ವೈರಲ್ ನ್ಯೂಸ್ಸುದ್ದಿಗಳು

ಟ್ರಾಫಿಕ್ ಪೊಲೀಸರು ದಾಖಲಾತಿ ಕೇಳಿದಾಗ ತೋರಿಸಲು ಈತ ಮಾಡಿದ ಹೊಸ ಐಡಿಯಾ!

ದೇಶದೆಲ್ಲೆಡೆ ಹೊಸ ಟ್ರಾಫಿಕ್ ನಿಯಮದಿಂಗಾಗಿ ಜನರು ಈಗ ಪೇಚಾಡುವಂತಾಗಿದೆ. ಮನೆಯಿಂದ ಹೊರಗೆ ವಾಹನ ಇಳಿಸುವುದಕ್ಕೂ ಹಿಂದು ಮುಂದು ನೋಡ್ತಾರೆ. ಮನೆ ಮುಂದಿನ ರಸ್ತೆ, ಪಾದಾಚಾರಿ ರಸ್ತೆಯಲ್ಲಿ ಕಾರು ನಿಲ್ಲಿಸಿದರೆ ಇನ್ಮುಂದೆ ದಂಡ ಕಟ್ಟಬೇಕು. ಕಾರನ್ನು ಮನೆಯೊಳಗಡೆ ನಿಲ್ಲಿಸಬೇಕು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜೋಕ್​ಗಳು ಹರಿದಾಡುತ್ತಿವೆ. ಟ್ರಾಫಿಕ್ ನಿಯಮವನ್ನು ಅಣಕಿಸುವ ವಿಡಿಯೋಗಳು ಕೂಡ ಟ್ರೆಂಡ್ ಆಗಿವೆ.

ಅಂದಹಾಗೆ ಇನ್ಷುರೆನ್ಸ್​ ಏಜೆಂಟ್ ಆಗಿರುವ ರಾಮ್ ಶಾ ಎಂಬುವವರು ಬೈಕ್​ಗೆ ಸಂಬಂಧಿಸಿದ ದಾಖಲಾತಿ ಕೇಳಿದಾಗ ಟ್ರಾಫಿಕ್ ಪೊಲೀಸರಿಗೆ ನೋಡಲು ಸುಲಭವಾಗಲಿ ಎಂದು ತಮ್ಮ ಹೆಲ್ಮೆಟ್​ನ ನಾಲ್ಕೂ ಭಾಗದಲ್ಲೂ  ಡಿಎಲ್, ಆರ್​ಸಿ ಸೇರಿದಂತೆ ದಾಖಲಾತಿಗಳನ್ನು ಅಂಟಿಸಿಕೊಂಡಿದ್ದಾರೆ.

ಈ ವಿಡಿಯೋ ಫೇಸ್​​ಬುಕ್, ವಾಟ್ಸಾಪ್, ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಗುಜರಾತ್​ನಲ್ಲಿ ಟ್ರಾಫಿಕ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.

ಜನ್ಮದಿನದ ಸಂಭ್ರಮದಲ್ಲಿ ಪುಷ್ಕರ್: ವಿಶೇಷವಾಗಿ ವಿಶ್ ಮಾಡಿದ ಸಿಂಪಲ್ ಸುನಿ

#trafficrules #bikeman #trendingnews #trolltrafficrules

Tags