ಸುದ್ದಿಗಳು

ನವರಾತ್ರಿಗೆ ವಿಶೇಷ ಖಾದ್ಯ ಹಾಲುಬಾಯಿ

ರುಚಿಕರ ಸಿಹಿ ತಿಂಡಿ ಹಾಲುಬಾಯಿ..

ಹಾಲುಬಾಯಿ ನವರಾತ್ರಿ ಸಮಯದಲ್ಲೂ ವಿಶೇಷವಾದ ಸಿಹಿ ತಿಂಡಿ. ಮಲೆನಾಡು ಮತ್ತು ಕರಾವಳಿಯಲ್ಲಿ ಜನಪ್ರಿಯವಾಗಿರುವ ಸಿಹಿ ತಿಂಡಿ. ಇದರಲ್ಲಿ ಜಿಡ್ಡಿನ ಅಂಶ ಹೆಚ್ಚಿರುವುದಿಲ್ಲ. ಸಕ್ಕರೆಯೂ ಇಲ್ಲದ ಆರೋಗ್ಯಕರ ತಿನಿಸು. ಇದು ತುಂಬಾ ಮೃದುವಾಗಿದ್ದು ಬಹಳ ಕಡಿಮೆ ಸಮಯದಲ್ಲಿ ಹಾಲುಬಾಯಿ ಮಾಡಬಹುದು..

Related image

ಬೇಕಾಗುವ ಸಾಮಾಗ್ರಿಗಳು:

ಅಕ್ಕಿ 1 ಕಪ್

ಬೆಲ್ಲ 1 ಕಪ್

ತೆಂಗಿನ ಕಾಯಿ 1/2ಕಪ್

ಏಲಕ್ಕಿ ಪುಡಿ 1/4ಟೀ ಚಮಚ ಅಥವಾ ಏಲಕ್ಕಿ-3

ಉಪ್ಪು ಚಿಟಿಕೆ

ತುಪ್ಪ 2 ಟೇಬಲ್ ಚಮಚ

Related image

ಮಾಡುವ ವಿಧಾನ:

  • ಅಕ್ಕಿಯನ್ನು 6 ಗಂಟೆಗಳ ಕಾಲ ನೆನೆಸಿ, ತೆಂಗಿನ ತುರಿ, ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿ.
  • ರುಬ್ಬರುವ ಹಿಟ್ಟಿಗೆ ಬೆಲ್ಲ ಸೇರಿಸಿ ಕರಗಿಸಿ,ನೀರು ಸೇರಿಸಿ ತೆಳುವಾದ ಹಿಟ್ಟು ತಯಾರಿಸಿ.
  • ಒಂದು ದಪ್ಪ ತಳದ ಬಾಣಲೆಗೆ ರುಬ್ಬಿದ ಮಿಶ್ರಣ, ಉಪ್ಪು, ಸೇರಿಸಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ.
  • ಹಿಟ್ಟು ತಳ ಹಿಡಿಯದಂತೆ ನಿಧಾನವಾಗಿ ತಿರುಗಿಸುತ್ತಲೇ ಇರಬೇಕು. ಇದು 10-15 ನಿಮಿಷ ಹಿಡಿಯುತ್ತದೆ.
  • ಮಿಶ್ರಣ ಬಾಣಲೆ ಬಿಡುವ ಹಂತಕ್ಕೆ ತುಪ್ಪ ಹಾಕಿ , ಬಾಣಲೆ ಬಿಟ್ಟು ಮಿಶ್ರಣ ಒಂದು ಉಂಡೆಯ ಹದಕ್ಕೆ ಬಂದಮೇಲೆ ತುಪ್ಪ ಸವರಿದ ಪ್ಲೇಟ್ ಗೆ ಹರಡಿ ಕಟ್ ಮಾಡಿ.
  • ಬೇಕಿದ್ದರೆ ಅಲಂಕಾರಕ್ಕೆ ಬಾದಾಮಿ ಗೋಡಂಬಿ ಉಪಯೋಗಿಸಬಹುದು.

 

Tags