ಸುದ್ದಿಗಳು

‘ಗುಲ್ಲಿ ಬಾಯ್’ ತೆಲುಗು ರಿಮೇಕ್ ನಲ್ಲಿ ವಿಜಯ್ ದೇವರಕೊಂಡ!!?!!

ಹೈದರಾಬಾದ್,ಏ.16: ಯುವ ಮತ್ತು ಪ್ರತಿಭಾನ್ವಿತ ನಟ ವಿಜಯ್ ದೇವರಾಕೊಂಡ ರಣವೀರ್ ಸಿಂಗ್, ಆಲಿಯಾ ಭಟ್ ಅಭಿನಯದ ಗುಲ್ಲಿ ಬಾಯ್ ಚಿತ್ರದ ತೆಲುಗು ರೀಮೇಕ್ ನಲ್ಲಿ ನಟಿಸಸುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬಂದಿದ್ದವು.. ಇದಿಂದು ರಾಪರ್ ಹಾಡುಗಾರನ ಚಿತ್ರವಾಗಿದ್ದು ಜೋಯಾ ಅಖ್ತರ್ ನಿರ್ದೇಶಿಸಿದ್ದು ರೀಮಾ ಕಾಗ್ತಿ  ಕೂಡ ಇದಕ್ಕೆ ಬರೆದಿದ್ದು 2019 ರ ಬಾಲಿವುಡ್ ಚಿತ್ರದಲ್ಲಿ ಎರಡನೆಯ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿ ಹೊರಹೊಮ್ಮಿದೆ… ಗುಲ್ಲಿ ಬಾಯ್ ತೆಲುಗು ರೀಮೇಕ್ ಚಿತ್ರದಲ್ಲಿ ರಣವೀರ್ ಸಿಂಗ್ ಪಾತ್ರವನ್ನು ವಿಜಯ್ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದರೂ  ತೆಲುಗು ಆವೃತ್ತಿಗೆ ಸಹಿ ಮಾಡಲಿಲ್ಲವಂತೆ.
Related image

ಗುಲ್ಲಿ ಬಾಯ್ ತೆಲುಗು ರೀಮೇಕ್ ನಲ್ಲಿ ನಟಿಸಲ್ಲ

ಅರ್ಜುನ್ ರೆಡ್ಡಿ ನಟ ವಿಜಯ್ ಗುಲ್ಲಿ ಬಾಯ್ ತೆಲುಗು ರೀಮೇಕ್ ನ ಭಾಗವಾಗಿಲ್ಲ ಎಂದು ವಿಜಯ್ ದೇವರಾಕೊಂಡ ಆಪ್ತ ವಲಯಗಳು ಸ್ಪಷ್ಟಪಡಿಸಿವೆ… ಮತ್ತೊಂದೆಡೆ, ತೆಲುಗು ರೀಮೇಕ್ಗಾಗಿ ಈಗಾಗಲೇ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಗಳ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಹೊಮ್ಮಲಿದೆ ಎಂದು ನಿರೀಕ್ಷಿಸಲಾಗಿದೆ.

ರಣವೀರ್ ಸಿಂಗ್ ಅಭಿನಯಿಸಿದ 83, ಚಿತ್ರ 1983 ರ ವಿಶ್ವಕಪ್ ವಿಜಯವನ್ನು ಆಧರಿಸಿ, ಕಬೀರ್ ಖಾನ್ ನಿರ್ದೇಶಿಸಿದ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ವಿಜಯ್ ಅಭಿನಯಿಸಲಿದ್ದಾರೆ ಎಂಬ ವದಂತಿ ಇತ್ತು . ಇದರಲ್ಲಿ ರಣವೀರ್ ನಾಯಕ ಕಪಿಲ್ ದೇವ್ ಪಾತ್ರವನ್ನು ವಹಿಸಲಿದ್ದಾರೆ. ನಂತರ ತಯಾರಕರು ವಿಜಯ ದೇವರಾಕೊಂಡ ಬದಲು ಜೀವಾ ರನ್ನು ಆಯ್ಕೆ ಮಾಡಿದರು.

ನೀಲಿ ಸುಂದರಿ ನೇರಳೆ ಹಣ್ಣು

#vijay #bollywood #gukkyboy #remake

Tags