
ಸುದ್ದಿಗಳು
ಜನ್ಮದಿನದ ಸಂಭ್ರಮದಲ್ಲಿ ರಾಕಿಂಗ್ ದಂಪತಿಗಳ ಪುತ್ರಿ
ಕಲಾವಿದರಾದ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳ ಪುತ್ರಿ ಐರಾ ಇಂದು ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾಳೆ. ಈಗಾಗಲೇ ಈ ಪುಟಾಣಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಸಹ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಅಮ್ಮನ ವಿಶ್
ಇನ್ನು ಐರಾಳ ಅಮ್ಮ ರಾಧಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ, “ನನ್ನ ಹೃದಯದ ಹಾಗೂ ಆತ್ಮದ ಒಂದು ಭಾಗ ನೀನು, ನನ್ನ ಏಂಜೆಲ್ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
View this post on Instagram
ಮುದ್ದು ಮುದ್ದು ಈ ಐರಾ
ಈ ದಂಪತಿಗಳಿಗೆ ಲಕ್ಕಿ ಚಾರ್ಮ್ ಆಗಿರುವ ಐರಾ ಹುಟ್ಟಿ ಇವತ್ತಿಗೆ ಒಂದು ವರ್ಷವಾಗಿದೆ. ಏನಾದರೊಂದು ವಿಷಯದ ಬಗ್ಗೆ ವಿಭಿನ್ನವಾಗಿ ಆಚರಣೆ ಮಾಡುವ ರಾಕಿಂಗ್ ದಂಪತಿಗಳು ಇಂದು ಸಹ ತಮ್ಮ ಮಗಳ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಿದ್ದಾರೆ. ಇನ್ನು ಇತ್ತಿಚೆಗಷ್ಟೇ ಐರಾಳ ಫೋಟೋಶೂಟ್ ಸಹ ಮಾಡಲಾಗಿತ್ತು.
ಇದೀಗ ರಾಧಿಕಾ ಪಂಡಿತ್ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಐರಾ, ಸಹೋದರನ ಜೊತೆ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹ್ಯಾಪಿ ಬರ್ತಡೇ ಐರಾ..
#AyraYash #AyraYashBirthday #RadhikaPandith #KannadaSuddigalu