ಸುದ್ದಿಗಳು

ಈ ನವರಾತ್ರಿಗೆ ರುಚಿರುಚಿಯಾದ ಹೆಸರು ಕಾಳಿನ ಬರ್ಫಿ…

ಹೆಸರು ಕಾಳಿನ ಬರ್ಫಿ ಸವಿದಿದ್ದೀರಾ?

ಬರ್ಫಿ ಭಾರತದ ಒಂದು ದಟ್ಟನೆಯ ಹಾಲು ಆಧಾರಿತ ಸಿಹಿ ತಿನಿಸು. ಮೂಲತಃ ಭಾರತದ ಉತ್ತರ ಭಾಗದಿಂದ ಬಂದ ಬರ್ಫಿಯ ಹೆಸರು ಹಿಮ ಮತ್ತು ಮಂಜುಗಡ್ಡೆಯ ಹಿಂದಿ ಶಬ್ದದಿಂದ ಬಂದಿದೆ. ಕಾಯಿ ಬರ್ಫಿ, ಕಾಜು ಬರ್ಫಿ, ಬೇಸನ್ ಬರ್ಫಿ, ಪಿಸ್ತಾ ಬರ್ಫಿ ಹೀಗೆ ಅನೇಕ ರೀತಿಯ ಬರ್ಫಿಗಳಿವೆ. ಅದರಲ್ಲಿ ಹೆಸರು ಕಾಳಿನ ಬರ್ಫಿ ನೀವು ಸವಿದಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ಹೆಸರು ಕಾಳಿನ ಬರ್ಫಿ ಮಾಡುವ ವಿಧಾನ…

ಬೇಕಾಗುವ ಸಾಮಾಗ್ರಿ

ಒಂದು ಕಪ್  ಮೊಳಕೆ ಒಡೆದ ಹೆಸರು ಕಾಳು

ಒಂದು ಕಪ್ ಸಕ್ಕರೆ

ಅರ್ ಕಪ್ ಖೋವಾ

ಸ್ವಲ್ಪ ಏಲಕ್ಕಿ ಪುಡಿ

ಸ್ವಲ್ಪ ಗೋಡಂಬಿ

ಬಾದಾಮಿ.

ಮಾಡುವ ವಿಧಾನ
ಹೆಸರು ಕಾಳನ್ನು ಹಬೆ ಬರುವಂತೆ ಬೇಯಿಸಿ. ಆರಿದ ನಂತರ ಅದನ್ನು ತರಿತರಿಯಾಗಿ ರುಬ್ಬಬೇಕು. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ರುಬ್ಬಿದ ಹೆಸರು ಕಾಳು ಸೇರಿಸಿ. ನಂತರ ಇದಕ್ಕೆ ಹಾಲು, ಸಕ್ಕರೆ ಮತ್ತು ಖೋವಾವನ್ನು ಸೇರಿಸಿ. ಏಲಕ್ಕಿ ಪುಡಿ ಹಾಕಿರಿ. ನಡು ನಡುವೆ ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಬೇಕು. ತಳ ಬಿಡುವವೆರೆಗೆ ಮಗುಚುತ್ತಾ ನಂತರ ತಟ್ಟೆಯಲ್ಲಿ ತುಪ್ಪ ಸವರಿ ಈ ಬಾಣಲೆಯಲ್ಲಿದ್ದುದ್ನನು ತಟ್ಟೆಗೆ ಸುರುವಬೇಕು. ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ. ಅದರ ಮೇಲೆ ಗೋಡಂಬಿ, ಬಾದಾಮಿಯಿಂದ ಅಲಂಕರಿಸರಿಸಿದರೆ ಹೆಸರು ಕಾಳು ಬರ್ಫಿ ರೆಡಿ…

Related image

 

Tags