ಸುದ್ದಿಗಳು

ಸೀರೆಯಲ್ಲಿ ಮಿಂಚುತ್ತಿರುವ ಹರಿಪ್ರಿಯಾ

ಜಾಹಿರಾತುವಿನಲ್ಲಿ ನಟಿಸಿದ ‘ನೀರ್ದೋಸೆ’ ನಾಯಕಿ

ಬೆಂಗಳೂರು, ಸೆ.23: ಕನ್ನಡದ ಮುದ್ದು ನಾಯಕಿ ಹರಿಪ್ರಿಯಾ, ಇದೀಗ ಸೀರೆ ಉಟ್ಟುಕೊಂಡು ಮಿಂಚುತ್ತಿದ್ದಾರೆ. ಹಾಗಂತಾ ಇದು ಯಾವುದೇ ಸಿನಿಮಾಕ್ಕಲ್ಲಾ, ಜಾಹೀರಾತಿಗಾಗಿ..

ಜಾಹಿರಾತು

ಹೌದು, ಹರಿಪ್ರಿಯಾ ಇದೀಗ ಫೋಟೋ ಶೂಟ್ ಮಾಡಿಸಿರುವುದು ಜಾಹೀರಾತಿಗಾಗಿ. ಸದ್ಯ ಅವರು ‘ಡಾಟರ್ ಆಫ್ ಪಾರ್ವತಮ್ಮ’ ‘ಸೂಜಿದಾರ’,’ಕುರುಕ್ಷೇತ್ರ’ ‘ಕನ್ನಡ ಗೊತ್ತಿಲ್ಲ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲಾ ಚಿತ್ರಗಳಲ್ಲಿ ಸಕ್ರಿಯರಾಗಿರುವ ನಡುವೆಯೇ ಜಾಹೀರಾತುವಿನಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿಮಾನಿಗಳಿಂದ ಮೆಚ್ಚುಗೆ

ಹರಿಪ್ರಿಯಾರ ಸೀರೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಮೆಚ್ಚುಗೆ ಪಡೆಯುತ್ತಿವೆ. ‘ನೀವು ನಿರ್ದೋಸೆಯಲ್ಲಿ ಹಾಟ್ ಆಗಿಯೂ ಚಂದ. ಸೀರೆಯಲ್ಲೂ ಚಂದ’ ಎಂದು ಕಾಮೆಂಟ್ ‍ಗಳು ಬರುತ್ತಿವೆ.

ತೆಲುಗಿನಲ್ಲೂ ನಟಿಸುವೆ

ಕನ್ನಡದ ಚಿತ್ರಗಳಲ್ಲೂ ನಟಿಸುತ್ತಿರುವ ಹರಿಪ್ರಿಯಾಗೆ, ತೆಲುಗಿನಲ್ಲೂ ಅವಕಾಶಗಳು ಸಿಗುತ್ತಿವೆ. ಇಷ್ಟೆಲ್ಲಾ ಚಿತ್ರಗಳಲ್ಲಿ ನಟಿಸಿದ ನಂತರ ತೆಲುಗು ಚಿತ್ರರಂಗಕ್ಕೆ ಹೋಗುತ್ತಾರಂತೆ…!!

Tags