ಸುದ್ದಿಗಳು

ನಾಳೆಯಿಂದ ವರ್ಷಪೂರ್ತಿ ಥಿಯೇಟರ್ ನಲ್ಲಿಯೇ ಕಾಲ ಕಳೆಯಲಿರುವ ಹರಿಪ್ರಿಯಾ

ಏನಿಲ್ಲವೆಂದರೂ ಹರಿಪ್ರಿಯಾ ನಟಿಸಿರುವ ಐದಾರು ಸಿನಿಮಾಗಳು ರಿಲೀಸ್

ಬೆಂಗಳೂರು.ಫೆ.14

ಸ್ಯಾಂಡಲ್ ವುಡ್ ನಲ್ಲಿ ಸುಮಾರು 25 ಚಿತ್ರಗಳಿಗಿಂತಲೂ ಹೆಚ್ಚಿನ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಹರಿಪ್ರಿಯಾ. ನಾಳೆ ಅವರು ನಟಿಸಿರುವ ‘ಬೆಲ್ ಬಾಟಂ’ ತೆರೆಗೆ ಬರುತ್ತಿದೆ. ಈಗಾಗಲೇ ಈ ಸಿನಿಮಾ ಸಾಕಷ್ಟು ನಿರೀಕ್ಷಗಳನ್ನು ಮೂಡಿಸಿದೆ. ಈ ಚಿತ್ರದಿಂದ ಅವರು ಇಡೀ ವರ್ಷ ಚಿತ್ರಮಂದಿರದಲ್ಲಿಯೇ ಕಾಲ ಕಳೆಯುತ್ತಾರೆ.

ಹರಿಪ್ರಿಯಾ ಸಿನಿಮಾಗಳು

ಹೌದು, ಈ ವರ್ಷ ಏನಿಲ್ಲವೆಂದರೂ ಐದಾರು ಸಿನಿಮಾಗಳಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಕಳೆದ ವರ್ಷ ಅವರ ಅಭಿನಯದ ‘ಕನಕ’, ‘ಸಂಹಾರ’, ‘ಲೈಫ್ ಜೊತೆ ಒಂದು ಸೆಲ್ಪೀ’ ಸೇರಿದಂತೆ ತೆಲುಗಿನ ‘ಜೈ ಸಿಂಹ’ ಚಿತ್ರಗಳು ತೆರೆ ಕಂಡಿದ್ದವು.

ಈ ವರ್ಷದ ಸಿನಿಮಾಗಳು

ಕಳೆದ ವರ್ಷ ಹರಿಪ್ರಿಯಾ ನಟಿಸಿರುವ ಐದಾರು ಸಿನಿಮಾಗಳು ಈ ವರ್ಷ ತೆರೆಗೆ ಬರುತ್ತಿವೆ. ಹೀಗಾಗಿ ಈ ವರ್ಷ ಅವರ ಪಾಲಿಗೆ ಚಿನ್ನದ ವರ್ಷ ಎಂದರೆ ತಪ್ಪಾಗುವುದಿಲ್ಲ. ಹೀಗಾಗಿ ಅವರು ನಾಳೆಯಿಂದಲೇ ಥಿಯೇಟರ್ ನಲ್ಲಿ ಜಾಸ್ತಿ ಸಿಗುತ್ತಾರೆ.

ನಿರ್ದೇಶಕ ರಿಷಭ್ ಶೆಟ್ಟಿ ನಿರ್ದೇಶನದ ‘ಕಥಾ ಸಂಗಮ’ ಚಿತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಇದೇ ನಿರ್ದೇಶಕರು ನಾಯಕನಟರಾಗಿ ‘ಬೆಲ್ ಬಾಟಮ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೂ ಅವರೇ ನಾಯಕಿಯಾಗಿದ್ದಾರೆ. ಈ ಚಿತ್ರಗಳ ನಂತರ ಅವರು ನಟಿಸಿರು ‘ಸೂಜಿದಾರ’, ‘ಡಾಟರ್ ಆಫ್ ಹರಿಪ್ರಿಯಾ’, ‘ಕನ್ನಡ್ ಗೊತ್ತಿಲ್ಲಾ’, ‘ಕುರುಕ್ಷೇತ್ರ’ ‘ಎಲ್ಲಿದ್ದೆ ಇಲ್ಲಿಯನಕ’ ಹಾಗೂ ‘ಬಿಚ್ಚುಗತ್ತಿ’ ಚಿತ್ರಗಳು ತೆರೆಗೆ ಬರಲಿವೆ.

“ಇನ್ನು ಅವಕಾಶಗಳು ಬರುತ್ತಿವೆ. ಆದರೆ ಸಮಯದ ಹೊಂದಾಣಿಕೆಯಿಂದ ಆಗುತ್ತಿಲ್ಲ. ಆದರೆ ಬಹಳ ಖುಷಿಯಾಗುತ್ತಿದೆ. ಏಕೆಂದರೆ ‘ಡಾಟರ್ ಆಫ್ ಪಾರ್ವತಮ್ಮ’ ನನ್ನ 25 ನೇ ಸಿನಿಮಾ. ಈ ಚಿತ್ರದಲ್ಲಿ ಸುಮಲತಾ ಮೇಡಮ್ ಅವರೊಂದಿಗೆ ಅಭಿನಯಿಸಿದ್ದೇನೆ. ಇನ್ನು ದರ್ಶನ್ ರೊಂದಿಗೆ ‘ಕುರುಕ್ಷೇತ್ರ’, ಗೃಹಿಣಿಯಾಗಿ ನಟಿಸಿರುವ ‘ಸೂಜಿದಾರ’, ಹೀಗೆ ಎಲ್ಲಾ ಸಿನಿಮಾಗಳ ಮೇಲೂ ನಂಬಿಕೆಯಿದೆ. ನಾಳೆಯಿಂದ ‘ಬೆಲ್ ಬಾಟಂ’ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದೊಂದೇ ಸಿನಿಮಾವಲ್ಲಾ, ನಾನು ನಟಿಸಿರುವ ಎಲ್ಲಾ ಚಿತ್ರಗಳು ಸಹ ಪ್ರೇಕ್ಷಕರನ್ನು ಮನರಂಜಿಸಲಿವೆ” ಎಂದಿದ್ದಾರೆ ಹರಿಪ್ರಿಯಾ.

ನಟ ಮತ್ತು ಸಿಸಿಎಲ್ ಆಟಗಾರ ರಾಜೀವ್ ಗೆ ಕೂಡಿ ಬಂತು ಕಂಕಣ ಭಾಗ್ಯ

#haripriya, #balkaninews #filmnews, #bellbottom, #kannadasuddigalu, #sujidara,

Tags