ಸುದ್ದಿಗಳು

‘ಗಲ್ಲಿ ಬಾಯ್’ ಗೆ ಫಿದಾ ಆದ ಹಾಲಿವುಡ್ ನಟ

ಮುಂಬೈ, ಫೆ.17:

ರಣ್ವೀರ್ ಅಭಿನಯದ ‘ಗಲ್ಲಿ ಬಾಯ್’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಈ‌ ಸಿನಿಮಾಗೆ ಹಾಲಿವುಡ್ ನಟ ಫಿದಾ ಆಗಿದ್ದಾರೆ.

ರಣ್ವೀರ್ ಸಿಂಗ್ ಸಿನಿಮಾಗಳೇ ಹಾಗೆ. ವಿಶೇಷತೆ, ವಿಭಿನ್ನತೆಗಳು ಇದ್ದೇ ಇರುತ್ತದೆ. ಅವರ ಸಿನಿಮಾಗಳು ಬರುವುದಕ್ಕೂ ಮುನ್ನ ಸದ್ದು ಮಾಡಿದಷ್ಟೇ ಬಿಡುಗಡೆಯಾದ ನಂತರವೂ ಸುದ್ದಿಯಾಗುತ್ತವೆ. ಇದೀಗ ಅವರ ಬಹು ನಿರೀಕ್ಷಿತ ಸಿನಿಮಾ ‘ಗಲ್ಲಿ ಬಾಯ್’ ಕೂಡ ಫೆಬ್ರವರಿ 14ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ಇದೀಗ ಪ್ರೇಕ್ಷಕರನ್ನು ಫಿದಾ ಮಾಡಿಸಿದೆ‌.

ಗಲ್ಲಿ ಬಾಯ್ ಗೆ ಹಾಲಿವುಡ್ ಫಿದಾ

ಹೌದು, ಸದ್ಯ ರಣ್ವೀರ್ ಹಾಗೂ ಆಲಿಯಾ ಭಟ್ ಅಭಿನಯದ ಸಿನಿಮಾ ಗಲ್ಲಿ ಬಾಯ್ ವಿಭಿನ್ನ ಟೈಟಲ್ ನಲ್ಲಿಯೇ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ಬಿಡುಗಡೆಯಾಗಿ ಸಕ್ಕತ್ ಸದ್ದು ಮಾಡುತ್ತಿದೆ. ಇದೀಗ ಬಾಲಿವುಡ್ ಮಂದಿ ಈ ಸಿನಿಮಾಗೆ ಜೈ ಎಂದಿರುವಾಗಲೇ ಹಾಲಿವುಡ್ ಮಂದಿ ಕೂಡ ಜೈ ಎನ್ನುತ್ತಿದ್ದಾರೆ‌. ಹೌದು, ಹಾಲಿವುಡ್​​ ನಟ​​ ವಿಲ್​ ಸ್ಮಿತ್​​​ ಕೂಡ ರಣ್ವೀರ್​ ನಟನೆಗೆ ಫಿದಾ ಆಗಿದ್ದು ಹಾಡಿ ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾ ವಿಚಾರವಾಗಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರಣ್ವೀರ್ ನಟನೆಗೆ ನಾನು ಫಿದಾ ಆಗಿದ್ದೇನೆ. ಅದ್ಬುತವಾಗಿ ನಟಿಸಿದ್ದಾರೆ ಎಂದಿದ್ದಾರೆ.

ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಪವರ್ ಸ್ಟಾರ್ !!!

#bollywood #gullyboyhindimovie #hindimovies #ranveersinghandaliabhatt #balkaninews

Tags

Related Articles