ಸುದ್ದಿಗಳು

ಹಾಲಿವುಡ್ ಸಿನಿಮಾ ಆಫರ್ ನನ್ನು ಕಿಂಗ್ ಖಾನ್ ನಿರಾಕರಿಸಿದ್ದಾದರೂ ಯಾಕೆ?

ಇಷ್ಟರವರೆಗೂ ಯಾವುದೇ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿಲ್ಲ, ಅದಕ್ಕೆ ಕಾರಣ ಇಂಗ್ಲೀಷ್...

ಹಾಲಿವುಡ್ ನಲ್ಲಿ ಯಾಕೆ ನಟಿಸುತ್ತಿಲ್ಲ ಎಂಬುದಕ್ಕೆ ಉತ್ತರ ಶಾರುಖ್ ಅವರೇ ನೀಡಿದ್ದಾರೆ….

ಮುಂಬೈ,ಆ.30 : ಬಾಲಿವುಡ್ ನಿಂದ ಹಾಲಿವುಡ್ ನಲ್ಲಿ ಅನೇಕ ನಟ ನಟಿಯರು ನಟಿಸಿದ್ದಾರೆ. ಹಾಲಿವುಡ್ ನ ಸಿನಿಮಾಗಳಲ್ಲಿ ನಟಿಸಲು ನಟ ನಟಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹಾಲಿವಡ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಅಂದರೆ ಸುಮ್ಮನೆನಾ? ಆದರೆ ಬಾಲಿವುಡ್ ಕಿಂಗ್ ಖಾನ್ ಮಾತ್ರ ಅವಕಾಶವಿದ್ದರೂ ಕೂಡ ಹಾಲಿವುಡ್ ಗೆ ಹಾರಲಿಲ್ಲ.  ಕಾರಣ ಏನಿರಬಹುದು ಎಂಬುದು ಮುಂದೆ ಓದಿ…

ಇಂಗ್ಲೀಷ್ ಗೊತ್ತಿಲ್ಲ..

ಹಾಲಿವುಡ್ ನಲ್ಲಿ ಯಾಕೆ ನಟಿಸುತ್ತಿಲ್ಲ ಎಂಬುದಕ್ಕೆ ಉತ್ತರ ಶಾರುಖ್ ಅವರೇ ನೀಡಿದ್ದಾರೆ. “ನಟಿ ಪ್ರಿಯಾಂಕಾ ಚೋಪ್ರಾ, ನವಾಜುದ್ದೀನ್ ಸಿದ್ಧಿಕಿ, ಇರ್ಫಾನ್ ಖಾನ್ ಸೇರಿದಂತೆ ಸಾಕಷ್ಟು ತಾರೆಯರು ಹಾಲಿವುಡ್ ​ನಲ್ಲಿ ಮಿಂಚಿದ್ದಾರೆ. ಅದೃಷ್ಟದ ಪರೀಕ್ಷೆ ಅವರ ಕೈ ಹಿಡಿದಿದೆ. ಆದರೆ, ನಾನು ಮಾತ್ರ ಬಾಲಿವುಡ್​ನಲ್ಲೇ ಉಳಿದಿದ್ದೇನೆ. ಇಷ್ಟರವರೆಗೂ ಯಾವುದೇ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಿಲ್ಲ. ಅದಕ್ಕೆ ಕಾರಣ ಇಂಗ್ಲೀಷ್. ನನಗೆ ಇಂಗ್ಲೀಷ್ ಅಷ್ಟು ಚೆನ್ನಾಗಿ ಬರುವುದಿಲ್ಲ. ಹಾಗಾಗಿ ನಾನು ಇಲ್ಲಿಯೇ ಉಳಿದಿದ್ದೇನೆ “ ಎಂದಿದ್ದಾರೆ.

ಹಾಲಿವುಡ್​ ನಲ್ಲಿ ಪರಿಚಯಿಸಬೇಕು
ಅಲ್ಲದೆ “ಬಾಲಿವುಡ್ ಸಿನಿಮಾಗಳನ್ನು ಹಾಲಿವುಡ್​ ನಲ್ಲಿ ಪರಿಚಯಿಸಬೇಕು ಎನ್ನುವುದು ನನ್ನ ಆಸೆ ಆಗಿದೆ. ಭಾರತೀಯ ನಟ-ನಟಿ ಯಾವತ್ತೂ ಹಾಲಿವುಡ್​ ನಲ್ಲಿ ನಟಿಸಬೇಕು ಎಂದು ಅಂದುಕೊಂಡುರುವುದಿಲ್ಲ. ಇಲ್ಲಿರುವ ನಮ್ಮ ನಿರ್ದೇಶಕರೊಂದಿಗೆ ಕೆಲಸ ಮಾಡಬೇಕು” ಎಂದು ಹೇಳುವುದರ ಮೂಲಕ ಅವರು ಈಗಾಗಲೇ ಹಾಲಿವುಡ್​ಗೆ ಹಾರಿದವರಿಗೆ  ಟಾಂಗ್ ಕೊಟ್ಟ ಹಾಗೆಯೂ ಆಯಿತು..ಶಾರುಖ್ ಖಾನ್ ಅಭಿನಯದ ‘ಜೀರೋ’ ಚಿತ್ರದಲ್ಲಿ ಅಭಿನಯಿಸಿದ್ದು  ಟೀಸರ್ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..

Tags

Related Articles