ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

ಹೊಸಬರ ‘ಹಫ್ತಾ’ ಚಿತ್ರಕ್ಕೆ ಸಿಕ್ತು ಜೋಗಿ ಪ್ರೇಮ್ ಸಾಥ್…!!!

ದೇವರೇ ದೇವರೇ.. ಎಂಬ ಸಾಲಿನ ಲಿರಿಕಲ್ ವಿಡಿಯೋ ಬಿಡುಗಡೆ

ಪ್ರಕಾಶ್ ಹೆಬ್ಬಾಳ ನಿರ್ದೇಶನದ ‘ಹಫ್ತಾ’ ಚಿತ್ರವು ಈಗಾಗಲೇ ಸಾಕಷ್ಟು ಸುದ್ದಿಗಳಿಂದ ಸದ್ದು ಮಾಡುತ್ತಿದೆ. ಇತ್ತಿಚೆಗೆ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ.

ಅಂದ ಹಾಗೆ ಈ ಚಿತ್ರದ ಮೂರನೇ ಹಾಡನ್ನು ನಟ-ನಿರ್ದೇಶಕ ‘ಜೋಗಿ’ ಪ್ರೇಮ್ ರಿಲೀಸ್ ಮಾಡಿ, ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. “ಈ ಚಿತ್ರದ ಸೆಂಟಿಮೆಂಟ್ ಹಾಡು ರಿಲೀಸ್ ಮಾಡಿದೆ. ನನಗಂತೂ ಇಷ್ಟವಾಯ್ತು, ನಮ್ಮ ವಿ ನಾಗೇಂದ್ರ ಪ್ರಸಾದ್ ರಚಿಸಿರುವ ಈ ಹಾಡನ್ನು ಮನಸ್ಸಿಗೆ ಇಷ್ಟವಾಗುತ್ತದೆ”

ದೇವರೇ ದೇವರೇ.. ಎಂಬ ಸಾಲುಗಳುಳ್ಳ ಈ ಹಾಡನ್ನು ಡಾ. ವಿ ನಾಗೇಂದ್ರ ಪ್ರಸಾದ್ ರಚಿಸಿದ್ದು, ವಿಜಯ್ ಯಾರ್ಡ್ಲೀ ಸಂಗೀತ ನೀಡಿದ್ದಾರೆ. ಹಾಡಿಗೆ ವಿಜಯ್ ಯೇಸುದಾಸ್ ಧ್ವನಿ ನೀಡಿದ್ದು, ಈ ಹಾಡು ಕೇಳಲು ಇಂಪಾಗಿದೆ.

ಇನ್ನು ಈ ಚಿತ್ರದಲ್ಲಿ ವರ್ಧನ ತೀರ್ಥಹಳ್ಳಿ ಮತ್ತು ರಾಘವ ನಾಗ್ ನಾಯಕನಟರಾಗಿ ಕಾಣಿಸಿಕೊಂಡಿದ್ದು, ಬಿಂಬ ಶ್ರೀ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೈತ್ರಿ ಮಂಜುನಾಥ್ ಬಾಲ್ ರಾಜ್ ಟಿ.ಸಿ.ಪಾಳ್ಯ ನಿರ್ಮಿಸಿದ್ದಾರೆ.

ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಅಲಂಕರಿಸಿದ ಕಾಮಿಡಿ ಕಿಂಗ್ ಶರಣ್

#jogiprem, #realsed, #hafta, #song, #balkaninews #filmnews, #kannadasuddigalu, #vardhan , #raghavnag

Tags