ಸುದ್ದಿಗಳು

ಹರ್ಷಿಕಾ ಜೊತೆ ಡಬ್ ಸ್ಯ್ಮಾಷ್ ಮಾಡಿ ವೈರಲ್ ಆದಳು ಈ ಪುಟ್ಟ ಹುಡುಗಿ!!

ಹರ್ಷಿಕಾ ಪೂಣಚ್ಚ ಅಭಿನಯದ ಚಿಟ್ಟೆ ಸಿನಿಮಾ ಇತ್ತೀಚೆಗೆಯಷ್ಟೇ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸದ್ಯ ಸ್ಯಾಂಡಲ್ ವುಡ್ ನಾಯಕಿಯರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ ಅಂದರೆ ತಪ್ಪಾಗಲಾರದು. ಹರ್ಷಿಕಾ ಪೂಣಚ್ಚ ಇತ್ತೀಚಿಗೆ ತಮ್ಮ ಜೊತೆ ಲಿಟಲ್ ಸ್ಟಾರ್ ಒಬ್ಬರನ್ನು ಅವರ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಸದ್ಯ ಇವರಿಬ್ಬರು ಸೇರಿ ಮಾಡಿರುವ ಡಬ್ ಸ್ಮ್ಯಾಷ್ ಗಳು ಸೋಷಿಯಲ್ ನೆಟ್ವರ್ಕ್ ನಲ್ಲಿ ಧೂಳೆಬ್ಬಿಸುತ್ತಿವೆ. ಡಬ್ ಸ್ಮ್ಯಾಷ್ ಬಗ್ಗೆ ಹೇಳಬೇಕಿಲ್ಲ. ಎಷ್ಟು ಫೇಮಸ್ ಆಗಿದೆ ಎಂದರೆ ಎಲ್ಲರೂ ಅಕೌಂಟ್ ಮಾಡಿ ಡಬ್ ಸ್ಮ್ಯಾಷ್ ಮಾಡಿ ಫೇಮಸ್ ಆಗಿರುವ ಉದಾಹರಣೆ ಬೇಕಾದಷ್ಟಿದೆ.

ಈಗ ಹರ್ಷಿಕಾ ಜೊತೆ ಒಂದು ಪುಟ್ಟ ಹುಡುಗಿ ಡಬ್ ಸ್ಮ್ಯಾಷ್  ಮಾಡಿದ್ದಾಳೆ. ಅದು ಬೇರಾರೂ ಅಲ್ಲ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರಿ. ಈಗಾಗಲೇ ಗಣೇಶ್ ಅವರ ಪುತ್ರಿ ಚಾರಿತ್ರ್ಯ ‘ಚಮಕ್’ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ಬಾಲಿವುಡ್ ನ ‘ಕಭಿ ಖುಷಿ ಕಭಿ ಗಮ್’ ಚಿತ್ರದ ಡೈಲಾಗ್ ಒಂದನ್ನು ಡಬ್ ಸ್ಯ್ಮಾಷ್ ಮಾಡಿದ್ದು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ .

ಈ ಹಿಂದೆಯೂ ಚಾರಿತ್ರ್ಯ ಡಬ್ ಸ್ಮ್ಯಾಷ್ ಒಂದನ್ನು ಮಾಡಿ ಸುದ್ದಿ ಆಗಿತ್ತು. ಚಾರಿತ್ರ್ಯ ಅಭಿನಯಕ್ಕೂ ಒಗ್ಗಿಕೊಂಡಿದ್ದಾರೆ ಎನ್ನುವುದು ಡಬ್ ಸ್ಮ್ಯಾಷ್ ಗಳನ್ನು ನೋಡಿದರೆ ತಿಳಿಯುತ್ತಿದೆ.

Tags