ಸುದ್ದಿಗಳು

ಕೂದಲಿಗೂ ಬಂತು ಪರ್ಲ್ ಕ್ರಿಸ್ಟಲ್ ವಿನ್ಯಾಸ!

ಬೆಂಗಳೂರು.ಮಾ.17: ಶ್ವೇತ ವರ್ಣದಿಂದ ಕಂಗೊಳಿಸುವ ಮುತ್ತುವಿನ ಅಂದಕ್ಕೆ ಮನಸೋಲದವರಾರು ಹೇಳಿ? ಮನಮೋಹಕವಾದ ಪರ್ಲ್ ಕ್ರಿಸ್ಟಲ್ ಧರಿಸಿದಾಗ ಧರಿಗಿಳಿದ ಅಪ್ಸರೆಯಂತೆ ಭಾಸವಾದರೂ ತಪ್ಪೇನಿಲ್ಲ.

ಯಾಕೆಂದರೆ ಇದೀಗ ಎಲ್ಲಾ ಕಡೆ ಮುತ್ತು ಯಾ ಪರ್ಲ್ ಕ್ರಿಸ್ಟಲ್ ನದ್ದೇ ಹವಾ. ಕಿವಿ ಓಲೆ, ಸರ, ನೆಕ್ಲೇಸ್ ಹೀಗೆ ಮುತ್ತು ವಿನಿಂದ ತಯಾರಿಸಿದ ಯಾವ ಆಭರಣ ಧರಿಸಿದರೂ ಅದು ನಾರಿಗೆ ಶೋಭೆಯೇ!

ಪರ್ಲ್ ಕ್ರಿಸ್ಟಲ್ ಗೀಳು ಬರೀ ಆಭರಣಗಳಿಗಷ್ಟೇ ಸೀಮಿತವಲ್ಲ. ಇತ್ತೀಚಿನ ಟ್ರೆಂಡಿ ಯುಗದಲ್ಲಿ ಕೇಶ ವಿನ್ಯಾಸದಲ್ಲೂ ಪರ್ಲ್ ಸ್ಥಾನ ಪಡೆದಿದೆ. ಪರ್ಲ್ ಕ್ರಿಸ್ಟಲ್ನಿಂದ ತಯಾರಿಸಿದ ನಾನಾ ನಮೂನೆಯ ಕ್ಲಿಪ್ ​ಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.

ಮದುವೆ, ಆರತಕ್ಷತೆ ಹೀಗೆ ಸಮಾರಂಭಗಳಲ್ಲಿ ಸೀರೆ, ಗೌನ್ ಧರಿಸುವಾಗ ಇಂತಹ ಕ್ಲಿಪ್ ಹಾಕಿಕೊಂಡರೆ ಒಳ್ಳೆಯದು. ಇದರಿಂದ ನೀಲವೇಣಿಯರ ಅಂದವೂ ಇಮ್ಮಡಿ. ಅಂದ ಮಾತ್ರಕ್ಕೆ ಇದು ಬರೀ ನೀಲವೇಣಿಗೆ ಮಾತ್ರ ಸೀಮಿತವಲ್ಲ. ಯಾರೂ ಬೇಕಾದರೂ ಧರಿಸಬಹುದು.

ಪರ್ಲ್ ಕ್ರಿಸ್ಟಲ್ ಕ್ಲಿಪ್ ​ಗಳನ್ನು ನಾನಾ ನಮೂನೆಯ ಕೇಶ ವಿನ್ಯಾಸಕ್ಕೆ ಬಳಸಬಹುದು. ಕೂದಲನ್ನು ಇಳಿಬಿಟ್ಟಾಗ, ಮುಡಿ ಹಾಕಿದಾಗ ಹೀಗೆ ಯಾವ ರೀತಿ ಅನುಕೂಲವೂ ಹಾಗೆ ಬಳಸಬಹುದು.

ಮಾರುಕಟ್ಟೆಯಲ್ಲಿ ಇದೀಗ ಬಿಡಿ ಬಿಡಿಯಾಗಿ ಕೂಡ ಪರ್ಲ್ ಕ್ರಿಸ್ಟಲ್ ಕ್ಲಿಪ್ ಲಭ್ಯವಿದೆ. ಅದನ್ನು ನಮಗೆ ಅನುಕೂಲವಾಗುವಂತಹ ರೀತಿಯಲ್ಲಿ, ಬೇಕಾದ ಮಾದರಿಯಲ್ಲಿ ಕೇಶಕ್ಕೆ ಜೋಡಿಸಿಕೊಳ್ಳಬಹುದು.

ಇಂದಿನ ಫ್ಯಾಷನ್ ಯುಗದಲ್ಲಿ ಸೀರೆಗಿಂತ ಗೌನ್ ನ ಕಾರುಬಾರೇ ಹೆಚ್ಚು. ನಿಶ್ಚಿತಾರ್ಥದ ಪಾರ್ಟಿ, ಆರತಕ್ಷತೆಯಲ್ಲಿ ವಧು ಹೆಚ್ಚಾಗಿ ಮಿಂಚುವುದು ಗೌನ್ಗಳಲ್ಲಿ! ತುಂಬಾ ಗ್ರಾಂಡ್ ಆದ ಗೌನ್ ಧರಿಸಿ ಮೆರೆದಾಡುಬಾಗ ಕೂದಲು ವಿನ್ಯಾಸಕ್ಕೂ ಸರಿಯಾದ ಗಮನ ಹರಿಸುವುದು ಸೂಕ್ತ.

ಕೇಶ ವಿನ್ಯಾಸಕ್ಕೆ ಇಂತಹ ಕ್ಲಿಪ್ಗಳನ್ನು ಬಳಸಿದರೆ ಇನ್ನಷ್ಟು ಗ್ರಾಂಡ್ ಲುಕ್ ಸಿಗುವುದರಲ್ಲಿ ಸಂಶಯವಿಲ್ಲ. ಕಿವಿಯೋಲೆ, ಸರ, ಬಳೆ, ನೆಕ್ಲೇಸ್, ಉಂಗುರದ ಜೊತೆ ಕೂದಲನ್ನು ಕೂಡ ಪರ್ಲ್ ಕ್ರಿಸ್ಟಲ್ನಿಂದ ವಿನ್ಯಾಸ ಮಾಡಿದ್ದರೆ ಅಪ್ಸರೆಯ ಲುಕ್ ಬಂದಂತೆ!!

‘ರಗಡ್’ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಲಾಂಚ್

– ಅನಿತಾ ಬನಾರಿ

#hairstyle, #heathtips, #balkaninews

Tags