ಸುದ್ದಿಗಳು

ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಆಹಾರದ ಪಥ್ಯಗಳು ಇಲ್ಲಿವೆ ನೋಡಿ….

ನಮ್ಮ ಚರ್ಮ, ಉಗುರು, ಮತ್ತು ಕೂದಲು ನಮ್ಮ ಆರೋಗ್ಯ ಹೇಗಿದೆ ಎಂಬುದನ್ನು ಮೇಲ್ನೋಟಕ್ಕೆ ಹೇಳುತ್ತದೆ. ಕೆರಿಟನ್, ಕೊಲೆಜನ್ ಮತ್ತು ಎಲಾಸ್ಟಿನ್ ಸೇರಿದ ಪ್ರೋಟಿನ್ ನಿಂದ ರಚಿತವಾದ ಚರ್ಮ, ಕೂದಲು ಹಾಗೂ ಉಗುರುಗಳು, ನಮ್ಮ ದೇಹಾರೋಗ್ಯಾ ಮತ್ತು ದೇಹದಲ್ಲಿ ಯಾವ ಅಂಶ ಕಡಿಮೆಯಾಗಿದೆ ಎಂಬುದರ ಸೂಚಕವಾಗಿದೆ. ಮಾಂಸ, ಮೀನು, ಮೊಟ್ಟೆ ಮತ್ತು ಡೈರಿ ಪ್ರಾಡಕ್ಟ್ ಗಳಿಂದ ನಮ್ಮ ದೇಹಕ್ಕೆ ಪ್ರೋಟಿನ್ ಸಿಗುತ್ತದೆ. ಹೀಗಾಗಿ ಪ್ರತಿ  ದಿನ ಆಹಾರದಲ್ಲಿ ಮೀನು, ಮೊಟ್ಟೆ, ಮಾಂಸಹಾರ ಮತ್ತು ಹಾಲಿನ ಉತ್ಪನ್ನಗಳನ್ನು ಕೊಂಚ ಮಟ್ಟಿಗೆ ಬಳಸುವುದರಿಂದ ಸಹಕಾರಿಯಾಗುತ್ತದೆ.ಕೂದಲು, ಚರ್ಮ ಮತ್ತು ಉಗುರುಗಳ ಆರೈಕೆಗಾಗಿ ನಾವು ಮಾಡಬೇಕಾದ ಕೆಲವೊಂದು ಸರಳ ಆಹಾರ ಪದ್ದತಿಗಳು ಇಲ್ಲಿವೆ ನೋಡಿ.

  1. ಪ್ಯಾಟಿ ಆಸಿಡ್- ನಿಮ್ಮ ಕೂದಲು ಒಣಗಿದಂತಿದ್ದು, ನೆತ್ತಿ ತುರಿಕೆಯಾಗುತ್ತಿದ್ದರೆ, ನಿಮ್ಮ ದೇಹದಲ್ಲಿ ಒಮೆಗಾ 3 ಮತ್ತು ಒಮೆಗಾ 6 ಕೊರತೆಯಿದೆ ಎಂದು ಅರ್ಥ. ಈ ಪ್ಯಾಟಿ ಆಸಿಟ್ ಗಳು ದೇಹದಲ್ಲಿ ತನ್ನಿಂದ ತಾನೆ ಉತ್ಪತ್ತಿಯಾಗುವುದಿಲ್ಲ. ಹೀಗಾಗಿ ಆಹಾರ ಪದ್ದತಿಯಲ್ಲೇ ನಾವು ಇದನ್ನು ದೇಹಕ್ಕೆ ಒದಗಿಸಬೇಕಾಗುತ್ತದೆ. ಮೀನು, ಮಾಂಸ ಮತ್ತು ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳಿಂದ ಇದು ದೇಹಕ್ಕೆ ಪೂರೈಕೆಯಾಗುತ್ತದೆ.
  2. ಕಬ್ಬಿಣದಾಂಶ- ಸುಸ್ತು, ಬಳಲಿಕೆ ಕಂಡು ಬರುತ್ತಿದ್ದರೆ, ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿದೆ ಎಂಬುದರ ಸೂಚಕ. ಕಬ್ಬಿಣದಾಂಶ ಕಡಿಮೆಯಾದರೆ ತ್ವಚೆ ಕಾಂತಿ ಹೀನವಾಗುತ್ತದೆ. ತುರಿಕೆ ಮತ್ತು ಒಣಗಿದಂತೆ ಕಾಣುತ್ತದೆ. ಅಷ್ಟೇ ಅಲ್ಲದೆ ಉಗುರುಗಳು ತುಂಡಾಗುವುದಕ್ಕೂ ಕೂಡ ಕಬ್ಬಿಣದಾಂಶದ ಕೊರತೆಯೇ ಕಾರಣ. ಹೀಗಾಗಿ ಹಸಿರು ತರಕಾರಿಗಳ ಸೇವನೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ತರಕಾರಿಗಳಲ್ಲಿ ಹೇರಳವಾಗಿ ಐರನ್ ಅಂಶ ಇರುತ್ತದೆ .
  3. .ಡ್ರೈ ಪ್ರೂಟ್ಸ್- ಒಂದು ಹಿಡಿ ಡ್ರೈಪ್ರೂಟ್ಸ್ ಗಳನ್ನು ಸೇವಿಸುವುದರಿಂದ ಆರೋಗ್ಯಕರ ಚರ್ಮ ಮತ್ತು ಕೂದಲನ್ನು ಪಡೆಯಬಹುದಾಗಿದೆ.
  4. ಕಿವಿ ಹಣ್ಣು ಮತ್ತು ವಿಟಮಿನ್ ಇ ಹೇರಳವಾಗಿರುವ ಆಹಾರ ವಯಸ್ಸಾಗುತ್ತಿದ್ದಂತೆ ಚರ್ಮದ ಎಲೆಸ್ಟಿಸಿಟಿ ಕಡಿಮೆಯಾಗಿ ತ್ವಜೆ ಸುಕ್ಕು ಗಟ್ಟಲಾರಂಭಿಸುತ್ತದೆ. ಹೀಗಾಗಿ ಕಿತ್ತಾಳೆ, ಗ್ರೇಪ್ ಪ್ರೂಟ್, ಲೆಮೆನ್, ಸೇರಿದಂತೆ ವಿಟಮಿನ್ ಸಿ ಹೇರಳವಾಗಿರುವ ಆಹಾರ ವನ್ನು ಸೇವಿಸುವುದರರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
  5. ಬೀಟ ಕೆರೆಟೆನ್ ಮತ್ತು ವಿಟಮಿನ್ ಎ- ಹಳದಿ, ಹಸಿರು ಮತ್ತು ಕೆಂಪು ಬಣ್ಣದ ತರಕಾರಿಗಳಲ್ಲಿ ಬಿಟಾ ಕೆರೊಟೆನ್ ಅಂಶ ಹೆೇರಳವಾಗಿರುತ್ತದೆ. ಅಷ್ಟೇ ಅಲ್ಲದೆ ಇವುಗಳು ವಿಟಮಿನ್ ಎ ಯ ಆಗರ. ಕ್ಯಾರೆಟ್, ಚೀನಿಕಾಯಿ ಮತ್ತು ಮಾವಿನ ಹಣ್ಣುಗಳಲ್ಲಿ ಇದು ಹೇರಳವಾಗಿ ದೊರೆಯುತ್ತದೆ.
  6. ನೀರು- ನಮ್ಮ ದೇಹದ ಶೇಕಡಾ 70ರಷ್ಟು ನೀರಿನಿಂದ ಆವೃತ್ತವಾಗಿದೆ. ಹೇರಳವಾಗಿ ನೀರು ಕುಡಿಯುವುದರಿಂದ ಚರ್ಮದದ ಮಾಯಿಶ್ಚರೈಸರ್ ಹಾಗೆ ಉಳಿಯುತ್ತದೆ. ನೀರು ಹೆಚ್ಚಾಗಿ ಕುಡಿಯುವುದರಿಂದ ದೇಹಕ್ಕೆ ನ್ಯೂಟ್ರಿಷಿಯನ್ ಸಪ್ಲೈ ಸರಿಯಾಗಿ ಆಗುತ್ತದೆ ಇದರಿಂದ ಕೂದಲು ಮತ್ತು ಚರ್ಮ ಆರೋಗ್ಯವಾಗಿರುತ್ತದೆ.
Tags

Related Articles