ಸುದ್ದಿಗಳು

ಮದುವೆ ಬಗ್ಗೆ ಮಾತನಾಡಿದ ಹರಿಪ್ರಿಯಾ

ಚಂದನವನದ ನಂಬರ್ ಒನ್ ನಟಿಯಾಗಿರುವ ಹರಿಪ್ರಿಯಾ ಅವರು ಕುಟುಂಬ ಸಮೇತರಾಗಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬೆಂಗಳೂರು, ಆ. 09: ಪ್ರತಿ ವರ್ಷದ ಸಂಪ್ರದಾಯದಂತೆ ನಟಿ ಹರಿಪ್ರಿಯಾ ಅವರು ತಮ್ಮ ಕುಟುಂಬ ಸಮೇತರಾಗಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದ್ದಾರೆ.

‘ಲೈಫ್ ಜೊತೆ ಒಂದು ಸೆಲ್ಫೀ’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿರುವ ಹರಿಪ್ರಿಯಾ, ಚಂದನವನದ ನಂಬರ್ ಒನ್ ನಟಿಯಾಗಿದ್ದು, ಅವರ 25 ನೇ ಚಿತ್ರ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ವೇಳೆಯಲ್ಲಿ ಅವರು ರಾಯರ ಮಠಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಈಗ ಕೊಂಚ ಬಿಡುವು ಮಾಡಿಕೊಂಡು ಅವರ ಅಣ್ಣ ಹಾಗೂ ಅಮ್ಮನ ಜತೆ ಬಂದು ರಾಯರ ದರ್ಶನ ಮಾಡಿದ್ದಾರೆ. ಈ ವೇಳೆಯಲ್ಲಿ ಅಲ್ಲಿದ್ದ ಜನರು ಸೆಲ್ಪೀ ತೆಗೆಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿ ಬಿದ್ದಿದ್ದಾರೆ.

ಬಿಡುಗಡೆಗೆ ಸಿದ್ದವಾಗಿರುವ ಚಿತ್ರಗಳು

ಹರಿಪ್ರಿಯಾ ನಟನೆಯ ‘ಲೈಫ್ ಜೊತೆ ಒಂದ್ ಸೆಲ್ಪಿ’ ಸೇರಿದಂತೆ ‘ಕುರುಕ್ಷೇತ್ರ’, ‘ಬೆಲ್ ಬಾಟಮ್’, ‘ಸೂಜಿದಾರ’, ‘ಡಾಟರ್ ಆಫ್ ಪಾರ್ವತಮ್ಮ’ ಸೇರಿ ಹಲವು ಚಿತ್ರಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ.

ಮದುವೆಯ ಬಗ್ಗೆ

ಹರಿಪ್ರಿಯಾ ಮಂತ್ರಾಲಯಕ್ಕೆ ಆಗಮಿಸಿದ ಸುದ್ದಿ ತಿಳಿದ ತಕ್ಷಣ ಮಾಧ್ಯಮದವರು ಅವರ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು “ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ, ಸದ್ಯಕ್ಕೆ ಸಿನಿಮಾಗಳ ಮೇಲೆ ಗಮನ ಹರಿಸಿದ್ದೇನೆ, ಯಾವಾಗ ಏನು ಆಗುತ್ತೆ ಅಂತಾ ಹೇಳಲಿಕ್ಕೆ ಆಗೋಲ್ಲ , ಅದರ ಬಗ್ಗೆ ಈಗ ಮಾತು ಬೇಡ” ಎಂದು ಉತ್ತರಿಸಿದ್ದಾರೆ.

Tags

Related Articles