ಸುದ್ದಿಗಳು

ಮದಗಜ ಸಿನಿಮಾದ ಹೀರೋಯಿನ್ ಯಾರು ..?

ಸೆಟ್ಟೇರಲಿದೆ ಮದಗಜ ಸಿನಿಮಾದ ನಾಯಕಿ ಯಾರು ಗೊತ್ತಾ...?

ಈಗಾಗಲೇ ತಮ್ಮ ಮೊದಲ ಸಿನಿಮಾ ಅಯೋಗ್ಯ  ಮೂಲಕವೇ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಎನಿಸಿರುವ ಮಹೇಶ್ ಗೌಡ. ಸದ್ಯ ಶ್ರೀ ಮುರುಳಿಯವರ ಜೊತೆ ಮದಗಜ ಸಿನಿಮಾ ಮಾಡುತ್ತಿರುವ ವಿಷಯ ಗೊತ್ತೇ ಮದಗಜ,  ಭರಾಟೆ ಸಿನಿಮಾದ ನಂತರ ಸೆಟ್ಟೇರಿರುವ ಸಿನಿಮಾ. ಸದ್ಯ ಯಾರಾಗಲಿದ್ದಾರೆ ಈ ಸಿನಿಮಾದ ನಾಯಕಿ ಎಂಬ ಕುತೂಹಲ ನಿರೀಕ್ಷೆ ಸ್ಯಾಂಡಲ್‌ವುಡ್ ನಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿದೆ.

ಮಹೇಶ್ ನಾಯಕಿ ಯಾರಿರಬಹುದು ಎಂದು ಊಹಿಸಿ ಎಂದು ಒಂದು ಪೋಸ್ಟರ್ ಮೂಲಕ ಕೇಳಿದಾಗ ಆಶಿಕಾ ರಂಗನಾಥ್, ಅದಿತಿ ಪ್ರಭುದೇವ, ರಚಿತ ರಾಮ್, ಸಮಂತ ಎಂದು ಎಲ್ಲೆಡೆ ಸುದ್ದಿ ಹರಿದಾಡಿದೆ. ಆದರೆ   ನಾಯಕಿ ಯಾರೆಂದು ತಿಳಿಯಬೇಕಾದರೆ ನಾಳೆ ಸಂಜೆ 6 ಗಂಟೆಯವರೆಗೂ ಕಾಯಬೇಕೆಂದು ಹೇಳುತ್ತಿದ್ದಾರೆ ಡೈರೆಕ್ಟರ್ ಮಹೇಶ್ ಗೌಡ. ಇದೇ ಫೆಬ್ರವರಿ 20 ರಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

#Madagaja #SriMurali #MaheshGowda #GuessTheHeroine #KannadaCinema #BalkaniNewsKannada

Tags