ಸುದ್ದಿಗಳು

ಹಿಂದಿ ಬಿಗ್ ಬಾಸ್ ಸೀಸನ್ ಗೆ ಅಡಲ್ಟ್ ಸ್ಟಾರ್

ಬ್ರಿಟನ್ ಮೂಲದ ಅಡಲ್ಟ್​​ ಸ್ಟಾರ್

ಬೆಂಗಳೂರು, ಜು.19: ಹಿಂದಿ ಬಿಗ್​ಬಾಸ್​ 12ನೇ ಸೀಸನ್​ಗೆ ಭರದ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡ ಶುರುವಾಗಿದ್ದು, ಮೂಲಗಳ ಪ್ರಕಾರ ಬಿಗ್​ಬಾಸ್​ ಮನೆಗೆ ಬ್ರಿಟನ್​ ಮೂಲದ ಅಡಲ್ಟ್​ ಚಿತ್ರದ ನಟ ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲಿದ್ದಾರೆ.

ಅವಳು ಬಂದ್ರೆ ಮಾತ್ರ ನಾನು ಬರ್ತಿನಿ

ಅಡಲ್ಟ್​ ಸ್ಟಾರ್​ ಡ್ಯಾನಿ ಡಿ ಬಿಗ್​ಬಾಸ್​ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರ ಮ್ಯಾನೇಜರ್​ ಜತೆ ಬಿಗ್​ಬಾಸ್​ ತಂಡ ಮಾತುಕತೆ ನಡೆಸಿದ್ದು, ಡ್ಯಾನಿ ಬಿಗ್​ಬಾಸ್​ಗೆ ಒಪ್ಪಿಗೆ ನೀಡುವ ಮುನ್ನ ಕೆಲವು ಷರತ್ತುಗಳನ್ನು ಹಾಕಿದ್ದಾರಂತೆ. ಅವರ ಸ್ನೇಹಿತೆ, ನಟಿ ಮಹಿಕಾ ಶರ್ಮಾ ಬಿಗ್​ಬಾಸ್​ಗೆ ಬಂದರೆ ಮಾತ್ರ ತಾನು ಬರುವುದಾಗಿ ಹೇಳಿಕೊಂಡಿದ್ಧಾರೆ.

ಇನ್ನು ಡ್ಯಾನಿ ಹಾಗೂ ಮಹಿಕಾ ಸದ್ಯ ಮಾಡರ್ನ್​ ಕಲ್ಚರ್​ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹಿಕಾ, ಈ ಹಿಂದೆ ಎಫ್​ಐಆರ್ ಹಾಗೂ ರಾಮಾಯಣ ದಂತಹ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

Tags

Related Articles

Leave a Reply

Your email address will not be published. Required fields are marked *