ಸುದ್ದಿಗಳು

ಸಿನಿಮಾವಾಗಿ ಬರಲಿದೆ ಹಳ್ಳಿ ಹೈದ ಹನುಮಂತನ ಕಥೆ

‘ಕತ್ತಲ ಕೋಣೆ’ ನಿರ್ದೇಶಕರಿಂದ ಬರಲಿದೆ ಈ ಸಿನಿಮಾ

ಬೆಂಗಳೂರು.ಮೇ,20: ಜೀ ಕನ್ನಡದಲ್ಲಿ ಪ್ರಸಾರವಾಗುವ ಖ್ಯಾತ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ರಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಹನುಮಂತ, ತದ ನಂತರ ಸಿಕ್ಕಾಪಟ್ಟೆ ಸದ್ದು ಮಾಡಿದರು.

ಹಾವೇರಿ ಜಿಲ್ಲೆಯ ಈ ಹನುಮಂತು ದಿನ ನಿತ್ಯ ಟಿವಿ ವಾಹಿನಿಯಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿ ಬಳಗವನ್ನು ಹೆಚ್ಚಿಕೊಂಡಿದ್ದಲ್ಲದೇ ಆ ವಾಹಿನಿಯ ಟಿ.ಆರ್.ಪಿ ಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದ. ಇದೀಗ ಇವರ ಕಥೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ.

Image result for saregamapa hanumantha

ಹೌದು, ಖ್ಯಾತ ಗಾಯಕ ಹನುಮಂತು ಜೀವನಾಧಾರ ಕಥೆಯನ್ನು ಸಿನಿಮಾ ಮಾಡಲು ‘ಕತ್ತಲ ಕೋಣೆ’ ಚಿತ್ರದ ನಿರ್ದೇಶಕ ಸಂದೇಶ ಶೆಟ್ಟಿ ಮುಂದಾಗಿದ್ದಾರೆ. ಈಗಾಗಲೇ ಈ ಬಗ್ಗೆ ಹನುಮಂತನ ಬಳಿಯೂ ಒಂದು ಸುತ್ತಿನ ಮಾತುಕತೆ ಆಗಿದೆಯಂತೆ. ವಿಶೇಷ ಅಂದರೆ ಈ ಚಿತ್ರವನ್ನು ಇಸ್ರೇಲ್ ಮೂಲದ ವ್ಯಕ್ತಿಯೊಬ್ಬರು ನಿರ್ಮಿಸಲು ತಯಾರಾಗಿದ್ದಾರೆ.

Image result for saregamapa hanumantha

ಪಂಚೆ, ಹೆಗಲ ಮೇಲೊಂದು ಟವಲ್.. ಇದು ಹನುಮಂತನ ಸ್ಟೈಲ್. ಇದೀಗ ಇವನ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿತ್ತಿದೆ. ಅಂದ ಹಾಗೆ ಈ ಚಿತ್ರವು ಮಳೆಗಾಲ ಮುಗಿದ ಕೂಡಲೇ ಶೂಟಿಂಗ್ ಶುರುವಾಗಲಿದೆ.

ಅಂದ ಹಾಗೆ ಈ ಚಿತ್ರಕ್ಕೆ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಆದರೆ ಚಿತ್ರಕ್ಕೆ ಹಾವೇರಿಯ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆಯಂತೆ. ಒಂದು ವೇಳೆ ಹನುಮಂತನೇ ನಾಯಕನ ಪಾತ್ರ ಮಾಡಿದರೂ ಸಹ ಅಚ್ಚರಿಯಿಲ್ಲ.

ನೆರವೇರಿದ ‘ಏಕ್ ಲವ್ ಯಾ’ ಸಿನಿಮಾ ಮುಹೂರ್ತ

#hanumanthu, #life, #story, #balkaninews #filmnews, #kannadasuddigalu

Tags