ಸುದ್ದಿಗಳು

ಭಾರತದಲ್ಲಿ ಹಾಲಿವುಡ್ ಶೂಟಿಂಗ್ ನಡೆಯುತ್ತಂತೆ? ನಮ್ಮವರು ಮಾತ್ರ ಯಾಕೆ ಹೊರ ದೇಶ ಮೊರೆ ಹೋಗುತ್ತಾರೆ?

ಭಾರತದ ಸೌಂದರ್ಯ ತಾಣವನ್ನ ಅರಿಸಿ ಬಂದ ವಿದೇಶಿಗರು

ನಮ್ಮ ಚಿತ್ರರಂಗದವರಿಗೆ ಒಂದು ಹಾಡು ಶೂಟ್ ಮಾಡಬೇಕು ಅಂದರೆ ನೆನಪಾಗೋದೆ ವಿದೇಶಿ ಸ್ಥಳಗಳು. ಆದರೆ ಇದಕ್ಕೆ ವಿರುದ್ಧವಾಗಿ ಹಾಲಿವುಡ್‍ ನವರೇ ಸುಂದರ ತಾಣಗಳನ್ನುಹುಡುಕುತ್ತ ಭಾರತಕ್ಕೆ ಬರುತ್ತಿದ್ದಾರೆ. ಅಷ್ಟೇ ಅಲ್ಲ ಇಂತಹ ಅಪ್ರತಿಮ ಸೌಂದರ್ಯ ನಮ್ಮಲ್ಲೇ ಇದೆ ಅನ್ನೋದನ್ನು ನಮಗೇ ತೋರಿಸಿಕೊಡುತ್ತಿದ್ದಾರೆ ವಿದೇಶಿಗರು. ಹಾಗಿದ್ದರೆ ಬನ್ನಿ ಯಾವುದೆಲ್ಲಾ ಸಿನಿಮಾಗಳು ಇಲ್ಲಿ ಶೂಟ್​ ಆಗಿವೆ ಅಂತ ನೋಡೋಣ

‘ರಾಜಸ್ಥಾನ್

‘ರಾಜಸ್ಥಾನ್’ ಹೆಸರು ಕೇಳಿದಾಕ್ಷಣ ನೆನಪಾಗುವುದೇ ಸುಂದರ ಅರಮನೆಗಳು, ಒಂಟೆ ಸವಾರಿ, ಮನಮೋಹಕ ಸಂಸ್ಕೃತಿ ಹಾಗೂ ಸಂಪ್ರದಾಯ. ಇಂತಹ ಸ್ಥಳ ಯಾವುದೇ ನಿರ್ದೇಶಕನಿಗಾಗಲಿ ಇಲ್ಲಿ ಚಿತ್ರ ಮಾಡಬೇಕು ಅನ್ನಿಸುತ್ತೆ. ಅದರಲ್ಲೂ ವಿದೇಶಿಯರು ಬಂದು ಮಾಡಿದ್ದಾರೆ ಅಂದರೆ ನಿಜಕ್ಕೂ ಆಶ್ಚರ್ಯ. ಕ್ರಿಶಿಯನ್ ಬೇಲ್ ಅಭಿನಯದ ಕ್ರಿಸ್ಟೋಫರ್ ನೊಲನ್ ನಿರ್ದೇಶನದ ಚಿತ್ರ ‘ದಿ ಡಾರ್ಕ್ ನೈಟ್ ರೈಸಸ್’. ಈ ಚಿತ್ರದ ಚಿತ್ರೀಕರಣ ರಾಜಸ್ಥಾನ ಸುತ್ತಮುತ್ತ ನಡೆದಿದ್ದು, ಬ್ಯಾಟ್ ಮ್ಯಾನ್ ಜೈಲಿಂದ ತಪ್ಪಿಸಿಕೊಳ್ಳುವ ದೃಶ್ಯವನ್ನು  ಜೋದ್‍ಪುರದ ಮೆಹರಾಂಗರ್ ಎಂಬ ಭವ್ಯ ಕೋಟೆಯಲ್ಲಿ ನಡೆದಿದೆ. ಚಿತ್ರಕ್ಕೆ ತಕ್ಕಂತೆ ಸ್ಥಳಗಳು ನಮ್ಮ ದೇಶದಲ್ಲಿ ಸಿಗುತ್ತೆ ಎಂಬುದೇ ಹೆಮ್ಮೆಯ ವಿಷಯ. ಇನ್ನು ಎಲಿಜಾಬೆತ್ ಗಿಲ್ಬರ್ಟ ವಿಚ್ಛೇದನೆ ಬಳಿಕ ದೇಶದಾದ್ಯಂತ ಪ್ರವಾಸೋದ್ಯಮ ಕೈಗೊಂಡರು.

Image result for the dark knight rises

ಗೋವಾ ಬೀಚ್

ಭಾರತದಲ್ಲಿ ಆಧ್ಯಾತ್ಮಿಕತೆಯನ್ನು ಹುಡುಕುತ್ತ ಹೊರಟ ಅವರು ಹೆಚ್ಚು ಕಾಲ ಕಳೆದಿದ್ದು ಭಾರತ ಮತ್ತು ಇಂಡೋನೇಷ್ಯ. ಹೀಗಾಗಿ ಜುಲಿಯಾ ರಾಬಟ್ರ್ಸ್ ಮತ್ತು ಜೇವಿಯರ್ ಬರ್ಡೇಮ್ ಅಭಿನಯದ ‘ಈಟ್ ಪ್ರೆ ಲವ್’ ಚಿತ್ರದ ಬಹುತೇಕ ಭಾಗವನ್ನ ಭಾರತದಲ್ಲಿ ಹರ್ಯಾಣದ ಹರಿ ಮಂದಿರ್ ಆಶ್ರಾಮದಲ್ಲಿ ಚಿತ್ರೀಕರಿಸಿದ್ರು. ಭವ್ಯವಾದ ದೇವಸ್ಥಾನ, 500 ಮಕ್ಕಳನ್ನು ಹೊಂದಿರುವ ಈ ಆಶ್ರಮವು ನೋಡುವುದೇ ಒಂಥರ ಚೆನ್ನ.  ಗೋವಾ ಮೋಜಿಗೆ ಹೆಸರಾದ ನಾಡು. ಈಗಾಗಲೇ ಈ ಸ್ಥಳದಲ್ಲಿ ರಿಯಾಲಿಟಿ ಶೋ ನಿಂದ ಹಿಡಿದು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಜೊತೆಗೆ ವಿದೇಶಿಯರನ್ನು ಬಿಟ್ಟಿಲ್ಲ ಈ ಸ್ಥಳ. ಹಾಲಿವುಡ್‍ನ ಹೆಸರಾಂತ ಚಿತ್ರ ‘ದಿ ಬಾರ್ನ್ ಸುಪ್ರಿಮಾಸಿ’. ಪಾಲ್ ಗ್ರೀನ್ ಗ್ರಾಸ್ ನಿರ್ದೇಶನದ ಜೇಸನ್ ಬಾರ್ನ್ ಅಭಿನಯದ ಈ ಚಿತ್ರವು ಅಮೆರಿಕನ್- ಜರ್ಮನ್ ನ ಆಕ್ಷನ್ ಥ್ರಿಲ್ಲರ್ ಸಿನಿಮವಾಗಿದೆ. ಇದು ಸೆಕೆಂಡ್ ಬಾರ್ನ್ ಕಾದಂಬರಿಯ ಎರಡನೆ ಸೀರಿಸ್. ಈ ಚಿತ್ರದ ಒಂದಷ್ಟು ರೊಮ್ಯಾಂಟಿಕ್ ದೃಶ್ಯಗಳಿಗೆ ಚಿತ್ರತಂಡ ಆರಿಸಿದ ಜಾಗ ಗೋವಾ ಬೀಚ್. ಇನ್ನು ಆಕ್ಷನ್ ಥ್ರಿಲ್ಲರ್‍ಗೆ ಹೆಸರಾದ ಸಿನಿಮ ‘ಮಿಷನ್ ಇಂಪಾಸಿಬಲ್ 4 ಗೋಸ್ಟ್ ಪ್ರೊಟೊಕಾಲ್’. ಸಾಕಷ್ಟು ಹೆಸರು ಮಾಡಿರುವ ಈ ಚಿತ್ರವನ್ನ ನಿರ್ದೇಶಿಸಿದ್ದು ಬ್ರಾಡ್ ಬಡ್ರ್ಸ್. ಇಂಪಾಸಿಬಲ್ ಸಿರಿಸ್‍ನ ನಾಲ್ಕನೆ ಭಾಗವಾಗಿರುವ ಈ ಚಿತ್ರವು ಎಲ್ಲಾ ಸಿರೀಸ್‍ಗಿಂತ ಅತಿ ಹೆಚ್ಚು ಬಂಡವಾಳ ಹಾಕಿ ಮಾಡಿದ ಸಿನಿಮಾವಿದು . ಇಂಥಹ ಚಿತ್ರದ ಕೆಲವು ದೃಶ್ಯಗಳನ್ನ ಚ್ರಿತ್ರೀಕರಿಸಿದ್ದು ಭಾರತದ ಮುಂಬೈನ ‘ಬೋರ ಬಜಾರ್’ನಲ್ಲಿ. ಇನ್ನು ‘ಮಿಷನ್ ಇಂಪಾಸಿಬಲ್ 4 ಗ್ಹೊಸ್ಟ್ ಪ್ರೊಟೊಕಾಲ್’ ಚಿತ್ರ ಕೂಡ ಅಮೆರಿಕನ್ ಆಕ್ಷನ್ ಥ್ರಿಲ್ಲರ್ ಚಿತ್ರ. ಟಾಮ್ ಕ್ರುಸಿ ಆಭಿನಯದ ಈ ಸಿನಿಮಾದ ಬಹುತೇಕ ದೃಶ್ಯಗಳು ಮುಂಬೈನ ‘ಬೋರ ಬಜಾರ್’ ಸೇರಿದಂತೆ ಬೆಂಗಳೂರಿನ ಸನ್ ಟಿವಿ ಕಚೇರಿಯಲ್ಲೂ ಚತ್ರೀಕರಿಸಲಾಗಿದೆ. ಅಷ್ಟೇ ಅಲ್ಲ ಅನಿಲ್ ಕಪೂರ್ ಈ ಚಿತ್ರದಲ್ಲಿ ಬ್ಯುಸ್‍ನೆಸ್ ಮಾನ್ ಆಗಿ ಕಾಣಿಸಿಕೊಂಡಿದ್ದು ವಿಶೇಷ.

Image result for the bourne supremacy

ಜೈಪುರ್

ಸಮೃದ್ಧ ಇತಿಹಾಸ ಮತ್ತು ರಾಜವೈಭವದ ವಾಸ್ತು ಶಿಲ್ಪಗಳಿಗೆ ಪ್ರಸಿದ್ಧ ಸ್ಥಳ ಜೈಪುರ್. ಇನ್ನು ಭಾರತದ ರೊಮಾಂಟಿಕ್ ಸ್ಪಾಟ್ ಉದಯ್‍ಪುರ್ . ಇಲ್ಲಿರುವ ಮಾರಿ ಗೋಲ್ಡ್ ಹೋಟೆಲ್ ಎಂಥವರಿಗಾದ್ರು ಮೈ ಜುಮ್ ಅನಿಸುತ್ತದೆ. ಇಂಥ ಸ್ಥಳದಲ್ಲಿ ‘ಬೆಸ್ಟ್ ಎಕ್ಸೊಟಿಕ್ ಮಾರಿ ಗೋಲ್ಡ್ ಹೋಟೆಲ್’ ಚಿತ್ರ ಮಾಡಿದ್ದಾರೆ ನಿರ್ದೇಶಕ ಜಾನ್ ಮಾಡ್ಡನ್. 2011ರಲ್ಲಿ ತೆರೆಗೆ ಬಂದ ಚಿತ್ರ ‘ಬೆಸ್ಟ್ ಎಕ್ಸೊಟಿಕ್ ಮಾರಿ ಗೋಲ್ಡ್ ಹೋಟೆಲ್’. ಹಾಸ್ಯ ಡ್ರಾಮಾ ಕುರಿತಾದ ಈ ಚಿತ್ರದಲ್ಲಿ ನಟಿಸಿದ್ದಾರೆ ಜುದಿ ದೆಂಚ್. ಈ ಚಿತ್ರವು ನಿವೃತ್ತಿಯಾದ ಬ್ರಿಟಿಷರು ರಜೆ ದಿನಗಳಲ್ಲಿ ‘ಮಾರಿ ಗೋಲ್ಡ್ ಹೋಟೆಲ್’ ಗೆ ಬಂದು ಕಾಲ ಕಳೆಯುವ ಕಥೆ ಕುರಿತಾಗಿದೆ. ಭಾರತದಲ್ಲಿರುವಂತಹ ಅರೆಮನೆಗಳು ಈಗಲೂ ಸಹ ಎಲ್ಲರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಈಗಾಗಲೇ ಸಾಕಷ್ಟು ಚಿತ್ರಗಳು ಅರಮನೆಗಳಲ್ಲಿ ಚಿತ್ರೀಕರಿಸಿದ್ದಾರೆ. ರಾಜರ ತಾಣವಾಗಿರುವ ಉದಯ್‍ಪುರ್ ಅರೆಮನಗಳಲ್ಲಿ ಹಾಲಿವುಡ್ ಸಿನಿಮಾ ಮಾಡಲಾಗಿದೆ. ಅದು ಜೇಮ್ಸ್ ಬಾಂಡ್ ಸಿರೀಸ್‍ನ 13ನೇ ಚಿತ್ರ ‘ಆಕ್ಟೊಪಸ್ಸಿ’. ಜಾನ್ ಗ್ಲೇನ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಚಿತ್ರ ‘ಸ್ಲಂ ಡಾಗ್ ಮಿಲಿಯನೇರ್’. ಇದು ಭಾರತೀಯ ವಿಕಾಸ್ ಸ್ವರೂಪ್‍ರ ‘ಕ್ಯೂ ಆಂಡ್ ಎ’ ಎಂಬ ಕಾದಂಬರಿ ಆಧರಿತ ಚಿತ್ರ. ನಿರ್ದೇಶಕ ಡೇನಿ ಬೋಯ್ಲೆ ಮುಂಬೈನ ಕೊಳಗೇರಿ ಮಕ್ಕಳ ಸಾಹಸಗಾಥೆಯನ್ನು ಎತ್ತು ತೋರಿಸಿದ್ದಾರೆ.  ಕೈಯಲ್ಲೆ ಬೆಣ್ಣೆ ಇಟ್ಕೊಂಡು ಊರೆಲ್ಲಾ ಹುಡುಕಿದರಂತೆ. ಹಾಗಾಯ್ತು ನಮ್ಮ ಚಿತ್ರರಂಗದವರ ಕಥೆ. ಇಷ್ಟೊಂದೆಲ್ಲಾ ಪ್ರತಿಷ್ಠಿತ ತನ್ನದೇ ವೈಭವ ಹೊಂದಿರುವ ಸ್ಥಳಗಳು ಇರಬೇಕಾದರೆ, ನಮ್ಮ ಚಿತ್ರರಂಗದವರು ಮಾತ್ರ ವಿದೇಶದಲ್ಲಿ ಚಿತ್ರೀಕರಣ ಮಾಡಲು ಮುಖ ಮಾಡಿರುವುದು ಬೇಸರದ ಸಂಗತಿ.

Image result for slum dog milli

 

Tags