ಸುದ್ದಿಗಳು

ಕಾವೇರಿ ಕೂಗು ಅಭಿಯಾನಕ್ಕೆ ಹರಿಪ್ರಿಯಾ ಸಾಥ್

ನಾಡಿನ ಕೆಲವು ಭಾಗಗಳಲ್ಲಿ ಬರದ ಛಾಯೆ ಆವರಿಸಿದ್ದು ಕುಡಿಯುವ ನೀರಿಗೂ ಸಹ ಸಮಸ್ಯೆಯಾಗಿದೆ. ಹೀಗಾಗಿ ನೀರನ್ನು ಮಿತವಾಗಿ ಬಳಿಸಿ ಭವಿಷ್ಯದ ಪೀಳಿಗೆಗಾಗಿ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಈಗಾಗಲೇ ಸರ್ಕಾರ ಹಾಗೂ ಕೆಲವು ಸಂಘಟನೆಗಳು ಸೇರಿದಂತೆ ಅನೇಕ ಯೋಜನೆಗಳ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ.

ಅಂದ ಹಾಗೆ ಇಶಾ ಪೌಂಡೇಷನ್ ವತಿಯಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಗಿಡ ನೆಡುವ ಅಭಿಯಾನದ ಮೂಲಕ ಕಾವೇರಿ ನದಿ ನೀರಿನ ಮಟ್ಟವನ್ನು ಹೆಚ್ಚಿಸಲು ‘ಕಾವೇರಿ ಕಾಲಿಂಗ್‘ ಅಥವಾ ‘ಕಾವೇರಿ ಕೂಗು’ ಎಂಬ ಅಭಿಯಾನವೊಂದು ಶುರುವಾಗಿದೆ. ಇನ್ನು ಸದ್ಗುರು ಜಗ್ಗಿ ವಾಸುದೇವ್ ಸಹಈ ಕಾರ್ಯಕ್ಕೆ ಈಗಾಗಲೇ ಭಾಗಿಯಾಗಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡು ಜನರ ಜೀವದ ಮೂಲವಾಗಿರುವ ಕಾವೇರಿ ನದಿಯ ಹರಿವು ಈಗ ಶೇ.46ರಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಕಾವೇರಿ ನದಿ ನೋಡಿದರೆ ಶೇ.25 ಅಥವಾ ಶೇ.30ರಷ್ಟು ಮಾತ್ರ ಹರಿವು ಕಾಣ ಸಿಗುತ್ತದೆ.

ಈ ಅಭಿಯಾನದ ಮೂಲಕ ನದಿಯ ಅಚ್ಚುಕಟ್ಟು ಪಾತ್ರದಲ್ಲಿ ಒಟ್ಟು 242 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ನದಿ ಪಾತ್ರದಲ್ಲಿ ಬರುವ ರೈತರ ಜಮೀನು ಮತ್ತು ಅರಣ್ಯ ಇಲಾಖೆಗೆ ಸೇರಿದ ಪ್ರದೇಶಗಳಲ್ಲಿ 25 ಕೋಟಿ ಸಸಿಗಳನ್ನು ನೆಡಲು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಈಶ ಫೌಂಡೇಷನ್ ಒಪ್ಪಂದ ಮಾಡಿಕೊಂಡಿದೆ.

‘ನಮ್ಮ ಪೂರ್ವಿಕರು ಕಾವೇರಿಯನ್ನು ಅತ್ಯಂತ ಸ್ವಚ್ಛವಾಗಿ ನಮಗೆ ಕೊಟ್ಟಿದ್ದರು. ಅದನ್ನು ನಾವು ಕೂಡ ಮುಂದಿನ ಪೀಳಿಗೆಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕಾವೇರಿ ಕಾಲಿಂಗ್ ಅಭಿಯಾನ ಆರಂಭವಾಗಿದೆ. ಅದಕ್ಕೆ ನಾನು ಬೆಂಬಲ ನೀಡುತ್ತಿದ್ದೇನೆ. ನೀವು ಕೂಡ ಬೆಂಬಲ ನೀಡಿ’ ಎಂದು ಹರಿಪ್ರಿಯಾ ಮನವಿ ಮಾಡಿಕೊಂಡಿದ್ದಾರೆ.

ಅಂದ ಹಾಗೆ ಈ ‘ಕಾವೇರಿ ಕೂಗು’ ಅಭಿಯಾನ ಸೆ.3 ರಿಂದ ಚಾಲನೆ ಪಡೆಯಲಿದೆ. ಇದರ ಜೊತೆಗೆ, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಕೂಡ ಈ ಅಭಿಯಾನದಲ್ಲಿ ಕೈಜೋಡಿಸಬಹುದಾಗಿದೆ.

ಕಾವೇರಿ ಕೂಗು (ಕಾವೇರಿ ಕಾಲಿಂಗ್) ಯೋಜನೆಗೆ ಯಾರು ಬೇಕಾದರೂ ಗಿಡ ನೀಡಬಹುದಾಗಿದೆ. ವೆಬ್ಸೈಟ್ cauverycalling.org ಅಥವಾ 8000980009ಗೆ ಕರೆ ಮಾಡುವ ಮೂಲಕ ಗಿಡ ನೀಡಬಹುದಾಗಿದೆ. ಒಂದು ಗಿಡಕ್ಕೆ 42 ರೂ. ನಿಗದಿ ಮಾಡಲಾಗಿದೆ. ಸದ್ಯ ಈ ಆಹ್ವಾನದ ಖುಷಿಯನ್ನು ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗದಗ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದ ಸತೀಶ್ ನೀನಾಸಂ

#haripriya #supported #CaveryKoogu #kannadamovie  #cauveryCalling

Tags