ಸುದ್ದಿಗಳು

ನರೇಂದ್ರ ಮೋದಿಯವರ ಬಯೋಪಿಕ್ ವೀಕ್ಷಣೆ ಮಾಡಿದ ಗುಜರಾತ್ ಸಿಎಂ ವಿಜಯ್ ರುಪಾಣಿ

ಮುಂಬೈ, ಮೇ.23:

ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಬಹಳಷ್ಟು ವಿಚಾರಗಳಿಂದ ಸುದ್ದಿಯಾದ ಈ ಸಿನಿಮಾಗಾಗಿ ಅಭಿಮಾನಿಗಳು ಕೂಡ ಕಾದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಕೂಡ ಸಕ್ಕತ್ ಸೌಂಡ್ ಮಾಡಿತ್ತು. ಇದೀಗ ಈ ಸಿನಿಮಾವನ್ನು ಗುಜರಾತ್ ಸಿಎಂ ವೀಕ್ಷಣೆ ಮಾಡಿದ್ದಾರೆ.

ವಿಶೇಷ ಸ್ಕ್ರೀನ್ ನಲ್ಲಿ ಸಿನಿಮಾ ವೀಕ್ಷಣೆ

ಹೌದು, ಸದ್ಯ ಮೋದಿಯವರ ಬಯೋಪಿಕ್ ಸಿನಿಮಾವನ್ನು ಗುಜರಾತ್ ಸಿಎಂ ವಿಜಯ್ ರುಪಾಣಿ ವೀಕ್ಷಣೆ ಮಾಡಿದ್ದಾರೆ. ಅಹ್ಮದಾಬಾದ್ ನಲ್ಲಿ ವಿಶೇಷ ಸ್ಕ್ರೀನ್ ನಲ್ಲಿ ಸಿನಿಮಾ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ಗುಜರಾತ್ ಸಿಎಂ ಸಿನಿಮಾ ವೀಕ್ಷಣೆ ಮಾಡಿದ್ದು,  ಇವರ ಜೊತೆಗೆ ವಿವೇಕ್ ಒಬೆರಾಯ್ ಕೂಡ ಭಾಗಿಯಾಗಿದ್ದಾರೆ.

ನಾಳೆ ಸಿನಿಮಾ ಬಿಡುಗಡೆ

ಪಿಎಂ ನರೇಂದ್ರ ಮೋದಿ ಬಯೋಪಿಕ್ ಚಿತ್ರದಲ್ಲಿ ಬಹುಭಾಷಾ ನಟ ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ನಟಿಸಿದ್ದು, ಒಮಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಚುನಾವಣೆ ಸಂಬಂಧ ಸಿನಿಮಾ ಮುಂದೂಡಿಕೆಯಾಗುತ್ತಲೇ ಇತ್ತು. ಆದರೆ ಇಂದಿಗೆ ಚುನಾವಣೆ ನೀತಿ ಸಂಹಿತೆ ಮುಗಿಯುವುದರಿಂದ ನಾಳೆ ಸಿನಿಮಾ ಬಿಡುಗಡೆಯಾಗಲಿದೆ.

ವೈರಲ್ ಆಯ್ತು ವಿವಾಹ ಆಮಂತ್ರಣ ಪತ್ರಿಕೆಯಲ್ಲಿನ ನಿಖಿಲ್ ಕುಮಾರಸ್ವಾಮಿ ಭಾವಚಿತ್ರ

#balkaninews #gujaratcm #narendramodibiopic #biopicmovies #vivekoberoi

Tags