ಬಾಲ್ಕನಿಯಿಂದವಿಡಿಯೋಗಳುಸುದ್ದಿಗಳು

ಹಿಟ್ ಲಿಸ್ಟ್ ಗೆ ಸೇರಿದ ‘ದಶರಥ’ ಪ್ರೊಮೋ

ಕ್ರೇಜಿಸ್ಟಾರ್ ವಿ ರವಿಚಂದ್ರನ್, ಸೊನಿಯಾ ಅಭಿನಯದ ‘ದಶರಥ’ ಚಿತ್ರವು ಇದೇ ತಿಂಗಳ 26 ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಇದೇ ವೇಳೆ ಚಿತ್ರದ ಪ್ರೋಮೋವೊಂದು ರಿಲೀಸ್ ಆಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.

ಈ ಪ್ರೋಮೋದಲ್ಲಿ ಲಾಯರ್ ಆಗಿರುವ ರವಿಚಂದ್ರನ್ ರವರು ‘ಒಂದು ಹೆಣ್ಣಿನ ಮೇಲೆ ಅತ್ಯಾಚಾರ ಆಗುವಾಗ, ಆ ಹೆಣ್ಣು ಅವನನ್ನು ಸಾಯೋವಾಗ ಹೊಡೆದರೂ, ಅಥವಾ ಸಾಯಿಸಿದರೂ ಅದು ಕೊಲೆ ಅಂತ ಅನಿಸಿಕೊಳ್ಳಲ್ಲಾ..’ ಎಂಬ ಡೈಲಾಗ್ ಹೇಳುತ್ತಾರೆ. ಸದ್ಯ ಈ ಪ್ರೊಮೋ ನೋಡುಗರಿಗೆ ಇಷ್ಟವಾಗುತ್ತಿದೆ.

“ಇದು ರಾಮಾಯಣದ ಆಧುನಿಕ ಕಥೆ. ಚಿತ್ರದಲ್ಲಿ ದಶರಥನ ಜೀವನ ಮತ್ತು ಋಷ್ಯಶೃಂಗನನ್ನು ಮದುವೆಯೆಯಾದ ಶಾಂತಳ ಮತ್ತೊಂದು ಬದಿಯನ್ನು ಈ ಆಧುನಿಕ ಕಥೆಯ ಮೂಲಕ ತೋರಿಸಲಾಗುತ್ತಿದೆ. ಸೀತೆ ರಾಮನ ಪರೀಕ್ಷೆಗಳನ್ನು ಎದುರಿಸಬೇಕಾಯಿತು ಎಂಬುದು ಗೊತ್ತಿರುವ ಸಂಗತಿ, ಅಂತಹುದ್ದೇ ಪರಿಸ್ಥಿತಿಯನ್ನು ಇಲ್ಲಿ ನೋಡಬಹುದು” ಎಂದು ನಿರ್ದೇಶಕರಾದ ಎಂ ಎಸ್ ರಮೇಶ್ ಹೇಳುತ್ತಾರೆ.

ಬಹಳ ವರ್ಷಗಳ ನಂತರ ರವಿಚಂದ್ರನ್ ಲಾಯರ್ ಪಾತ್ರವನ್ನು ನಿರ್ವಹಿಸಿದ್ದು, ಅವರಿಗೆ ಜೋಡಿಯಾಗಿ ‘ಚಂದು’ ಖ್ಯಾತಿಯ ಸೋನಿಯಾ ನಾಯಕಿಯಾಗಿದ್ದಾರೆ. ಉಳಿದಂತೆ ಮೇಘಶ್ರೀ, ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರೇಕ್ಷಕರ ಒತ್ತಾಯದ ಮೇರೆಗೆ ರೀ-ರಿಲೀಸ್ ಆಗಲಿರುವ ‘ಕುರುಕ್ಷೇತ್ರ’ ಟ್ರೈಲರ್!!?!!

#hitof #dasharatha #promo #balkaninews #filmnews, #kannadasuddigalu #ravichandran, #priyamani,#soniya

Tags