ಸುದ್ದಿಗಳು

ಬಿಡುಗಡೆಗೂ ಮುನ್ನವೇ ತೆಲುಗು ಮಲಯಾಳಂ ನಲ್ಲಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ರಿಮೇಕ್

ರಾಜ್ ಬಿ ಶೆಟ್ಟಿ ಹಾಗೂ ಕವಿತಾ ಗೌಡ ಅಭಿನಯದ ಬಹುನಿರೀಕ್ಷಿತ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಇದೇ ಆಗಸ್ಟ್  15ರಂದು ಬಿಡುಗಡೆಯಾಗುತ್ತಿದ್ದು,  ಇದೀಗ ಚಿತ್ರತಂಡದಿಂದ ಸಿಹಿಯೊಂದು ಹೊರಬಿದ್ದಿದೆ.

ಹೌದು, ಬಿಡುಗಡೆಗೂ ಮುನ್ನವೇ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ಯಶಸ್ಸನ್ನು ತಮ್ಮದಾಗಿಸಿಕೊಂಡಿದೆ. ಬಹುತೇಕ ಚಿತ್ರ ಬಿಡುಗಡೆಯಾದ ನಂತರ ಕಥೆ ಚೆನ್ನಾಗಿ ಹಿಟ್ ಆಗಿದ್ದರೇ, ಮಾತ್ರ ಬೇರೆ ಭಾಷೆಯಲ್ಲಿ ರಿಮೇಕ್ ಮಾಡಲು ರೈಟ್ಸ್ ತೆಗೆದುಕೊಳ್ಳುತ್ತಾರೆ. ಆದರೆ, ರಿಲೀಸ್ ಗೂ ಮುನ್ನವೇ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ತೆಲುಗು  ಹಾಗೂ ಮಲಯಾಳಂ ಭಾಷೆಯಲ್ಲಿ  ಭಾರೀ ಮೊತ್ತಕ್ಕೆ ರಿಮೇಕ್ ರೈಟ್ಸ್ ಮಾರಾಟವಾಗಿದೆ.

ಇದೊಂದು ಹಾಸ್ಯ ಪ್ರಧಾನ ಸಿನಿಮಾವಾಗಿದ್ದು, ರಾಜ್ ಬಿ ಶೆಟ್ಟಿ ಮತ್ತು ಕವಿತಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ನಟ ಪ್ರಮೋದ್ ಶೆಟ್ಟಿ ಕಾಮಿಡಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೋಭರಾಜ್, ಬಾಬು ಹಿರೇಮಠ, ಮಂಜುನಾಥ್ ಹೆಗಡೆ, ಅರುಣಾ ಬಾಲರಾಜ್ ಸೇರಿದಂತೆ ಅನೇಕರು ನಟಿಸಿದ್ದು, ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಟಿ ಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ಸುಜಯ್ ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಮೋಹಕ ತಾರೆ ರಮ್ಯಾ..!!!

#gubbimelebrahmastra #gubbimelebrahmastrakannadamovie #gubbimelebrahmastrasongs #gubbimelebrahmastraremakerights #gubbimelebrahmastraremake #rajbshettyandkavithagowda

Tags