ಸುದ್ದಿಗಳು

‘ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ 3’ ಚಿತ್ರಕ್ಕೆ ಹಿಂದಿರುಗದ ಡೇವ್ ಬಟಿಸ್ಟಾ

ಅಮೇರಿಕನ್ ನಟ ಡೇವ್ ಬಟಿಸ್ಟಾ

ಡ್ರಾಕ್ಸ್ ನ ಎಲ್ಲಾ ಅಭಿಮಾನಿಗಳಿಗೆ ಕೆಟ್ಟ ಸುದ್ದಿ, ಅಮೇರಿಕನ್ ನಟ ಡೇವ್ ಬಟಿಸ್ಟಾ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ 3’ ಚಿತ್ರಕ್ಕೆ ಹಿಂತಿರುಗುತ್ತಿಲ್ಲ.

ಡೆಡ್ಲೈನ್ ಪತ್ರಿಕೆ ವರದಿ

ಡ್ರಾಕ್ಸ್ ಪಾತ್ರವನ್ನು ನಿರ್ವಹಿಸುತ್ತಿರುವ ಹಾಲಿವುಡ್ ತಾರೆ ‘ಜೊನಾಥನ್ ರಾಸ್ ಶೋ’ ಡಿಸ್ನಿ ವಿರುದ್ಧ ಮಾತನಾಡಿ, ವಿವಾದಾತ್ಮಕ ಟ್ವೀಟ್ ಗಳನ್ನು ಮಾಡಿದ ನಂತರ ‘ಗಾರ್ಡಿಯನ್ಸ್ ಆಫ್ ದ ಗ್ಯಾಲಕ್ಸಿ’ ನಿರ್ದೇಶಕ ಜೇಮ್ಸ್ ಗುನ್ ಅವರನ್ನು ಹೇಗೆ ವಜಾ ಮಾಡಲಾಯಿತು ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು.ನಿರ್ದೇಶಕನ ಪರವಾಗಿ ನಟ ಡೇವ್ ಬಟಿಸ್ಟಾ ಮಾತನಾಡಿರುವುದಾಗಿ ಡೆಡ್ಲೈನ್ ಪತ್ರಿಕೆ ವರದಿ ಮಾಡಿದೆ. ಫ್ರ್ಯಾಂಚೈಸ್ ನ ಮೂರನೇ ಚಿತ್ರ ಕೇಳಿದಾಗ, ಬಟಿಸ್ಟಾ “ಇದು ಕಹಿ-ಸಿಹಿ ಸಂಭಾಷಣೆ. ಏಕೆಂದರೆ ಜೇಮ್ಸ್ ಗುನ್ ಅವರೊಂದಿಗೆ ಏನು ಮಾಡಿದ್ದಾರೋ, ಆ ಬಗ್ಗೆ ನನಗೆ ಸಂತೋಷವಾಗಿಲ್ಲ” ಎಂದಿದ್ದಾರೆ.

ಅವರು ಡಿಸ್ನಿಯಲ್ಲಿ ಮುಂದುವರಿಯುವ ಬಗ್ಗೆ ಖಚಿತವಾಗಿಲ್ಲ. “ಡಿಸ್ನಿ ಚಲನಚಿತ್ರವನ್ನು ನಿಲ್ಲಿಸುತ್ತಿರುವಂತೆ ಭಾಸವಾಗುತ್ತಿದೆ. ಅಲ್ಲದೇ ಸದ್ಯದ ಮಟ್ಟಿಗೆ ಈ ಚಿತ್ರ ಸ್ಥಗಿತಗೊಂಡಿದೆ. ನಿಮ್ಮೊಂದಿಗೆ ಪ್ರಾಮಾಣಿಕವಾಗಿ ಹೇಳಲು ಬಯಸುವುದೇನೆಂದರೆ ನಾನು ಡಿಸ್ನಿಗಾಗಿ ಕೆಲಸ ಮಾಡುತ್ತೇನೆ ಎಂಬುದು ನನಗೆ ಖಚಿತವಿಲ್ಲ” ಎಂದಿದ್ದಾರೆ.

ಬಟಿಸ್ಟಾ ಅವರು ತಮ್ಮ ಭಾವನೆಗಳ ಕುರಿತಾಗಿ ಸಂಪೂರ್ಣವಾಗಿ ಪ್ರಾಮಾಣಿಕರಾಗಿದ್ದಾರೆ. ಏಕೆಂದರೆ ಅವರು ಈಗ ಡಿಸ್ನಿಗಾಗಿ ಕೆಲಸ ಮಾಡಲು ಸಾಕಷ್ಟು ನಿರಾಶದಾಯಕವಾಗಿದ್ದಾರೆ ಎಂದು ತೋರುತ್ತಿದೆ.

Tags

Related Articles