ಸುದ್ದಿಗಳು

‘ಗ್ರಾಮಾಯಣ’ ಸಿನಿಮಾ ನಿಂತಿಲ್ಲ, ಸುಮ್ಮನೇ ಗಾಳಿ ಸುದ್ದಿ ಹಬ್ಬಿಸಬೇಡಿ

ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ಸಿನಿಮಾ

ಬೆಂಗಳೂರು.ಮಾ.15: ದೇವನೂರು ಚಂದ್ರು ನಿರ್ದೇಶನದ ‘ಗ್ರಾಮಾಯಣ’ ಚಿತ್ರವು ನಿಂತು ಹೋಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಚಿತ್ರತಂಡದವರು ತಮ್ಮ ಚಿತ್ರ ನಿಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೌದು, ಇತ್ತಿಚೆಗೆ ‘ಗ್ರಾಮಾಯಣ’ ಸಿನಿಮಾ ನಿಂತು ಹೋಗಿದ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದಕ್ಕೆ ಕಾರಣ ನಿರ್ಮಾಪಕ ಎಲ್ ಎಲ್ ಎನ್ ಮೂರ್ತಿ ಅವರಿಗೆ ಎದುರಾದ ಹಣಕಾಸಿನ ಸಮಸ್ಯೆ. ಮೂಲದ ಪ್ರಕಾರ ಈ ಸಿನಿಮಾ ಕೆಲವು ದಿನಗಳ ಮಟ್ಟಿಗೆ ನಿಂತಿತ್ತು. ಈಗ ಮತ್ತೆ ಚಿತ್ರಕ್ಕೆ ಜೀವ ಬಂದಿದೆ.

ಅಂದ ಹಾಗೆ ವಿನಯ್ ನಟಿಸಿರುವ ‘ಸಿದ್ದಾರ್ಥ’ ಹಾಗೂ ‘ರನ್ ಆ್ಯಂಟನಿ’ ಚಿತ್ರಗಳು ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಈ ನಡುವೆ ‘ಅನಂತು ವರ್ಸಸ್ ನುಸ್ರತ್’ ಚಿತ್ರವು ಯಶಸ್ವಿಯಾಗಿತ್ತು. ಕಲೆಕ್ಷನ್ ವಿಚಾರದಲ್ಲಿಯೂ ಸಹ ಸದ್ದು ಮಾಡಿತ್ತು. ಇದು ಇವರ ನಾಲ್ಕನೆಯ ಸಿನಿಮಾವಾಗಿದೆ.

ಇನ್ನು ಈ ಚಿತ್ರದಲ್ಲಿ ವಿನಯ್ ಹಳ್ಳಿಹುಡುಗ ಸಿಕ್ಸ್ ಸೆನ್ಸ್ ಸೀನನಾಗಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಅಮೃತಾ ಅಯ್ಯರ್ ನಟಿಸಿದ್ದಾರೆ. ಹಾಗೆಯೇ ಚಿತ್ರದ ಟೀಸರ್ ಸಹ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಹಳ್ಳಿ ಬಿಟ್ಟು ಬೇರೆ ಬೇರೆ ನಗರ, ದೇಶಗಳಲ್ಲಿ ವಾಸಿಸುತ್ತಿರುವವರು ತಮ್ಮ ಹಳ್ಳಿಯನ್ನು ನೆನಪಿಸಿಕೊಂಡ ದೃಶ್ಯಗಳನ್ನು ಒಳಗೊಂಡ ಟೀಸರ್ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿತ್ತು.

ಇಡೀ ಚಿತ್ರದಲ್ಲಿ ಹಳ್ಳಿಯ ಯುವಕರು ಪಟ್ಟಣದಲ್ಲಿ ನೆಲೆ ಕಾಣಲು ಪಡುವ ಹೋರಾಟದ ಹಿನ್ನೆಲೆಯ ಜೊತೆಗೆ, ಅಲ್ಲಿನ ಜನರ ಮುಗ್ಧತೆ, ಸಂಸ್ಕೃತಿ, ಹಳ್ಳಿ ಜೀವನದ ಸೊಗಡು ತೋರಿಸಲಾಗುತ್ತಿದೆ. ಈ ಚಿತ್ರವನ್ನು ರಂಗಭೂಮಿ ಪ್ರತಿಭೆ ದೇವನೂರು ಚಂದ್ರು ನಿರ್ದೇಶನ ಮಾಡುತ್ತಿದ್ದು, ಚಿತ್ರವು ಸಂಪೂರ್ಣವಾಗಿ ಹಳ್ಳಿ ವಾತಾವಾರಣದಲ್ಲಿ ನಡೆಯುತ್ತದೆ.

ಏಪ್ರಿಲ್ 12 ರಂದು ಮೋದಿ ಬಯೋಪಿಕ್!!

#gramayana, #notstopped, #balkaninews #vinayrajkumar, #amruthaiyyer, #kannadasuddigalu

Tags