ಸುದ್ದಿಗಳು

ಶಕುಂತ್ಲೆ ಜೊತೆಗೆ ಬಂದ ಹಂಸಲೇಖ

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ‘ಶಕುಂತ್ಲೆ’ ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ‘ಶಕುಂತ್ಲೆ’ ಚಿತ್ರ ಅತೀ ಶೀಘ್ರದಲ್ಲಿ ಸೆಟ್ಟೇರಲಿದೆ. ಈ ಸಿನಿಮಾ ಮಾಡಬೇಕೆಂದು 30ವರ್ಷ ಹಿಂದೆ ಅಂದುಕೊಂಡಿದ್ದರಂತೆ. ಇಂದಿನ ಕಾಲಕ್ಕೆ ಚಿತ್ರಕ್ಕೆ ‘ಶಕುಂತ್ಲೆ’ ಎಂಬ ಹೆಸರು ಸೂಕ್ತ ಅನಿಸಿ ‘ಶಕುಂತ್ಲೆ’ ಭಾರತೀಯ ಕಾವ್ಯ ನಾಯಕಿ’ ಎಂದಿದ್ದಾರೆ ಹಂಸಲೇಖಾ.

‘ನಾದಬ್ರಹ್ಮ’ ಎಂದೇ ಕರೆಸಿಕೊಳ್ಳುವ ಹಂಸಲೇಖ ಅವರು ಸಂಗೀತ ಮತ್ತು ಸಾಹಿತ್ಯ ಎರಡರಿಂದಲೂ ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡವರು. ಇದೀಗ ಈ ನಾದಬ್ರಹ್ಮ ಇಪ್ಪತ್ತೈದು ವರ್ಷಗಳ ಹಿಂದೆ ತಾವು ಕಂಡಿದ್ದ ಕನಸೊಂದರ ಸೃಷ್ಟಿಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮ ನಿರ್ದೇಶನದ ‘ಶಕುಂತ್ಲೆ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲು ಆಗುತ್ತದೆ ಎಂಬ ವಿಶ್ವಾಸ ಅವರದು.

ಆಧುನಿಕ ಪ್ರಪಂಚ ಮತ್ತು ಅದರ ಮನಸ್ಸು ಎಷ್ಟು ವೇಗವಾಗಿ ಹೋಗುತ್ತಿದೆ ಮತ್ತು ನಿಸರ್ಗದ ವೇಗ ಹೇಗಿದೆ ಎನ್ನುವುದನ್ನು ಹೋಲಿಸುತ್ತ, ಮನಸ್ಸು ಎಷ್ಟು ದೊಡ್ಡ ಔಷಧ ಎನ್ನುವುದನ್ನು ಈ ಸಿನಿಮಾದ ಮೂಲಕ ಹೇಳಲಿದ್ದಾರೆ ಹಂಸಲೇಖಾ.
ಕನ್ನಡ ಸಿನಿಪ್ರೇಮಿಗಳಿಗೆ ‘ಪ್ರೇಮಲೋಕ’ ಸಿನಿಮಾ ಮೂಲಕ ‘ಶಕುಂತಲೆ’ಯನ್ನು ಪರಿಚಯಿಸಿದ್ದ ಇವರು, ಈ ಬಾರಿ ಅದೇ ಶೀರ್ಷಿಕೆಯ ಅಡಿಯಲ್ಲಿ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದು ಇದೇ ಜೂ. 23ರಂದು ಈ ಸಿನಿಮಾ ಸೆಟ್ಟೇರುತ್ತಿದೆ. ಅಲ್ಲದೇ ಈ ವಾರದಲ್ಲಿಯೇ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಲಿದ್ದಾರಂತೆ.

ಹಂಸಲೇಖಾರವರು ‘ಶಕುಂತ್ಲೆ’ ನಂತರ ‘ಐಯೋರಾ’ ಮತ್ತು ‘ಗಿಟಾರ್’ ಎಂಬ ಮತ್ತೆರಡು ಚಿತ್ರಗಳನ್ನು ನಿರ್ದೇಶನ ಮಾಡಲಿದ್ದಾರಂತೆ.

ಶಕುಂತ್ಲೆ ಚಿತ್ರದ ತಾಂತ್ರಿಕ ತಂಡ ಕೂಡ ಹೊಸಬರೇ ಇರುತ್ತಾರೆ. ಛಾಯಾಗ್ರಹಣ ಮತ್ತು ಕೊರಿಯೋಗ್ರಾಫರ್ ಇಬ್ಬರು ಅನುಭವಿಗಳಾಗಿರುತ್ತಾರೆ.

‘ಇಷ್ಟು ದಿನ ‘ಶಕುಂತ್ಲೆ’ ಚಿತ್ರಕ್ಕೆ ಬೇಕಾದ ರಿಸರ್ಜ್ ಮಾಡಿದೆ. ಈಗ ಸಿನಿಮಾ ಮಾಡೋಕ್ಕೆ ಒಳ್ಳೆಯ ಟೈಂ ಅನಿಸಿತು. ಇದು ಮ್ಯೂಸಿಕ್ ಲವ್ ಸಬ್ಜೆಕ್ಟ್ ಸಿನಿಮಾ ಎಂದಿದ್ದಾರೆ ಹಂಸಲೇಖಾ. ಅವರಿಗೆ ಶುಭವಾಗಲಿ.

Tags

Related Articles

Leave a Reply

Your email address will not be published. Required fields are marked *