ಸುದ್ದಿಗಳು

ತಮ್ಮ ಮಗಳಿಗೆ ‘ಇಂಡಿಯಾ ರೋಸ್’ ಎಂದು ಹೆಸರಿಟ್ಟ ಹಾಲಿವುಡ್ ನಟ ಕ್ರಿಸ್ ಹೆಮ್ಸ್ ವರ್ಥ್

ಭಾರತ ಸುಂದರವಾದ ದೇಶ. ನಿಜಕ್ಕೂ ಇಲ್ಲಿ ಹುಟ್ಟಿರುವ ನಾವೇ ಧನ್ಯರು. ಶಾಂತಿಯುತ ರಾಷ್ಟ್ರ ನಮ್ಮದು. ಯಾರೇ ಬಂದರೂ ಪ್ರೀತಿಯಿಂದ ಬರಮಾಡಿಕೋಳ್ಳುತ್ತೇವೆ. ಹೀಗಿರುವಾಗ ವಿದೇಶಿಯರು ಕೂಡ ಭಾರತವನ್ನು ಇಷ್ಟ ಪಡುತ್ತಾರೆ. ಅಷ್ಟೇ ಅಲ್ಲ ಶಾಂತಿಯುತ ದೇಶದಲ್ಲಿ ಶಾಶ್ವತವಾಗಿ ಉಳಿದವರು ಇದ್ದಾರೆ. ಸದ್ಯ ಇಲ್ಲೊಂದು ವಿಶೇಷ ಎಂಬಂತೆ ಇದೀಗ ಹಾಲಿವುಡ್ ನಟ ತಮ್ಮ ಮಗಳಿಗೆ ಇಂಡಿಯಾ ಎಂಬ ಹೆಸರಿಡುವ ಮೂಲಕ ಇಂಡಿಯಾದ ಮೇಲಿನ ಪ್ರೀತಿ ಮೆರೆದಿದ್ದಾರೆ.

ಇಂಡಿಯಾ ರೋಸ್ ಎಂದು ಮಗಳಿಗೆ ನಾಮಕರಣ

ಹೌದು, ಹಾಲಿವುಡ್ ಖ್ಯಾತ ನಟ, ಎವೆಂಜರ್ಸ್ ಚಿತ್ರಗಳಲ್ಲಿ ಥಾರ್ ಪಾತ್ರದಲ್ಲಿ ಮಿಂಚಿದ್ದ ಕ್ರಿಸ್ ಹೆಮ್ಸ್‌ ವರ್ಥ್ ಬಹಳಷ್ಟು ಸಿನಿಮಾಗಳ ಮೂಲಕ ಈ ನಟ ಪ್ರೇಕ್ಷಕರ ಹಾಗೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇದೀಗ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡುವ ಮೂಲಕ ಇಡೀ ಭಾರತೀಯರ ಮನ ಗೆದ್ದಿದ್ದಾರೆ ಹಾಲಿವುಡ್ ನಟ. ಮಗಳಿಗೆ ಇಂಡಿಯಾ ರೋಸ್ ಎಂದು ಕ್ರಿಸ್ ಹೆಸರಿಟ್ಟಿರೋದನ್ನು ಸಂದರ್ಶನವೊಂದರಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಹಾಲಿವುಡ್ ನಟನ ಕೆಲಸಕ್ಕೆ ಕೊಂಡಾಡಿದ ಭಾರತ

ಈ ನಟ ನೆಟ್‌ ಫ್ಲಿಕ್ಸ್ ಪ್ರಾಜೆಕ್ಟ್ ಧಾಕಾದ ಚಿತ್ರೀಕರಣಕ್ಕೆ ಅಹಮದಾಬಾದ್ ಮತ್ತು ಮುಂಬೈಗೆ ಬಂದಿದ್ದರಂತೆ. ಆಗ ಇಲ್ಲಿನ ಜನ ಅವರಿಗೆ ತೋರಿಸಿದ ಪ್ರೀತಿ ನಿಜಕ್ಕೂ ನಾವೆಂದೂ ಮರೆಯೋದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಅವರ ಪತ್ನಿಗೂ ಕೂಡ ಇಂಡಿಯಾ ಎಂದರೆ ಇಷ್ಟವಂತೆ. ಚಿತ್ರೀಕರಣದ ಸಮಯದಲ್ಲಿ ಜನ ತೋರಿಸಿದ್ದ ಪ್ರೀತಿಗೆ ಈ ನಟ ಫಿದಾ ಆಗಿದ್ದಾರೆ. ಶೂಟಿಂಗ್ ಸಮಯದಲ್ಲಿ ಜನ ನೀಡಿದ್ದ ಪ್ರೋತ್ಸಾಹದ ಬಗ್ಗೆಯೂ ಮಾತನಾಡಿರುವುದು ವರದಿಗಳಾಗಿವೆ. ಭಾರತದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಈ ನಟನ ಕೆಲಸಕ್ಕೆ ಇಡೀ ಭಾರತ ಕೊಂಡಾಡುತ್ತಿದೆ.

Related image

Chris Hemsworth,Chris Hemsworth India,Chris Hemsworth Wife

ಮೈಸೂರಿನಲ್ಲಿ ಭೇಟಿಯಾದ ಅಪ್ಪು ಆ್ಯಂಡ್ ಯಶ್

#balkaninews #hollywood #englishmovies #chrishemsworth #chrishemsworthmovie

 

Tags