ಸುದ್ದಿಗಳು

ದೀಪಾವಳಿ ಹಬ್ಬಕ್ಕೆ ಹರಿಪ್ರಿಯಾ ಅಭಿನಯದ ಎರಡು ಚಿತ್ರಗಳ ಪೋಸ್ಟರ್ ರಿಲೀಸ್

'ಡಾಟರ್ ಆಫ್ ಪಾರ್ವತಮ್ಮ' ಮತ್ತು 'ಬೆಲ್ ಬಾಟಂ' ಚಿತ್ರದ ಪೋಸ್ಟರ್ ಬಿಡುಗಡೆ

ಬೆಂಗಳೂರು, ನ.07: ‘ನೀರ್ ದೋಸೆ’ ಸಿನಿಮಾದಲ್ಲಿ ಸಖತ್ ಸೆಕ್ಸೀ ಲುಕ್‌ ನಲ್ಲಿ ತಮ್ಮ ಮೋಹಕ ನಟನೆಯಿಂದಲೇ ನೋಡುಗರಿಗೆ ಕಿಕ್ ಕೊಟ್ಟಿದ್ದ ನಟಿ ಹರಿಪ್ರಿಯಾ. ಇದೀಗ ಚಂದನವನದ ಟಾಪ್ ನಲ್ಲಿಯರ ಸಾಲಿನಲ್ಲಿ ಹರಿಪ್ರಿಯಾ ಕೂಡ ಒಬ್ಬಾರಾಗಿದ್ದಾರೆ.

ದೀಪಾವಳಿ ಹಬ್ಬಕ್ಕೆ ಪೋಸ್ಟರ್ ಬಿಡುಗಡೆ

ದೀಪಾವಳಿ ಹಬ್ಬದ ಪ್ರಯುಕ್ತ ಹರಿಪ್ರಿಯಾ ಮುಂಬರುವ ಚಿತ್ರ ‘ಡಾಟರ್ ಆಪ್ ಪಾರ್ವತಮ್ಮ’ ಹಾಗೂ ‘ಬೆಲ್ ಬಾಟಂ’ ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ವಿಷಯವನ್ನು ಸ್ವತಃ ಹರಿಪ್ರಿಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

‪HAPPY and SAFE Deepawali ppl ????❤️‬

A post shared by Hariprriya (@iamhariprriya) on

ಅಮ್ಮ ಮಗಳ ಭಾಂದವ್ಯದ ಪೋಸ್ಟರ್  

ಚಂದನವನದ ಬಹುನಿರೀಕ್ಷಿತ ಸಿನಿಮಾವಾದ ‘ಡಾಟರ್ ಆಫ್ ಪಾರ್ವತಮ್ಮ’ ಹರಿಪ್ರಿಯಾ ಅವರ 25 ನೇ ಸಿನಿಮಾವಾಗಿದ್ದು, ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ  ಪವರ್ ಫುಲ್ ಆಗಿ ಕಾಣಿಸಿಕೊಂಡಿದಲ್ಲದೇ, ಈ ಚಿತ್ರದಲ್ಲಿ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರ ನಿರ್ವಹಿಸಲಿದ್ದು, ಕೂಲಿಂಗ್ ಗ್ಲಾಸ್, ಜೀನ್ಸ್, ಕೋಟ್ ಹಾಕಿ ಫುಲ್ ಟಿಪ್ ಟಾಪ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಹಬ್ಬದ ವಿಶೇಷವಾಗಿ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್ ನಲ್ಲಿ ಹರಿಪ್ರಿಯಾ ತಾಯಿಯಾಗಿ  ಸುಮಲಾತ ಅಂಬರೀಶ್ ಕಾಣಿಸಿಕೊಂಡಿದ್ದು, ಅಮ್ಮನನ್ನು ಬುಲೆಟ್ ನಲ್ಲಿ ಕುರಿಸಿಕೊಂಡು ಹೋಗುವ ಪೋಸ್ಟರ್ ಇದಾಗಿದ್ದು, ಅಮ್ಮ ಮಗಳ ಲುಕ್ ನೋಡುಗರನ್ನು ಒಂದೊಮ್ಮೆ ತಿರುಗೆ ನೋಡುವಂತೆ ಮಾಡಿದೆ.

‘ಬೆಲ್ ಬಾಟಂ’ ಪೋಸ್ಟರ್

ಹರಿಪ್ರಿಯಾ ಅಭಿನಯದ ಮತ್ತೊಂದು ಚಿತ್ರ ‘ಬೆಲ್ ಬಾಟಂ’. ಇದೀಗ ಈ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದ್ದು, ದೀಪಾವಳಿ ಹಬ್ಬದ ಸಲುವಾಗಿ  ‘ಬೆಲ್ ಬಾಟಂ’ ಚಿತ್ರತಂಡ ಹರಿಪ್ರಿಯಾ ಇರುವ ಪೋಸ್ಟರ್ ಬಿಡುಗಡೆ ಮಾಡಿದೆ. ಇದರಲ್ಲಿ ಹರಿಪ್ರಿಯಾ ಕೆಂಪು ಬಣ್ಣದ ಸೀರೆಯುಟ್ಟು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ರಿಷಬ್ ಶೆಟ್ಟಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಿಷಬ್ ಗೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಈ ಚಿತ್ರಕ್ಕೆ ಜಯತೀರ್ಥ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಬೆಲ್ ಬಾಟಂ’ ಚಿತ್ರ 80ರ ದಶಕದ ಡಿಟೆಕ್ಟಿವ್ ಕಥೆಯನ್ನು ಹೊಂದಿದೆ ಎನ್ನಲಾಗಿದೆ.

 

 

Tags