ಸುದ್ದಿಗಳು

ಹಂಸಲೇಖ ಅವರಿಗೆ ಎನ್ ಟಿ ರಾಮರಾಮ್ ರಾಷ್ಟ್ರೀಯ ಪ್ರಶಸ್ತಿ

ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇವರ ಮೂಲ ಹೆಸರು “ಗಂಗರಾಜು” 1973 ರಲ್ಲಿ “ತ್ರಿವೇಣಿ” ಚಿತ್ರದ “ನೀನಾ ಭಗವಂತ” ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಇವರು ಇದುವರೆಗೆ ಸಂಗೀತ , ಸಾಹಿತ್ಯ ಒದಗಿಸಿರುವ ಚಿತ್ರಗಳು ಮುನ್ನೂರಕ್ಕೂ ಹೆಚ್ಚು. ಕನ್ನಡ ಮಾತ್ರವಲ್ಲದೆತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ

ಕನ್ನಡದ ನಿಘಂಟಿನಲ್ಲಿ ಕಗ್ಗಂಟಾಗಿ ಕುಳಿತಿದ್ದ ಶಬ್ಧಗಳನ್ನು ಕನ್ನಡದ ಕಿವಿಗಳಿಗೆ..ಜನ ಸಾಮಾನ್ಯರಿಗೆ ತಲುಪಿಸಿದವರು..ಹಂಸಲೇಖ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಅದ್ವಿತೀಯ ನಾಡಗೀತೆ ನೀಡಿದವರು ಹಂಸಲೇಖ. ಇವರು 1990 ರಲ್ಲಿ ಹಿನ್ನಲೆ ಗಾಯಕಿ “ಲತಾ” ಎನ್ನುವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. “ನಾನು ನನ್ನ ಹೆಂಡತಿ, ಪ್ರೇಮಲೋಕ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ, ಹಿನ್ನಲೆ ಗಾಯಕರಾಗಿ, ಸಾಹಿತಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಇವರು ಇದೀಗ ಎನ್ ಟಿ ರಾಮರಾಮ್ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದು, ಇದು ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ತೆಲುಗು ಅಕಾಡೆಮಿ ವತಿಯಿಂದ ಪ್ರತಿವರ್ಷ ಎನ್ ಟಿಆರ್ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ಕಾರ್ಯಕ್ರಮವು ಜುಲೈ ತಿಂಗಳ 6 ರಂದು ನಡೆಯಲಿದೆ.

ಎನ್ ಟಿ ರಾಮರಾಮ್ ರಾಷ್ಟ್ರೀಯ ಪ್ರಶಸ್ತಿಯು ಸಿನಿಮಾ ಆಫ್ ಇಂಡಿಯಾಕ್ಕೆ ತಮ್ಮ ಜೀವಿತಾವಧಿ ಸಾಧನೆ ಮತ್ತು ಕೊಡುಗೆಗಳಿಗಾಗಿ ಜನರನ್ನು ಗುರುತಿಸಲು ವಾರ್ಷಿಕ ಸರ್ಕಾರ ಪ್ರಶಸ್ತಿಯಾಗಿದೆ. ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಮತ್ತು ರಾಜಕಾರಣಿ ಎನ್.ಟಿ.ನ ಗೌರವಾರ್ಥವಾಗಿ ಎನ್ ಟಿ ರಾಮರಾಮ್ ರಾಷ್ಟ್ರೀಯ ಪ್ರಶಸ್ತಿ ಗೌರವ ನಂದಿ ಪ್ರಶಸ್ತಿಯಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಮ ರಾವ್. ಪ್ರಶಸ್ತಿಯು ₹ 500,000 / – ಮತ್ತು ಒಂದು ಸ್ಮರಣಾರ್ಥ ನಗದು ಬಹುಮಾನವನ್ನು ಹೊಂದಿದೆ

Tags

Related Articles

Leave a Reply

Your email address will not be published. Required fields are marked *