ಸುದ್ದಿಗಳು

ಲುಂಗಿ ತೊಟ್ಟು ಪೋಸ್ಟರ್ ಗೆ ಪೋಸ್ ನೀಡಿದ ಡಾ. ರಾಜ್ ಮೊಮ್ಮಗ

ಗ್ರಾಮ ಗ್ರಾಮಗಳಲ್ಲಿ ನಡೆಯುವ ಇಂದಿನ ರಾಮಾಯಣವೇ 'ಗ್ರಾಮಾಯಣ'

‘ಅನಂತು ವರ್ಸಸ್ ನುಸ್ರತ್’ ಚಿತ್ರದ ನಂತರ ವಿನಯ್ ರಾಜ್ ಕುಮಾರ್ ಒಪ್ಪಿಕೊಂಡಿರುವ ನಾಲ‍್ಕನೆಯ ಸಿನಿಮಾ ‘ಗ್ರಾಮಾಯಣ’. ಸದ್ಯ ಈ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಈ ಪೋಸ್ಟರ್ ನಲ್ಲಿ ವಿನಯ್ ಅವರು ಲುಂಗಿ ತೊಟ್ಟು ಪೋಸ್ ಕೊಟ್ಟಿದ್ದಾರೆ.

ಬೆಂಗಳೂರು, ಆ.21: ಅಸಲಿಗೆ ಭಾರತ ಎಂದರೆ ಬೆಳಕನ್ನು ನೀಡುವ ದೇಶ. ಯಾವ ಬೆಳಕು ಅಂತಿರಾ..?? ಜ್ಞಾನದ ಬೆಳಕು, ಸುಜ್ಞಾನದ ಬೆಳಕು, ತ್ರೇತಾಯುಗದ ಕಾಲದಲ್ಲಿ ನಡೆದ ‘ರಾಮಾಯಣ’ ಆನಂತರದ ದ್ವಾರಪರದ ಯುಗದಲ್ಲಿ ನಡೆದ ‘ಮಹಾಭಾರತ’ , ‘ಕುರುಕ್ಷೇತ್ರ’ದ ಯುದ್ದದಿಂದ ಮೊದಲ್ಗೊಂಡು ಕಲಿಯುಗದ 19 , 20 ನೇ ಶತಮಾನದ ಗಾಂಧಿಯವರೆಗೆ ಇಂದಿನ ಪ್ರಸಕ್ತ ಸಮಾಜ ಲೇವಡಿ ಮಾಡುವ ಹುನ್ನಾರದಲ್ಲಿದೆ.

‘ರಾಮಾಯಣ’, ‘ಮಹಾಭಾರತ’ಗಳ ಉದಾತ್ತತೆ, ನೈತಿಕ ಮೌಲ್ಯಗಳು ಇಂದಿಗೆ ಅಪ್ರಸ್ತುತವಾಗಿ ಇಂದಿನ ದೈನಂದಿನ ಜೀವನ ಮೌಲ್ಯಗಳು ಕುಸಿಯುತ್ತಿರುವಲ್ಲಿ ಅಂದಿನ ‘ರಾಮಾಯಣ’, ‘ಮಹಾಭಾರತ, ‘ಗಾಂಧಿ’… ಈ ಹೆಸರೇಗಳೇ ಅಪಂಭ್ರಶವಾಗಿದೆಯೇನೋ?.. ಹಾಗಾಗಿಯೇ ಮನೆ ಮನೆಯ ಕಥೆಗಳನ್ನು, ಬವಣೆಗಳನ್ನು ‘ಇಂಟೆಟಿ ರಾಮಾಯಣ’ವಾಗಿ, ‘ಇಂದಿನ ರಾಮಾಯಣ’ವಾಗಿ ಬಿಂಬಿತವಾಗುತ್ತಿರುವುದು ದುರಾದೃಷ್ಟಕರವಾದರೂ ಅನಿವಾರ್ಯ.

ಈ ನಿಟ್ಟಿನಲ್ಲೇ ಗ್ರಾಮ ಗ್ರಾಮಗಳಲ್ಲೇ ಇಂದು ನಡೆಯುತ್ತಿರುವ ಕೋಲಾಹಲಗಳು, ರಾಜಕೀಯಗಳು, ಒಡೆಯುತ್ತಿರುವ ಅವಿಭಕ್ತ ಕುಟುಂಬಗಳು, ಗ್ರಾಮಗಳಿಂದ ವಲಸೆ ಹೋಗಿ ನಗರವಾಸಿಗಳಾಗಿ ವೃದ್ದ ತಂದೆ-ತಾಯಿಯರನ್ನು ಗ್ರಾಮದಲ್ಲಿ ಉಳಿಸಿ ಐಶಾರಾಮಿ ಜೀವನಕ್ಕೆ ಮಾರು ಹೋದ ಮಂದಿ… ಇವೆಲ್ಲದರ ಸಮಗ್ರ ಚಿತ್ರಣ ‘ಗ್ರಾಮಾಯಣ’ದಲ್ಲಿ ರಾಮಾಯಣ ಎಂದಾಗ ದುತ್ತೆಂದು ಕಣ್ಣ ಮುಂದೆ ಗೋಚರವಾಗುತ್ತದೆ. ಈ ವಿಶ್ಲೇಷಣೆ ನಡೆಯುತ್ತಿರುವಾಗಲೇ ನಿಮ್ಮ ಮುಂದೆ ‘ಗ್ರಾಮಾಯಣ’ ಎಂಬ ಶೀರ್ಷಿಕೆ ಹೊತ್ತ ಚಿತ್ರ ತಯಾರಿ ಹಂತದಲ್ಲಿದೆ.

ಡಾ. ರಾಜ್ ಮೊಮ್ಮಗನ ಚಿತ್ರ

ವರನಟ ಡಾ. ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ‘ಸಿದ್ದಾರ್ಥ’,’ರನ್ ಆ್ಯಂಟನಿ’ ಚಿತ್ರಗಳ ಬಳಿಕ ಉತ್ತಮ ಪಾತ್ರ ಮತ್ತು ಕಥೆಗಾಗಿ ಕಾಯುತ್ತಿದ್ದರು. ಅದಕ್ಕಾಗಿ ಒಪ್ಪಿಕೊಂಡಿದ್ದ ‘ಅಪ್ಪ ಅಮ್ಮ ಪ್ರೀತಿ’ ಚಿತ್ರವನ್ನು ಮುಂದಕ್ಕೆ ಹಾಕಿದ್ದರು.

ಗ್ರಾಮಾಯಣ

‘ಅನಂತು ವರ್ಸಸ್ ನುಸ್ರತ್’ ಚಿತ್ರದ ನಂತರ ವಿನಯ್ ರಾಜ್ ಕುಮಾರ್ ಒಪ್ಪಿಕೊಂಡಿರುವ ನಾಲ‍್ಕನೆಯ ಸಿನಿಮಾ. ಸದ್ಯ ಈ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆಯುತ್ತಿದೆ. ಈ ಪೋಸ್ಟರ್ ನಲ್ಲಿ ವಿನಯ್ ಅವರು ಲುಂಗಿ ತೊಟ್ಟು ಪೋಸ್ ಕೊಟ್ಟಿದ್ದಾರೆ.

ಹಳ್ಳಿ ಸೊಗಡಿನ ಚಿತ್ರ

ವಿನಯ್ ನಟಿಸಿರುವ ಚಿತ್ರಗಳೆಲ್ಲವೂ ಮಾಸ್ ಚಿತ್ರಗಳಾಗಿದ್ದವು. ಇದೇ ಮೊದಲ ಬಾರಿಗೆ ಅವರು ಹಳ್ಳಿಯ ಹಿನ್ನಲೆಯುಳ್ಳ ಚಿತ್ರದಲ್ಲಿ ನಟಿಸುತ್ತಿರುವುದು . ಈ ಚಿತ್ರವನ್ನು ರಂಗಭೂಮಿ ಪ್ರತಿಭೆ ದೇವನೂರು ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ಸಂಪೂರ್ಣವಾಗಿ ಹಳ್ಳಿ ವಾತಾವಾರಣದಲ್ಲಿ ನಡೆಯುತ್ತದೆ.

ಈಗಾಗಲೇ ಹಳ್ಳಿಯ ಸೊಡಗಿನ ಚಿತ್ರಗಳನ್ನು ಮಾಡಿ ವರನಟ ಡಾ, ರಾಜ್ ಕುಮಾರ ಮತ್ತು ಶಿವರಾಜ್ ಕುಮಾರ್ ಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ವಿನಯ್ ಅವರು ಸಹ ಮುಂದುವರೆದಿರುವುದು ಸಿನಿಪ್ರೇಮಿಗಳಲ್ಲಿ ಖುಷಿ ಕೊಟ್ಟಿದೆ.

ಕಥೆ ಮೆಚ್ಚಿಕೊಂಡ ರಾಘಣ್ಣ

ಚಿತ್ರದ ಕಥೆಯನ್ನು ಕೇಳಿದ ತಕ್ಷಣವೇ ಮೆಚ್ಚಿಕೊಂಡು ರಾಘವೇಂದ್ರ ರಾಜ್ ಕುಮಾರ್ ಅವರು ಈ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ವಿಭಿನ್ನ ಕಥಾ ಹಂದರದ ಈ ಚಿತ್ರಕ್ಕೆ ಎನ್.ಎಲ್.ಎನ್ ಸ್ವಾಮಿ ನಿರ್ಮಾಪಕರಾಗಿದ್ದು, ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ಟೀಸರ್ ಸೆಪ್ಟೆಂಬರ್ 9ಕ್ಕೆ ಬಿಡುಗಡೆಯಾಗಲಿದೆ.

ರಾಜ್ಯದ ಎಲ್ಲ ಕಡೆಯೂ ಅದ್ಭುತವಾಗಿ ಮಳೆಯಾದರೂ ಕಡೂರು, ಸಿಂಗಟಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಕೆಲ ಊರುಗಳಲ್ಲಿ ಬರ ಎಂಬುದು ಎಂದಿಂದಿಗೂ ಇರುತ್ತದೆ. ಅಂತಹ ಒಂದು ಹಳ್ಳಿಯ ಕಥೆ ‘ಗ್ರಾಮಾಯಣ’ದಲ್ಲಿದೆ. ಈ ಮೇಲಿನ ಭಾಗದ ಭಾಷೆ ಈ ಚಿತ್ರದಲ್ಲಿ ಬಳಕೆ ಮಾಡುತ್ತಾರಂತೆ ನಿರ್ದೇಶಕರಾದ ದೇವನೂರು ಚಂದ್ರು.

Tags