ಸುದ್ದಿಗಳು

ಅಭಿಮಾನಿಗಳಿಗೆ ಕಹಿ ಸುದ್ದಿ ಕೊಟ್ಟ ಸಮಂತಾ ಅಕ್ಕಿನೇನಿ

ನಟಿ ಸಮಂತಾ ಬಗ್ಗೆ ಹರಿದಾಡುತ್ತಿದ್ದ ಒಂದು ರೂಮರ್ ಅಂತೂ ನಿಜವಾಗಿದೆ. ಹೌದು, ಸಮಂತಾ 10 ತಿಂಗಳ ನಂತರ ಯಾವ ಚಿತ್ರಗಳಲ್ಲೂ ನಟಿಸುವುದಿಲ್ಲವಂತೆ.

ಇದರ ಅರ್ಥ ಸಮಂತಾ ಚಿತ್ರರಂಗದಿಂದ ನಿವೃತ್ತರಾಗಲಿದ್ದಾರೆ ಎಂದಲ್ಲ, ಅವರು ದೀರ್ಘ ವಿರಾಮ ತೆಗೆದುಕೊಳ್ಳಲು ಯೋಜಿಸುತ್ತಿದ್ದಾರೆ.

ಹೌದು, ಕಳೆದ ಎರಡು ವಾರಗಳಿಂದ ಸಮಂತಾ ಗಂಡ ನಾಗ ಚೈತನ್ಯ ಅವರೊಂದಿಗೆ ಕಾಲಕಳೆಯುತ್ತಿದ್ದರು.

ರಜಾದಿನಗಳನ್ನು ಕಳೆಯಲು ವಿದೇಶಕ್ಕೆ ತೆರಳಿದ್ದ  ಸಮಂತಾ ಇದೀಗ ಮತ್ತೆ ತಮ್ಮ ದೈನಂದಿನ ಸಿನಿಮಾ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ.

ಈ ಹಿಂದೆ ತೆಲುಗು ವೆಬ್ ಸೈಟ್ ನಲ್ಲಿ ಸಮಂತಾ ತನ್ನ ನಟನಾ ವೃತ್ತಿಯಿಂದ 2020 ರ ದ್ವಿತೀಯಾರ್ಧದಲ್ಲಿ ವಿರಾಮ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.

ಮುಂದಿನ ಬೇಸಿಗೆ ವೇಳೆಗೆ ಸಮಂತಾಗೆ 33 ವರ್ಷ ತುಂಬಲಿದ್ದು, ಕನಿಷ್ಠ ಇಬ್ಬರು ಮಕ್ಕಳನ್ನು ಪಡೆಯಲು ಆಕೆ ಬಯಸಿರುವುದರಿಂದ ಮುಂದೆ 10 ತಿಂಗಳ ನಂತರ ಚಲನಚಿತ್ರಗಳನ್ನು ಮಾಡುವುದಿಲ್ಲವಂತೆ.

ಕೆಂಪು ಮೊನೊಕಿನಿಯಲ್ಲಿ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ ವಿದಿಶಾ

#balkaninews #samanthaakkineni #samanthaakkinenimovies #samanthaakkinenifans

Tags