ಸುದ್ದಿಗಳು

ಇದೇ ಜೂನ್ 12ರಂದು ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದ ಹಾಡು ಬಿಡುಗಡೆ

‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಸಿನಿಮಾ ರಂಗದಲ್ಲಿ ದೊಡ್ಡ ಸದ್ದು ಮಾಡಿದ್ದ ನಟ – ನಿರ್ದೇಶಕ ರಾಜ್ ಬಿ ಶೆಟ್ಟಿ ಇವರೀಗ ಗುಬ್ಬಿಯ ಅವತಾರ ತಾಳಿದ್ದು, ಸುಜಯ್ ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರಕ್ಕೆ ನಟಿಯರಾದ ಶುಭಾ ಪೂಂಜಾ, ಕಾರುಣ್ಯ ರಾಮ್, ರಚನಾ ಹೊಸ ಸೇರ್ಪಡೆಯಾಗಿದ್ದಾರೆ. ಹೌದು, ಈ ಮೂವರು ನಾಯಕಿಯರು ಇದೀಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ವಿಶೇಷವಾದ ಹಾಡಿಗೆ ನೃತ್ಯ ಮಾಡಿದ್ದಾರೆ.

Image result for raj b shetty and kavitha gowda Gubbi Mele Brahmastra kannada movie song relesed

ಹೌದು, ಶುಭಾ ಪೂಂಜಾ, ಕಾರುಣ್ಯ ರಾಮ್, ರಚನಾ ಈ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದು, ಇದೇ ಜೂನ್ 12ರಂದು ಕ್ರಿಸ್ಟಲ್ ಪಾರ್ಕ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ ಹಾಡು ಬಿಡುಗಡೆಯಾಗಲಿದೆ. ಇಷ್ಟೇ ಅಲ್ಲದೇ ಈ ಮೂವರು ಬೆಡಗಿಯರು ರಾಜ್ ಬಿ ಶೆಟ್ಟಿಯವರ ಜೊತೆ ನೃತ್ಯ ಮಾಡುವ  ವಿಡಿಯೋ ಇದಾಗಿದೆ.

ಈ ಸಿನಿಮಾದ ಬಗ್ಗೆ ಹೇಳುವುದಾದರೆ, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಸಂಸ್ಥೇಯಡಿ ಟಿ. ಆರ್ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಯೋಜನೆ ಮಾಡಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್ ಗಳು ಪ್ರಾಮಿಸಿಂಗ್ ಆಗಿದ್ದು, ಕಾರ್ಪೊರೇಟ್ ಲುಕ್ ನಲ್ಲಿ ರಾಜ್ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ಕವಿತಾ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಈಗಾಗಲೇ ‘ಒಂದು ಮೊಟ್ಟೆಯ ಕಥೆ’ ಹಾಗೂ ‘ಅಮ್ಮಚ್ಚಿ ಎಂಬ ನೆನಪು’ ಚಿತ್ರಗಳ ಮೂಲಕ ಗಮನ ಸೆಳೆದಿರುವ ರಾಜ್ ಬಿ ಶೆಟ್ಟಿ ಸದ್ಯ ಈ ಚಿತ್ರವು ಸೇರಿ ‘ಮಾಯಾ ಬಜಾರ್’, ‘ರಾಮನ ಅವತಾರ’, ‘ಮಹಿರಾ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Image may contain: 19 people, people smiling

Image may contain: 4 people, people smiling, outdoor

Image result for raj b shetty and kavitha gowda Gubbi Mele Brahmastra kannada movie song relesed

 

ರಕ್ಷಿತಾ ಸಹೋದರನ ಚಿತ್ರಕ್ಕೆ ಡಿಂಪಲ್ ಕ್ವೀನ್ ನಾಯಕಿ!!?!!

#rajbshetty #balkaninews #sandalwood #crystalpaarkcinemasyoutubechannel #rajbshettyandkavithagowda

Tags