ಸುದ್ದಿಗಳು

‘ಹೇಟ್ ಯೂ ರೋಮಿಯೋ’ಗೆ ಕುಂಬಳಕಾಯಿ ಪೂಜೆ

ಚಿತ್ರೀಕರಣ ಮುಗಿಸಿದ ವೆಬ್ ಸರಣಿ

ಬೆಂಗಳೂರು, ನ.24: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೋಮ್ ಬ್ಯಾನರ್ ಶ್ರೀ ಮುತ್ತು ಸಿನಿ ಸರ್ವಿಸ್ ಹಾಗೂ ಸಕ್ಕತ್ ಸ್ಟುಡಿಯೋ ಜಂಟಿಯಾಗಿ ನಿರ್ಮಿಸುತ್ತಿರುವ ‘ಹೇಟ್ ಯೂ ರೋಮಿಯೋ’ ವೆಬ್ ಸರಣಿಯ ಚಿತ್ರೀಕರಣ ಮುಕ್ತಾಯವಾಗಿದೆ.

ಸದ್ಯದಲ್ಲಿಯೇ ಬಿಡುಗಡೆ

ಹೇಟ್ ಯು ರೋಮಿಯೋ’ ವೆಬ್ ಸೀರಿಸ್ ಈಗಾಗಲೇ ತನ್ನ ಅನೇಕ ವಿಶೇಷ ಪೋಸ್ಟರ್ ಗಳಿಂದ ಗಮನ ಸೆಳೆದಿದೆ. ಇದರಲ್ಲಿ ಅರವಿಂದ್, ದಿಶಾ ಮದನ್, ವಿಕ್ಕಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಹಿಂದೆ ‘ಲೂಸ್ ಕನೆಕ್ಷನ್’ ವೆಬ್ ಸೀರೀಸ್ ಮಾಡಿದ್ದ ತಂಡವೇ ಇಲ್ಲಿಯೂ ಮುಂದುವರೆದಿದೆ. ಹಸೀನ್ ಖಾನ್ ಹಾಗೂ ಇಶಾಮ್ ಖಾನ್ ಈ ವೆಬ್ ನಿರ್ದೇಶಕರಾಗಿದ್ದಾರೆ.

ವೆಬ್ ಸರಣಿಗಳು

ಇತ್ತೀಚಿನ ದಿನಗಳಲ್ಲಿ ವೆಬ್ ಸರಣಿಗಳು ತುಸು ಜಾಸ್ತಿಯೇ ಸದ್ದು ಮಾಡುತ್ತಿವೆ. ಈಗಾಗಲೇ ‘ಜೋಶಿಲೆ’ ಯೂಟ್ಯೂಬ್ ನಲ್ಲಿ ಪ್ರಸಾರವಾಗುತ್ತಿದೆ. ಈಗ ‘ಹೇಟ್ ಯೂ ರೋಮಿಯೋ’ ಹಾಗೂ ‘ರಕ್ತಚಂದನ’ ಸರಣಿಗಳು ಚಿತ್ರೀಕರಣ ಮುಗಿಸಿದ್ದು, ಸದ್ಯದಲ್ಲಿಯೇ ಬರಲಿವೆ.

ಇನ್ನು ‘ಹೇಟ್ ಯೂ ರೋಮಿಯೋ” ವೆಬ್ ಸರಣಿಯು ದಕ್ಷಿಣ ಭಾರತದ ಅತಿ ದೊಡ್ಡ ವೆಬ್ ಸೀರೀಸ್ ಇದಾಗಿದೆ. ಇದೊಂದು ದೊಡ್ಡ ಕ್ಯಾನ್ವಾಸ್ ನಲ್ಲಿ ನಿರ್ಮಾಣವಾಗಿದ್ದು, ವಿಯಟ್ನಾಂನಲ್ಲಿ ಚಿತ್ರೀಕರಣ ನಡೆದಿದೆ. ಈ ಸರಣಿಯ ಮೂಲಕ ಕನ್ನಡದ ಮಾರುಕಟ್ಟೆಯು ವಿಸ್ತಾರವಾಗಲಿದೆ.

Tags