ಸುದ್ದಿಗಳು

ಹಂಸಲೇಖ ಕೈಯಿಂದ ಗಿಫ್ಟ್ ಪಡೆದ ಸರಿಗಮಪಾ ಸ್ಪರ್ಧಿ ನೇಹಾ..

ಜೀ ಕನ್ನಡದಲ್ಲಿ ಪ್ರಸಾರ ಸರಿಗಮಪ ಸೀಸನ್ ಎಲ್ಲರಿಗೂ ಇಷ್ಟ. ಈ ಸೀಸನ್ 14ರ ಸೆಮಿ ಫೈನಲ್ಸ್ ನಡೆಯುತ್ತಿದೆ. ಕಾರ್ಯಕ್ರಮದ ಕೃಷ್ಣ ಸುಂದರಿ ನೇಹಾ ಎಲ್ಲರಿಗಿಂತ ಪುಟ್ಟ ಹುಡುಗಿ. ಆಕೆಯ ಸುಂದರ ಕಂಠ ಎಲ್ಲರಿಗೂ ಇಷ್ಟ. ಈಗ ಹಂಸಲೇಖ ದಂಪತಿಯಿಂದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಪಡೆದಿದ್ದಾಳೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ ನೇಹಾಳ ಪುಟ್ಟ ಬೆರಳಿಗೆ ಉಂಗುರ ತೊಡಿಸಿ ಸಿಹಿ ಮುತ್ತು ನೀಡಿದರು. ಬೇಲೂರಿನಿಂದ ಬಂದ ನೇಹಾ ಕಾರ್ಯಕ್ರಮ ಪ್ರಮುಖ ಆಕರ್ಷಣೆ ಆಗಿದ್ದರು. ವಿಶೇಷ ಅಂದರೆ, ಈ ಬಾರಿಯ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಅತಿ ಸಣ್ಣ ವಯಸ್ಸಿನ ಸ್ಪರ್ಧಿ ಇವರಾಗಿದ್ದಾರೆ. ಇನ್ನು ಸೆಮಿ ಫೈನಲ್ ಹಂತದಲ್ಲಿ ‘ದೇವರೇ ನೀವು ನಿಜವಪ್ಪ..’ ಹಾಡನ್ನು ಹಾಡಿದ ನೇಹಾ ತೀರ್ಪುಗಾರರ ಹೃದಯ ಗೆದ್ದರು.

Tags