಬಿಟ್ಟು ದೊಡ್ಡ ಪಟ್ಟಣಗಳಲ್ಲಿ ಬದುಕನ್ನು ರೂಪಿಸಿಕೊಂಡವರ ಅನಿಸಿಕೆಗಳನ್ನು ನಾವು ಈ ಟೀಸರ್ ನಲ್ಲಿ ನೋಡಬಹುದು. ಇನ್ನು ರಾಜ್ ಕುಮಾರ್ ಅವರು ಹುಟ್ಟಿ ಬೆಳೆದಿದ್ದ ತಮ್ಮ ಗಾಜನೂರಿನ ಮನೆಯ ಬಗ್ಗೆ ಹೇಳುವುದನ್ನು ಕೇಳುತ್ತಾ ನಮಗೂ ಒಂದು ಕ್ಷಣ ಭಾವುಕತೆ ಉಂಟಾಗುತ್ತದೆ. ಮನಸ್ಸು ಮತ್ತೆ ನಮ್ಮ ಊರಿನತ್ತ ಹೊರಡುತ್ತದೆ.

ಒಂದೇ ವೇದಿಕೆಯಲ್ಲಿ ಡಾ. ರಾಜ್ ಪುತ್ರರು

ನಿನ್ನೆ ಸಂಜೆ ‘ಗ್ರಾಮಾಯಣ’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಈ ಸಮಾರಂಭದಲ್ಲಿ ಡಾ. ರಾಜ್ ಕುಮಾರ್ ಅವರ ಮೂವರು ಮಕ್ಕಳು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಗಮನ ಸೆಳೆದರು. ಇನ್ನು ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್ ಹಾಗೂ ಚಿತ್ರತಂಡದ ಕೆಲವರು ಪಂಚೆ ಧರಿಸಿದ್ದು ಗಮನ ಸೆಳೆಯಿತು.

ಹಳ್ಳಿಸೊಡಗಿನ ಚಿತ್ರ

‘ಅನಂತು ವರ್ಸಸ್ ನುಸ್ರತ್’ ಚಿತ್ರದ ನಂತರ ವಿನಯ್ ರಾಜ್ ಕುಮಾರ್ ಒಪ್ಪಿಕೊಂಡಿರುವ ನಾಲ್ಕನೆಯ ಚಿತ್ರ ‘ಗ್ರಾಮಾಯಣ’ . ಈಗಾಗಲೇ ತನ್ನ ಮೊದಲ ನೋಟದಿಂದ ಗಮನ ಸೆಳೆದಿದ್ದಈ ಚಿತ್ರವು , ಇಂದು ಟೀಸರ್ ನಿಂದ ಮತ್ತೊಮ್ಮೆ ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ರಂಗಭೂಮಿ ಪ್ರತಿಭೆ ದೇವನೂರು ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ಸಂಪೂರ್ಣವಾಗಿ ಹಳ್ಳಿ ವಾತಾವಾರಣದಲ್ಲಿ ನಡೆಯುತ್ತದೆ.

Tags