ಸುದ್ದಿಗಳು

‘ಉಡ್ತಾ ಪಂಜಾಬ್‌’ 100 ಭಾಗಗಳ ಕತ್ತರಿಸಿದ ಪಾಕ್ ಸೆನ್ಸಾರ್!

ಪಾಕಿಸ್ತಾನದಲ್ಲಿ ನಿಷೇಧ ಕಂಡ ಬಾಲಿವುಡ್ ಸಿನಿಮಾಗಳು

ಬೆಂಗಳೂರು, ಸೆ.22:  ಮೂಲತಃ `ಬ್ರಿಟಿಷರ ದಬ್ಬಾಳಿಕೆಗೆ  ತಮ್ಮನ್ನು ಒಡ್ಡಿಕೊಂಡು ಮೂರೂವರೆ ಶತಮಾನಗಳ ಕಾಲ  ನಲುಗಿಹೋದ ಭಾರತಕ್ಕೆ ವಿಭಜನೆಯ ಬಲಪೆಟ್ಟು ಕೊಟ್ಟವರೇ ಗಾಂಧೀ-ನೆಹರೂ-ಜಿನ್ನಾ..! ಒಂದೇ ಬಳ್ಳಿಯ ಹೂಗಳಾಗಿದ್ದವರನ್ನು ರಾತ್ರೋ- ರಾತ್ರಿ ದಾಯಾದಿಗಳನ್ನಾಗಿಸಿ  ಇನ್ನುಳಿದ ಜೀವಮಾನ ಪರ್ಯಂತ  ಕಾಡುತ್ತಾ, ಕಾದಾಡುತ್ತಾ ಬದುಕಿ ಸಾಯುತ್ತಿರಿ ಎಂದು ಅವರೂ ಸತ್ತು ನರಕಕ್ಕೆ ಸೇರಿಕೊಂಡರೋ ಏನೋ..!

ಭರತಮಾತೆಯ ಮಿದುಳು, ಕೈ-ಭುಜಗಳೆನಿಸಿದ್ದ ಪೂರ್ವ ಪಾಕಿಸ್ತಾನ,  ಪಶ್ಚಿಮ ಪಾಕಿಸ್ತಾನಗಳಾಗಿ ಹರಿದುಹಂಚಿಹೋದ ಮೇಲೆ ನಿತ್ಯವೂ ಕದನ  ಆರಂಭವಾಗಿತ್ತು. ನಿಖರವಾಗಿ ಭಾರತ-ಪಾಕಿಸ್ತಾನ್ ಸ್ವತಂತ್ರ ದೇಶಗಳಾಗಿ ಕೇವಲ 67 ದಿವಸಗಳಲ್ಲೇ ಪ್ರಥಮ ಕಾಶ‍್ಮೀರ ಯುದ್ಧ ಆರಂಭವಾಗಿಹೋಗಿತ್ತು. ಕರಾರುವಾಕ್ಕಾಗಿ 67 ದಿನಗಳ ಕಾಲ ಈ ಪ್ರಥಮ ಯುದ್ಧ ನಡೆದಿತ್ತು.

ಇರಲಿ, ಸಾಮಾಜಿಕವಾಗಿಯೂ ಈ ಯುದ್ಧಗಳು ಸತತ 71 ವರುಷಗಳಿಂದಲೂ ನಡೆದೇ ಇದೆ. ಸಿನೆಮಾ ಈ ಎರಡೂ ಸಮಾಜಗಳ ಮುಖ್ಯ ಅಂಗವಾಗಿದ್ದು,  ಇಂದಿಗೂ ಅನವರತ ಯುದ್ಧಗಳೂ ನಡೆದೇ ಇವೆ.ಇತ್ತೀಚೆಗೆ ಭಾರತದ ಅನೇಕ ಸಿನಿಮಾಗಳು ಪಾಕಿಸ್ಥಾನದಲ್ಲಿ ನಿಷೇಧವಾಗುತ್ತಿದ್ದು,  ಅನುಷ್ಕಾ  ಶರ್ಮಾ  ನಟನೆಯ “ ಪರಿ “  ಚಿತ್ರಕ್ಕೆ ಪಾಕಿಸ್ತಾನದಲ್ಲಿ ತಡೆಯೊಡ್ಡಲಾಯಿತು. ಚಿತ್ರದಲ್ಲಿ ಮಾಟಮಂತ್ರ, ಮುಸ್ಲೀಮೇತರ ಮೌಲ್ಯಗಳು ಸೇರಿದಂತೆ ಮುಸ್ಲಿಮರ ಬಗ್ಗೆ ನಕಾರಾತ್ಮಕವಾಗಿ ತೋರಿಸಲಾಗಿದೆ ಎಂದು ಪಾಕ್ ಸೆನ್ಸಾರ್ ಮಂಡಳಿ ಚಿತ್ರಪ್ರದರ್ಶನಕ್ಕೆ ತಡೆಯೊಡ್ಡಿದ್ದು ಇದೆ.

ಪಾಕಿಸ್ತಾನದಲ್ಲಿ ಪ್ರದರ್ಶನ ಕಾಣಲು ಸೆನ್ಸಾರ್ ಮಂಡಳಿ ತಡೆ

ಅಕ್ಷಯ್ ಕುಮಾರ್ ಅಭಿನಯದ ‘ಪ್ಯಾಡ್ಮ್ಯಾನ್’ ಹಾಗೂ  ನೀರಜ್ ಪಾಂಡೆ  ನಿರ್ದೇಶನದ  ‘ಅಯ್ಯಾರಿ’       ಸಿನಿಮಾ ಕೂಡ  ಪಾಕ್ನಲ್ಲಿ ಪ್ರದರ್ಶನ ಕಾಣಲು ಪಾಕಿಸ್ತಾನ ಸೆನ್ಸಾರ್ ಮಂಡಳಿತಡೆಯೊಡ್ಡಿತ್ತು.17ನೇ ಶತಮಾನದ ಮರಾಠ ಪೇಶ್ವೆಯ ಕಥಾಹಂದರವನ್ನು ಹೊಂದಿರುವ ‘ಬಾಜಿರಾವ್ ಮಸ್ತಾನಿ’ ಸಿನಿಮಾದಲ್ಲಿ ಇಸ್ಲಾಂ ವಿರೋಧಿ ಅಂಶಗಳಿರುವುದರಿಂದ  ಚಿತ್ರ ಬಿಡುಗಡೆಗೆ ಪಾಕ್  ಸೆನ್ಸಾರ್ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು.

ಆದರೆ ಶಾರುಕ್ ಖಾನ್, ಕಾಜೋಲ್ ಅಭಿನಯದ ‘ದಿಲ್ ವಾಲೆ’ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿತ್ತು.

ಪಾಕಿಸ್ತಾನಿ ನೆಲದ ನಿಯಮದ ಪ್ರಕಾರ ವಿದೇಶಿ ಚಿತ್ರಗಳಿಗೆ ಅವಕಾಶ ಸೀಮಿತವಾಗಿದೆ. ಭಾರತೀಯ  ಹಾಗೂ ವಿದೇಶಿ ವಿಚಾರಗಳ ಬಗ್ಗೆಯೇ ಹೆಚ್ಚು ಪ್ರಕಟಿಸಿದ್ದಕ್ಕಾಗಿ ಪಾಕಿಸ್ತಾನದ 10 ಟಿವಿ ಚಾನೆಲ್ಗಳು ಭಾರಿ ಮೊತ್ತದ ದಂಡ ತೆರಬೇಕಾಗಿದ್ದ ಪರಿಸ್ಥಿತಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಅಗತ್ಯಕ್ಕಿಂತ ಹೆಚ್ಚು ಭಾರತದ ಸುದ್ದಿಗಳು, ವಿದೇಶಿ ವಿಚಾರಗಳ ಬಗ್ಗೆ ಪ್ರಸಾರ ಮಾಡಿದ 10 ಮನೋರಂಜನಾ ಚಾನೆಲ್‌ಗಳಿಗೆ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣಾ ಪ್ರಾಧಿಕಾರ ಬರೋಬ್ಬರಿ 1 ಕೋಟಿ ದಂಡ ವಿಧಿಸಲು  ಲಾಹೋರ್ ಹೈಕೋರ್ಟ್ 2013ರಲ್ಲಿ ಸೂಚಿಸಿತ್ತು.ಪಾಕಿಸ್ತಾನಿ ನೆಲದ ನಿಯಮದ ಪ್ರಕಾರ ವಿದೇಶಿ ಚಿತ್ರಗಳಿಗೆ ಅವಕಾಶ ಸೀಮಿತವಾಗಿದೆ.

ಬಿಡುಗಡೆಗೂ ಮುನ್ನ ಸೆನ್ಸಾರ್ ಕಾರಣಕ್ಕಾಗಿ ವಿವಾದಕ್ಕೆ ಕಾರಣವಾಗಿದ್ದ ‘ಉಡ್ತಾ ಪಂಜಾಬ್‌’ ಸಿನಿಮಾದ  100 ಭಾಗಗಳಿಗೆ ಕತ್ತರಿ ಪ್ರಯೋಗಿಸಿದ ಬಳಿಕ ಪಾಕಿಸ್ತಾನದ ಸೆನ್ಸಾರ್ ಮಂಡಳಿಸಿನಿಮಾ ಬಿಡುಗಡೆ ಮಾಡಿದ್ದರಿಂದ, ಇಲ್ಲಿ ನಕಲಿ ಸಿಡಿಗಳ ಮಾರಾಟ ಹೆಚ್ಚಾಗಿದ್ದು ಸುದ್ದಿಯಾಯಿತು.

ಯಾವ ಯಾವ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ನೋ ಎಂದಿದೆ

ಬಾಲಿವುಡ್‌ನ ಆಕ್ಷನ್‌ ಕಿಂಗ್ ಅಕ್ಷಯ್ ಕುಮಾರ್‌ ನಟಿಸಿರುವ ‘ಬೇಬಿ’ ಚಿತ್ರಕ್ಕೂ ಪಾಕಿಸ್ತಾನ ನಿಷೇಧ ಹೇರಿತ್ತು.  ಉಗ್ರರನ್ನು ಸದೆಬಡಿಯುವ ಭಾರತೀಯ ಬೇಹುಗಾರನ ಕತೆ ಹೊಂದಿರುವ ಈಸಿನಿಮಾದಲ್ಲಿ “ಮುಸ್ಲಿಮರನ್ನು ನಕಾರಾತ್ಮಕವಾಗಿ ಬಿಂಬಿಸಿರುವ ಹಾಗೂ ಋಣಾತ್ಮಕ ಪಾತ್ರಗಳಿಗೆ ಮುಸ್ಲಿಂ ಹೆಸರಿರುವ ಕಾರಣದಿಂದ ಸಿನಿಮಾವನ್ನು ನಿಷೇಧಿಸುವ ನಿರ್ಧಾರಕ್ಕೆ ಅಲ್ಲಿನಸೆನ್ಸಾರ್ ಬೋರ್ಡ್ ಬಂದಿತ್ತು ಎನ್ನಲಾಗಿದೆ.ಹೀಗಾಗೆ ಪಾಕ್ ವಿರೋಧಿ ವಿಚಾರಗಳಿರುವ ಹಲವು ಸಿನಿಮಾಗಳು ಪಾಕಿಸ್ತಾನದಲ್ಲಿ ತೆರೆ ಕಾಣಲು ಸೆನ್ಸಾರ್ ಮಂಡಳಿ ನೋ ಅಬ್ಜೆಕ್ಷನ್ ಸರ್ಟಿಫೀಕೇಟ್ ಕೊಡಲು ನಿರಾಕರಿಸಿದರೂ,   ರಾಜಕೀಯ, ಗಡಿ ವಿಚಾರ ಹಾಗೂ ಕ್ರೀಡಾ ವಿಚಾರಗಳಿಗೆ ಸಂಬಂಧಿಸಿದಂತೆ ಕೂಡ ಹಲವು ಚಿತ್ರಗಳು ಪಾಕಿಸ್ತಾನದಲ್ಲಿ ಬ್ಯಾನ್ ಆಗಿದ್ದು ಇದೆ.

ವೈಸ್ರಾಯ್ ಹೌಸ್

ವೈಸ್ರಾಯ್ ಹೌಸ್ ಚಿತ್ರದಲ್ಲಿ ಹಿಂದೂಮುಸ್ಲಿಂ ಏಕತೆಗೆ ಹೋರಾಡುತ್ತಿದ್ದ ಮೊಹಮ್ಮದ್ ಅಲಿ ಜಿನ್ನಾರ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ ಎಂಬ ಕಾರಣ ನೀಡಿ ಚಿತ್ರವನ್ನು ಬ್ಯಾನ್ ಮಾಡಿದ್ದರೆ, ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರದಲ್ಲಿ ಭಾರತೀಯ ಧ್ವಜ ಹಾಗೂ ರಾಷ್ಟ್ರಗೀತೆ ಇದೆ ಎಂಬ ಕಾರಣಕ್ಕೆ ಪ್ರದರ್ಶನಕ್ಕೆ ಅಡ್ಡಿಪಡಿಸಲಾಯಿತು. ನಾಮ್ ಶಬಾನಾ ದಲ್ಲಿ ಪಾಕಿಸ್ತಾನದಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದರೆ, ಜಾಲಿ ಎಲ್ಎಲ್ಬಿ 2 ಚಿತ್ರದಲ್ಲಿ ಕಾಶ್ಮೀರ ವಿಚಾರವನ್ನು ತೋರಿಸಲಾಗಿದೆ ಎಂಬ ಕಾರಣ ನೀಡಿ ಬ್ಯಾನ್ ಮಾಡಲಾಯಿತು.ರಾಯಿಸ್

ಶಾರೂಖ್ ಅಭಿನಯದ ರಾಯಿಸ್ ನಲ್ಲಿ ಮುಸ್ಲಿಮರನ್ನು ಉಗ್ರರನ್ನಾಗಿ, ಮತ್ತುಕೆಟ್ಟವರನ್ನಾಗಿ ಬಿಂಬಿಸಲಾಗಿದೆ ಎಂಬ ಕಾರಣ ನೀಡಿಪಾಕ್ ಸೆನ್ಸಾರ್ ಬೋರ್ಡ್ ಚಿತ್ರ ಪ್ರದರ್ಶನಕ್ಕೆ ಅವಕಾಶನೀಡಲಿಲ್ಲ.ಡಿಶೂಮ್

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುವ ಪಂದ್ಯ ಆರಂಭಕ್ಕೆ ಮೊದಲು ಭಾರತೀಯ ಆಟಗಾರನನ್ನು ಕಿಡ್ನಾಪ್ ಮಾಡಲಾಗುತ್ತದೆ. ಚಿತ್ರದಲ್ಲಿ ಪಾಕಿಸ್ತಾನಿಯರ ಆಲೋಚಿಸುವ ಕ್ರಮವೇತಪ್ಪು ಎಂಬಂತೆ ಬಿಂಬಿಸಲಾಗಿದೆ ಎಂಬ ಕಾರಣ ನೀಡಿ ಬ್ಯಾನ್ ಮಾಡಲಾಯಿತು.ನೀರ್ಜಾ

ಸೋನಂಕಪೂರ್ ಅಭಿನಯದ ನೀರ್ಜಾ ಸಿನಿಮಾದಲ್ಲೂ ಪಾಕಿಸ್ತಾನವನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬ ಕಾರಣ ನೀಡಿ ಬ್ಯಾನ್ ಮಾಡಲಾಯಿತುಅಂಬಾರ್ಸರಿಯಾ

ಭಾರತೀಯ ಗುಪ್ತಚರ ಇಲಾಖೆನ್ನು ನೇರವಾಗಿ ಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ ಎಂಬ ಕಾರಣಕ್ಕಾಗಿ ನಿಷೇಧ ಹೇರಲಾಯಿತು. ‘ಹೈದರ್’ ಚಿತ್ರದಲ್ಲಿ ಕಾಶ್ಮೀರ ಬಂಡಾಯ ವಿಚಾರವನ್ನು ತೋರಿಸಲಾಗಿತ್ತು.ರಾಂಜನಾ

ಹಿಂದೂ ಯುವಕನೊಂದಿಗೆ ಪ್ರೀತಿಗೆ ಬೀಳುವ ಮುಸಲ್ಮಾನ್ ಹುಡುಗಿಯೊಬ್ಬಳ ಕತೆಯಾಧಾರಿತ ಚಿತ್ರ.ಏಕ್ತಾ ಟೈಗರ್, ಏಜೆಂಟ್ ವಿನೋದ್ ಚಿತ್ರಗಳನ್ನು ಕೂಡ ಗುಪ್ತಚರ ಇಲಾಖೆಗೆ ಸಂಬಂಧಿಸಿದ ಪಾತ್ರಗಳು ಇದ್ದ ಕಾರಣಕ್ಕಾಗಿ ನಿಷೇಧಿಸಲಾಯಿತು.

Tags