ಸುದ್ದಿಗಳು

ಗ್ರ್ಯಾಮಿ ಅವಾರ್ಡ್ಸ್ ನ ಆತಿಥೇಯ ವಹಿಸುತ್ತಿರುವ ಗಾಯಕಿ

ಫೆಬ್ರವರಿ 11ರಂದು ನಡೆಯಲಿರುವ ಗ್ರ್ಯಾಮಿ ಪ್ರಶಸ್ತಿ ವಿತರಣಾ ಸಮಾರಂಭ

ಬೆಂಗಳೂರು, ಜ.16:

ಹಾಲಿವುಡ್ ಜನಪ್ರಿಯ ಗಾಯಕಿ ಅಲಿಸಿಯಾ ಕೀಸ್ ಅವರು 2019ರ ಗ್ರ್ಯಾಮಿ ಪ್ರಶಸ್ತಿ ವಿತರಣಾ ಸಮಾರಂಭದ ಆತಿಥೇಯ ವಹಿಸಲಿದ್ದಾರೆ. 37ರ ಹರೆಯದ ಗಾಯಕಿ ತನ್ನ ಸಾಮಾಜಿಕ ಮಾಧ್ಯಮ ಚಾನೆಲ್ಗಳಲ್ಲಿ ಒಂದು ಹಿನ್ನಲೆ ದೃಶ್ಯಗಳ ವಿಡಿಯೋದಲ್ಲಿ ಪ್ರಕಟಣೆ ಮಾಡಿದ್ದಾರೆ.

“ಇದು ಅಧಿಕೃತ! 15 ಬಾರಿ ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿರುವ @ ಅಲಿಸಿಯಾ ಕೀಸ್ 61ನೇ # ಗ್ರ್ಯಾಮಿ ಪ್ರಶಸ್ತಿ ವಿತರಣಾ ಸಮಾರಂಭದ ಆತಿಥ್ಯ ವಹಿಸಲಿದ್ದು, ಸಂಗೀತದ ಅತಿ ದೊಡ್ಡ ನೈಟ್‍ ನ ಸಮಾರಂಭದ ಮುಖ್ಯಸ್ಥರಾಗಿ ಮೊದಲ ಬಾರಿಗೆ ಗುರುತಿಸಿಕೊಳ್ಳಲಿದ್ದಾರೆ” ಎಂದು ಅಧಿಕೃತ ಗ್ರ್ಯಾಮ್ಮೀಸ್ ಟ್ವಿಟ್ಟರ್ ಖಾತೆಯ ಮೂಲಕ ಪ್ರಕಟಿಸಿದ್ದಾರೆ. ಈ ಪ್ರಶಸ್ತಿ ವಿತರಣಾ ಸಮಾರಂಭ ಫೆಬ್ರವರಿ 11ರಂದು ನಡೆಯಲಿವೆ.

“>

Tags