ಸುದ್ದಿಗಳು

‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಅದ್ಧೂರಿ ಮುಹೂರ್ತ…

ಹೈಟು ಆರಡಿ ಮಾತು ಕಾಮಿಡಿ ಲವ್ಯು ಆಲ್ರೆಡಿ..

ಬೆಂಗಳೂರು,ಡಿ.9: ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಮುಹೂರ್ತಕ್ಕೆ ಕ್ರೇಝಿಸ್ಟಾರ್ ರವಿಚಂದ್ರನ್ ಮತ್ತು ಛಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದರು. ಈ ತಾರಾ ಸಮೂಹದ ಆಗಮನಕ್ಕೆ ಪ್ರಮುಖ ಕಾರಣ ಅದು ಸೃಜನ್ ಲೋಕೇಶ್ ನಿರ್ಮಾಣದ ಪ್ರಥಮ ಚಿತ್ರವೂ ಹೌದು.

ಎಲ್ಲಿದ್ದೆ ಇಲ್ಲಿ ತನಕ

ಹದಿನೈದು ವರ್ಷಗಳಿಂದ ಕಿರುತೆರೆ ಕ್ಷೇತ್ರದಲ್ಲಿದ್ದೆ ತೇಜಸ್ವಿ ಇದೀಗ ನಿರ್ದೇಶಕರಾಗಿದ್ದಾರೆ. ಅವರ ನಿರ್ದೇಶನದ ಪ್ರಥಮ ಚಿತ್ರ  ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ  ಮೂಲಕ ಸುಬ್ಬಯ್ಯನಾಯ್ಡು ಅವರ ವಂಶದ ನಾಲ್ಕನೇ ತಲೆಮಾರು ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದೆ. ಅಂದರೆ ಸೃಜನ್ ಪುತ್ರ ಕೂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ಚಿತ್ರಕ್ಕೆ ಹರಿಪ್ರಿಯ ನಾಯಕಿ

ಚಿತ್ರದ ನಾಯಕಿ ಹರಿಪ್ರಿಯ ಮಾತನಾಡಿ ‘ಕಿರುತೆರೆಯಲ್ಲಿ ಈಗಾಗಲೇ ಜನಪ್ರಿಯವಾಗಿರುವ ಲೋಕೇಶ್ ಪ್ರೊಡಕ್ಷನ್ ಇದೀಗ ಹಿರಿತೆರೆಯಲ್ಲಿ ಹೆಸರು ಮಾಡಲಿದೆ. ನಾನು ನಂದಿನಿ ಎಂಬ ಪಾತ್ರ ಮಾಡುತ್ತಿದ್ದೇನೆ’ ಎಂದರು.

ಅರ್ಜುನ್ ಜನ್ಯ ಸಂಗೀತ

ಚಿತ್ರದ ಹಾಡುಗಳ ಬಗ್ಗೆ ಮಾತನಾಡಿದ ಕವಿರಾಜ್ , ತಮಗೆ ‘ಹೈಟು ಆರಡಿ ಮಾತು ಕಾಮಿಡಿ ಲವ್ಯು ಆಲ್ರೆಡಿ..’ ನನ್ನ ಫೇವರಿಟ್ ಹಾಡು ಎಂದರು. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.

ತಾಯಿ ಪಾತ್ರದಲ್ಲಿ ತಾರಾ

ಚಿತ್ರದ ಸಹ ನಿರ್ಮಾಪಕ ಧ್ರುವ ಸ್ಟಾರ್ ಮದುವೆ ಈವೆಂಟ್ ಕನ್ಸರ್ಟ್ ಮಾಡುವ ಮೂಲಕ‌ ಹೆಸರಾದವರು ಧ್ರುವ. ಚಿತ್ರದಲ್ಲಿನ ಮದುವೆ ಈವೆಂಟನ್ನು ಅದ್ಭುತವಾಗಿ ತೋರಿಸುವ ಜೊತೆಗೆ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ ಧ್ರುವ. ಪೂಜಾ ಲೋಕೇಶ್ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಚಿತ್ರಕ್ಕೆ ವೇಣು ಛಾಯಾಗ್ರಾಹಕರು.

ತಾರಾ ಚಿತ್ರದಲ್ಲಿ ತಾಯಿಯ ಪಾತ್ರ ಮಾಡಿರುವುದಾಗಿ ಹೇಳಿದರು. ‘ಒಳ್ಳೆಯವರಿಗೆ ಸದಾ ಒಳ್ಳೆಯದಾಗುತ್ತೆ’ ಎಂಬ ಮೊದಲ ಸಂಭಾಷಣೆ ಖುಷಿ ಕೊಟ್ಟಿತೆಂದು ಅವರು ಹೇಳಿದರು.ಉಳಿದಂತೆ ಚಿತ್ರದ ತಾರಾಗಣದಲ್ಲಿ ಗೋಧೂಳಿ ಗಿರಿ, ತರಂಗ ವಿಶ್ವ,  ಸಂಭಾಷಣೆ ರಚಿಸಿರುವ ರಾಕೇಶ್ , ಚಿತ್ರಕ್ಕೆ ಕತೆ ಚಿತ್ರಕತೆ ಬರೆದಿರುವ ಅರುಣ್ ಉಪಸ್ಥಿತರಿದ್ದರು.

 

Tags