ಸುದ್ದಿಗಳು

ಗಮನ ಸೆಳೆದ ಹರ್ಷಿಕಾ ಪೂಣಚ್ಚ ಹೊಸ ಲುಕ್ ..!!!

ಕಾಲಿವುಡ್, ಟಾಲಿವುಡ್ ನಿಂದ ಸಿನಿಮಾ ಆಫರ್ ಗಳು

ಬೆಂಗಳೂರು, ನ.19: ಚಿತ್ರರಂಗದಲ್ಲಿ ನಾಯಕಿಯಾಗಿ ಹತ್ತು ವರ್ಷಗಳನ್ನು ಪೂರ್ಣಗೊಳಿಸಿರುವ ನಟಿ ಹರ್ಷಿಕಾ ಪೂಣಚ್ಚ ಇಂದು ಫೋಟೋ ಶೂಟ್ ಮಾಡಿಸಿದ್ದಾರೆ. ಕೆಲವು ತಿಂಗಳ ಹಿಂದೆ ತೆರೆಗೆ ಬಂದಿದ್ದ ‘ಚಿಟ್ಟೆ’ ಚಿತ್ರದಲ್ಲಿ ಪ್ರೌಢ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು.

 

ಫೋಟೋ ಶೂಟ್

“ಈ ಹಿಂದೆ ಮಾಡಿದ್ದ ಪಾತ್ರಗಳಿಗಿಂತ ಇನ್ನು ಮುಂದೆ ಮಾಡುವ ಪಾತ್ರಗಳು ಸ್ವಲ್ಪ ವಿಭಿನ್ನವಾಗಿರಲಿವೆ” ಎಂದು ಇತ್ತಿಚೆಗೆ ಹರ್ಷಿಕಾ ಹೇಳಿಕೊಂಡಿದ್ದರು. ಅದರಂತೆ ವಿಭಿನ್ನವಾಗಿರುವ ಪಾತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇನ್ನು ದೊಡ್ಡ ದೊಡ್ಡ ಪಾತ್ರಗಳನ್ನ ನಿಭಾಯಿಸುವ, ವಿಶಿಷ್ಠ ಪಾತ್ರಗಳಲ್ಲಿ ಮಿಂಚುವ ಹಂಬಲದಲ್ಲಿರುವ ಅವರು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳಲ್ಲಿಅವರು ಚೆಂದವಾಗಿ ಕಂಡಿದ್ದಾರೆ.

 

ಪರಭಾಷೆಗಳಿಂದ ಸಿನಿಮಾ ಅವಕಾಶಗಳು

ಇನ್ನು ಹರ್ಷಿಕಾರ ಈ ಹೊಸ ಫೋಟೋಗಳನ್ನು ನೋಡಿದ ಪರಭಾಷೆಯ ಕಾಲಿವುಡ್, ಟಾಲಿವುಡ್ ನ ನಿರ್ದೇಶಕರಿಂದ ಕರೆಗಳು ಬರುತ್ತಿವೆ. ಅಷ್ಟೇ ಅಲ್ಲ, ಇತ್ತೀಚೆಗೆ ತೀರಾ ಸೆಲೆಕ್ಟೀವ್ ಆಗಿರುವ ಹರ್ಷಿಕಾಗೆ ಹೊಸ ಪ್ರಯೋಗಗಳಲ್ಲಿ ಮಿಂಚುವ ಆಸೆಯಾಗಿದೆ. ಕ್ರಿಯೇಟೀವ್ ಟೀಮ್‌ ಗಳ  ಜೊತೆಗೂಡಿ ವಿಶಿಷ್ಠ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಯೋಚನೆಯಲ್ಲಿದ್ದಾರೆ.

 

ಮಂದಹಾಸ ಮೂಡಿಸಿದ ಫೋಟೋಗಳು

ಹರ್ಷಿಕಾ ಪೂಣಚ್ಚ ರ ಈ ಹೊಸ ಫೋಟೋ ಶೂಟ್ ಮಾಡಿದ್ದು, ಹೈದ್ರಾಬಾದ್ ನ ಫೋಟೋಗ್ರಫರ್ ಜಗದೀಶ್ ವರ್ಮಾ ಮತ್ತು ರಾಕೇಶ್ ಶ್ರೀ ಗಿರಿ.ಗೋವಿಂದ್ ಸಿಂಗ್ ಕುಮಾರ್ ಸಿಂಗ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಫ್ಯಾಶನ್ ಶೋವೊಂದರ ಅತಿಥಿಯಾಗಿ ಹೋಗಿದ್ದ ಇವರನ್ನು ನೋಡಿ, ಫೋಟೋಗ್ರಾಫರ್ ಸ್ವಇಚ್ಛೆಯಿಂದ ಬಂದು ಕ್ಲಿಕ್ ಮಾಡಿರುವ ಫೋಟೋಗಳಿವು. ಈಗಾಗಲೇ ಈ ಫೋಟೋಗಳು ಎಲ್ಲರ ಗಮನ ಸೆಳೆದಿದ್ದು, ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

Tags

Related Articles