ಸುದ್ದಿಗಳು

ರಾಜನ ಆಗಮನಕ್ಕಾಗಿ ಕಾಯುತ್ತಿರುವ ಚಂದನವನದ ಚಿಟ್ಟೆ

ಮದುವೆಯ ಬಗ್ಗೆ ಪರೋಕ್ಷವಾಗಿ ಹೇಳಿಕೊಂಡ ಹರ್ಷಿಕಾ

ಬೆಂಗಳೂರು, ಸೆ. 23: ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಇದೀಗ ರಾಜನಿಗಾಗಿ ಕಾಯುತ್ತಿದ್ದಾರೆ. ಯಾವ ರಾಜ ಎನ್ನುತ್ತಿದ್ದೀರಾ..??.. ಅದೇ ಮದುವೆಯಾಗುವ ವರ.. ಈ ಬಗ್ಗೆ ಅವರು ಪರೋಕ್ಷವಾಗಿ ಟ್ವಿಟ್ಟರ್ ಮತ್ತು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಚಿಟ್ಟೆಯ ಯಶಸ್ಸು

ಇತ್ತಿಚೆಗಷ್ಟೇ ಹರ್ಷಿಕಾ ಅಭಿನಯದ ‘ಚಿಟ್ಟೆ’ ಚಿತ್ರ ತೆರೆ ಕಂಡು ತಕ್ಕ ಮಟ್ಟಿಗೆ ಯಶಸ್ವಿಯಾಗಿತ್ತು. ಆ ಖುಷಿಯಲ್ಲಿ ತೇಲುತ್ತಿರುವ ಅವರು ಸದ್ಯ ‘ಉದ್ಘರ್ಷ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಮುಂದಿನ ದಿನಗಳಲ್ಲಿ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತೇನೆ ಎನ್ನುತ್ತಾರೆ. ಅದರಂತೆ ನಿನ್ನೆಯಷ್ಟೇ ಅವರು ತಮ್ಮ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ತನ್ನ ಸುಂದರ ಫೋಟೋ ಅಪ್ಲೋಡ್ ಮಾಡಿಕೊಂಡು ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

‘ಹೌದು, ನಾನು ರಾಣಿ.. ರಾಜನಿಗಾಗಿ ರಾಣಿ ಎಂದೂ ಕಾಯುವುದಿಲ್ಲ. ರಾಣಿಯಾಗಿರುವ ನಾನು ನನ್ನ ರಾಜ್ಯದಲ್ಲಿ ಬ್ಯುಸಿಯಾಗಿದ್ದೇನೆ. ರಾಜ ಬರುವವರೆಗೂ ನಾನು ರಾಜ್ಯದಲ್ಲಿ ಬ್ಯುಸಿ ಆಗಿರುತ್ತೇನೆ’ ಎಂದು ಪರೋಕ್ಷವಾಗಿ ಬರೆದುಕೊಳ್ಳುವ ಮೂಲಕ ರಾಜನಿಗಾಗಿ ಕಾಯುತ್ತಿದ್ದೇನೆ ಅಂತಾ ಹೇಳಿದ್ದಾರೆ.

ಯಾರು ಆ ರಾಜ..???

ರಾಜ ಬರುವವರೆಗೂ ಕಾಯುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಮದುವೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವಿಷಯಕ್ಕೆ ಸಂಭಂದಿಸಿದಂತೆ ಅವರ ಕನಸಿನ ರಾಜ ಯಾರು ಎನ್ನುವುದು ಮಾತ್ರ ಗೊತ್ತಿಲ್ಲ. ಆದರೆ ನೆಟ್ಟಿಗರು ಮಾತ್ರ ಅವರ ಬರಹಗಳಿಗೆ ಫಿದಾ ಆಗಿದ್ದಾರೆ.

Tags