ಸುದ್ದಿಗಳು

ಆಸ್ಕರ್ ನಲ್ಲಿ ಸಿಂಗಪುರವನ್ನು ಪ್ರತಿನಿಧಿಸುತ್ತಿರುವ ‘ಬಫೆಲೋ ಬಾಯ್ಸ್’

ಕೆನಡಾದ ಫ್ಯಾಂಟಸಿಯ ಉತ್ಸವ ಮತ್ತು ನ್ಯೂಯಾರ್ಕ್ ಏಷಿಯಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.

ಆಕ್ಷನ್ ನಾಟಕ ಚಿತ್ರ, ‘ಬಫೆಲೋ ಬಾಯ್ಸ್’ ವಿದೇಶಿ ಭಾಷೆಯ ಆಸ್ಕರ್ ವಿಭಾಗದಲ್ಲಿ ಸಿಂಗಪುರವನ್ನು ಪ್ರತಿನಿಧಿಸಲು ಸಿದ್ಧವಾಗಿದೆ.

ವೆರೈಟಿ ಪತ್ರಿಕೆ ವರದಿ

ಮೈಕ್ ವಿಲ್ವಾನ್ ನಿರ್ದೇಶನದ ಈ ಚಲನಚಿತ್ರವು 19ನೇ ಶತಮಾನದ ಕಥೆಯಾಗಿದೆ. ಶ್ರೀಮಂತ ಇಂಡೋನೇಷಿಯನ್ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶಗಳ ಪರಿಪೂರ್ಣ ಸಂಯೋಜನೆಯಾಗಿದೆ ಎಂದು ವೆರೈಟಿ ಪತ್ರಿಕೆ ವರದಿ ಮಾಡಿದೆ.ಚಿತ್ರದ ಕಥಾವಸ್ತುವಿಗೆ ಬಗ್ಗೆ ಸಿಂಗಪುರ್ ಫಿಲ್ಮ್ ಕಮಿಷನ್ ನಿರ್ದೇಶಕ ಜೋಕಿಮ್ ಎಗ್ ಅವರು ವಿವರಿಸುತ್ತಾ, ‘ಬಫೆಲೋ ಬಾಯ್ಸ್’ ಕುಟುಂಬದ ಸಂಬಂಧಗಳು ಮತ್ತು ನ್ಯಾಯವನ್ನು ಸಾರ್ವತ್ರಿಕವಾಗಿ ಅನಾವರಣಗೊಳಿಸುವ ವಿಷಯಗಳನ್ನು ಪರಿಶೋಧಿಸಲಾಗಿದೆ ಎಂದು ಹೇಳಿದರು. ಈ ಚಲನಚಿತ್ರವನ್ನು ಜುಲೈನಲ್ಲಿ ಕೆನಡಾದ ಫ್ಯಾಂಟಸಿಯ ಉತ್ಸವ ಮತ್ತು ನ್ಯೂಯಾರ್ಕ್ ಏಷಿಯಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.

ಸಿಂಗಪುರ್ ಮತ್ತು ಇಂಡೋನೇಷಿಯಾದ ಸೃಜನಶೀಲ ಆರ್ಥಿಕತೆಯ ನಡುವಿನ ವಿಭಿನ್ನ ಸಂಸ್ಕೃತಿಯ ಚಲನಚಿತ್ರ ಉದ್ಯಮವಾಗಿದೆ ಎಂದು ವಿಲ್ವಾನ್ ಹೇಳಿದರು. ಪ್ರತಿವರ್ಷ ಸಿಂಗಪೂರ್ ಚಲನಚಿತ್ರಗಳನ್ನು ಸಲ್ಲಿಸುವಾಗ, ಯಾರೂ ನಾಮನಿರ್ದೇಶನವನ್ನು ಪಡೆದಿರಲಿಲ್ಲ.

Tags