ಸುದ್ದಿಗಳು

ರಕ್ತದಾನ ಮಾಡಿ, ಗರ್ಭಿಣಿ ಮಹಿಳೆಯ ಜೀವ ಉಳಿಸಿದ ನಟಿ ಹರಿಪ್ರಿಯಾ

ಚಿತ್ರನಟಿಯೆಂದರೆ ಕೇವಲ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂಬ ಮಾತಿದೆ. ಅದಕ್ಕೆ ಅಪವಾದವೆಂಬಂತೆ ಕೆಲ ತಾರೆಯರು ಸಹ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳುತ್ತಾರೆ. ಇದೀಗ ಅಂಥವರ ಸಾಲಿನಲ್ಲಿ ನಟಿ ಹರಿಪ್ರಿಯಾ ಸೇರಿದ್ದಾರೆ.

ಹೌದು, ‘ರಕ್ತ ಬೇಕಾಗಿದೆ’ ಎನ್ನುವ ಟ್ವೀಟ್ ನೋಡಿದ ಅವರು, ಸೀದಾ ಆಸ್ಪತ್ರೆಗೆ ಧಾವಿಸಿ ರಕ್ತದಾನ ಮಾಡಿದ್ದಾರೆ. ಹೆರಿಗೆಯ ಸಮಯದಲ್ಲಿ ರಕ್ತದ ಕೊರತೆಯಿಂದ ನರಳುತ್ತಿದ್ದ ಗರ್ಭಿಣಿಗೆ ತಮ್ಮ ರಕ್ತದಾನ ಮಾಡುವ ಮೂಲಕ ಆ ಜೀವ ಉಳಿಸಿದ್ದಾರೆ. ಬಳಿಕ ಆ ಮಹಿಳಿಗೆ ಹೆರಿಗೆಯಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಈ ತಮ್ಮ ಸಹಾಯವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿರುವ ಅವರು” ನಾನು ರಕ್ತದ ಅವಶ್ಯಕತೆ ಬಗ್ಗೆ ಒಂದು ಟ್ವೀಟ್ ಕಂಡಿತು ಮತ್ತು ಮೊದಲ ಬಾರಿಗೆ ರಕ್ತದಾನ ಹೋದೆ. ನಾನು ಮೊದಲಿಗೆ ಭಯಭೀತಳಾಗಿದ್ದೆ ಆದರೆ ಹೇಗಾದರೂ ಸರಿ ಇದನ್ನು ಮಾಡಲು ನಿರ್ಧರಿಸಿದ್ದೇನೆ !!! ವಿತರಣಾ ಸಮಯದಲ್ಲಿ ತೀವ್ರ ರಕ್ತ ನಷ್ಟ ಅನುಭವಿಸಿದ ಯುವ ತಾಯಿಗೆ ರಕ್ತದಾನ ಮಾಡಿದೆ. ಇಂದು ನನಗೆ ಸಾರ್ಥಕತೆಯ ಮನೋಭಾವ ಮೂಡಿದೆ. ಆ ಕ್ಷಣದಲ್ಲಿ ಮೂಡಿದ ತೃಪ್ತಿಯನ್ನು ಪದಗಳಲ್ಲಿ ವಿವರಿಸಲಾಗುವುದಿಲ್ಲ. ಆ ಪುಟ್ಟ ಮಕ್ಕಳನ್ನು ನೋಡಿ ಖುಷಿಯಾಗಿದೆ. ರಕ್ತದಾನ ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹ ನೀಡಿ. ಅದರಿಂದ ಒಂದು ಜೀವ ಉಳಿಸಬಹುದು. ಪ್ರತಿಯೊಬ್ಬರೂ ರಕ್ತವನ್ನು ದಾನ ಮಾಡಲು ಪ್ರೋತ್ಸಾಹಿಸುತ್ತೇವೆ’ ಎಂದಿದ್ದಾರೆ.

Tags

Related Articles

Leave a Reply

Your email address will not be published. Required fields are marked *