ಸುದ್ದಿಗಳು

ನಂಜುಂಡೇಶ್ವರನ ಭೇಟಿ ಮಾಡಿದ ನಾದಬ್ರಹ್ಮ!!

ಮೈಸೂರು,ಜು.28: ನಾದಬ್ರಹ್ಮ ಹಂಸಲೇಖ ಅವರು ಹುಟ್ಟಿದ್ದು ಮೈಸೂರಿನಲ್ಲಿ ಅವರ ಹುಟ್ಟು ಹೆಸರು ಗೋವಿಂದರಾಜು ಗಂಗರಾಜು ಎಂದು, ಮೊದಲಿನಿಂದಲೂ ಕವನ ಮತ್ತು ಹಾಡುಗಳನ್ನ ಬರೆಯುತ್ತಿದ್ದ ಗಂಗರಾಜು ಅವರು ಯಾವಾಗಲೂ ಸ್ವಾನ್(ಹಂಸ) ಪೆನ್ ಬಳಸುತ್ತಿದ್ದ ಕಾರಣ ಅವರ ಗುರುಗಳು ಅವರಿಗೆ ಹಂಸಲೇಖ ಎಂದು ಹೆಸರು ಬದಲಾಯಿಸಿದರು ನಂತರ ಇದೇ ಉಳಿದುಕೊಂಡಿತು. ಕನ್ನಡದ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರ ಬಗ್ಗೆ ಹೇಳುವುದಾದರೇನು? ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ನಿನ್ನೆಯಷ್ಟೇ ಅವರು ಮೈಸೂರು ಜಿಲ್ಲೆಯ ನಂಜನಗೂಡಿನ ನಂಜುಡೇಶ್ವರನ ದೇವಾಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ.

ದೇವಾಲಯಕ್ಕೆ ಭೇಟಿ

ಶುಕ್ರವಾರ ಕೇತುಗ್ರಸ್ಥ ಚಂದ್ರ ಗ್ರಹಣದ ಹಿನ್ನೆಲ್ಲೆಯಲ್ಲಿ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ-ಹವನ ನಡೆಯುತ್ತಿತ್ತು. ಅದೇ ರೀತಿ ನಗರದ ನಂಜುಂಡೇಶ್ವರನ ದೇವರಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಈ ವೇಳೆ ಸಂಗೀತ ನಿರ್ದೇಶಕ ಹಂಸಲೇಖ ಅವರು ದೇವಾಲಯಕ್ಕೆ ಭೇಟಿ ನೀಡಿ ನಂಜುಂಡೇಶ್ವರನಿಗೆ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿದ್ದಾರೆ.

ಶುಕ್ರವಾರ ಪೂರ್ಣಿಮೆ ಹಾಗೂ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನಂಜಗೂಡಿನಲ್ಲಿ ನಂಜುಂಡೇಶ್ವರನ ರಥೋತ್ಸವ ನಡೆದಿದ್ದು, ಉತ್ಸವ ಮೂರ್ತಿಯನ್ನು ರಥದ ಮೇಲಿರಿಸಿ ರಥೋತ್ಸವ ಮಾಡಿದ್ದಾರೆ. ಭಕ್ತರಿಗೆ ಹಾಗೂ ರಾಜ್ಯದ ಜನತೆ ಒಳಿತಾಗುವಂತೆ ನಂಜುಂಡೇಶ್ವರನ ರಥೋತ್ಸವ ನರೆವೇರಿದೆ. ಬಳಿಕ ಗ್ರಹಣದ ಹಿನ್ನೆಲೆಯಲ್ಲಿ ರಥೋತ್ಸವದ ನಂತರ ಅರ್ಚಕರು ದೇವಸ್ಥಾನದ ಬಾಗಿಲು ಹಾಕಿದ್ದಾರೆ.

 

Tags