ಸುದ್ದಿಗಳು

ಐತಿಹಾಸಿಕ ಚಿತ್ರದಲ್ಲಿ ‘ನೀರ್ ದೋಸೆ’ ಬೆಡಗಿ …!

ಚಂದನವನದ ಬಹುಬೇಡಿಕೆಯ ನಟಿ ಹರಿಪ್ರಿಯಾ

ಬೆಂಗಳೂರು, ಡಿ.6: ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನೀರ್ ದೋಸೆ ಬೆಡಗಿ ನಟಿ ಹರಿಪ್ರಿಯಾ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲೂ ಬಿಗ್ ಬಜೆಟ್ ಮೂವಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ.  ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆಯುವ ಹರಿಪ್ರಿಯಾ ಈಗ ಐತಿಹಾಸಿಕ ಚಿತ್ರವೊಂದನ್ನು ಮಾಡುವುದಕ್ಕೆ ಹೊರಟಿದ್ದಾರೆ.

ಚಿತ್ರಕ್ಕೆ ಹರಿ ಸಂತೋಷ್ ಆಕ್ಷನ್ ಕಟ್ …!

ಹೌದು, ‘ವಿಕ್ಟರಿ 2’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಹರಿ ಸಂತೋಷ್ ಐತಿಹಾಸಿಕ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದು ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ನಟಿಸಲಿದ್ದಾರೆ ಎಂದು ಹೇಳಲಾಗಿದೆಯಂತೆ. ಬಿ ಎಲ್ ವೇಣು ಅವರ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಕಾದಂಬರಿ ಆಧಾರಿತ ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡುತ್ತಿದ್ದು ಚಿತ್ರಕ್ಕೆ ಬಿಚ್ಚುಗತ್ತಿ ಎಂದು ಶೀರ್ಷಿಕೆ ಇಡಲಾಗಿದೆಯಂತೆ. ಚಿತ್ರದ ಮೊದಲ ಭಾಗವಾದ ದಳವಾಯಿ ದಂಗೆಯಲ್ಲಿ ಹರಿಪ್ರಿಯಾ ನಟಿಸುವ ಸಾಧ್ಯತೆ ಇದೆಯಂತೆ. ಚಿತ್ರದ ಪಾತ್ರದ ಬಗ್ಗೆ ಹರಿಪ್ರಿಯಾ ಮೆಚ್ಚುಗೆ …!

ಚಿತ್ರದಲ್ಲಿ ರಾಜಾವರ್ಧನ್ ನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರದ ನಾಯಕಿ ಪಾತ್ರದ ಅನ್ವೇಷಣೆಯಲ್ಲಿದ್ದ ನಿರ್ದೇಶಕರ ಕಣ್ಣಿಗೆ ಹರಿಪ್ರಿಯಾ ಬಿದ್ದಿದ್ದಾರೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದರಿಂದ ಈ ಪಾತ್ರಕ್ಕೆ ಹರಿಪ್ರಿಯಾ ಸೂಕ್ತ ಎಂದಿದ್ದಾರೆ. ಸದ್ಯ ಚಿತ್ರದ ಪಾತ್ರದ ಬಗ್ಗೆ ಹರಿಪ್ರಿಯಾ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Tags