ಸುದ್ದಿಗಳು

ಮಾರಾಟವಾದ ಎಸ್ಟೇಟ್ ನಲ್ಲಿ ಕೊನೆಯ ದಿನಗಳನ್ನು ಕಳೆದ ‘ಬರ್ಟ್ ರೆನಾಲ್ಡ್ಸ್’

ಟಿಎಂಜೆಡ್ ಪತ್ರಿಕೆ ವರದಿ

ಹಾಲಿವುಡ್ ನ ಈಸ್ಟರ್ ಇಯರ್ ನ ಸೂಪರ್ ಸ್ಟಾರ್ ಬರ್ಟ್ ರೆನಾಲ್ಡ್ಸ್ ಅವರು ತಮ್ಮ ಬದುಕಿನ ಕೊನೆಯ ದಿನಗಳನ್ನು ಫ್ಲೋರಿಡಾದ ಎಸ್ಟೇಟ್ ನಲ್ಲಿ ಶಾಂತಿಯುತವಾಗಿ ಕಳೆದರು.

ಎಸ್ಟೇಟ್ ನ ಮಾಲೀಕರು ಅಲ್ಲಿಯೇ ಉಳಿಯಲು ಅವಕಾಶ ನೀಡುವ ಮೂಲಕ ನಟನಿಗೆ ಸಹಾಯ ಮಾಡಿದರು. ನಂತರದ ದಿನಗಳಲ್ಲಿ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಬೇಕಾಯಿತು ಎಂದು ಟಿಎಂಜೆಡ್ ಪತ್ರಿಕೆ ವರದಿ ಮಾಡಿದೆ.ಆರ್ಥಿಕ ಸಮಸ್ಯೆಗಳಿಂದ ಬಳಲಿದ್ದ ನಟ

2015ರಲ್ಲಿ ‘ದಿ ಲಾಂಗೆಸ್ಟ್ ಯಾರ್ಡ್’ ಸ್ಟಾರ್ ತನ್ನ ಮನೆಯನ್ನು ಸ್ನೇಹಿತನಾದ ಚಾರ್ಲ್ಸ್ ಮೊಡಿಕಾಗೆ ಮಾರಾಟ ಮಾಡಿದ್ದರು. ಹಲವು ವರ್ಷಗಳಿಂದ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದು ಅದರಿಂದ ಹೊರಬರಲು ಬಯಸಿ ಹೀಗೆ ಮಾಡಿದ್ದರು.

ಮೊಡಿಕಾ ಅವರು ಟಿಎಮ್ ಜಡ್ ಜೊತೆಗೆ ಮಾತನಾಡುವಾಗ ಬರ್ಟ್ ಅಲ್ಲಿಯೇ ಉಳಿಯಲು ಸಹಾಯ ಮಾಡುವ ಸಲುವಾಗಿ ಎಸ್ಟೇಟ್ ಖರೀದಿಸಿದ್ದಾಗಿ ಹೇಳಿದ್ದರು. ಆದರೆ ಮೊಡಿಕಾ ಮನೆಗೆ ಅಲ್ಪ ಮಟ್ಟದ ಬಾಡಿಗೆ ಶುಲ್ಕವನ್ನು ವಿಧಿಸಿದ್ದರು.1980ರಲ್ಲಿ ಆಗಿನ ಪತ್ನಿ ಲೋನಿ ಆಂಡರ್ಸನ್ ಅವರೊಂದಿಗೆ ವಾಸಿಸಲು ಬರ್ಟ್ 700,000 ಡಾಲರ್ ಮೊತ್ತಕ್ಕೆ ಎಸ್ಟೇಟ್ ಅನ್ನು ಖರೀದಿಸಿದ್ದರು.

2005ರಲ್ಲಿ, ಅವರು ಅದನ್ನು ಮಾರಾಟಕ್ಕೆ ಹಾಕಿದಾಗ, ಅದರ ಬೆಲೆ 15 ಮಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು. ಆದರೆ ಅವರು ಅದನ್ನು 2015ರಲ್ಲಿ ಮೊಡಿಕಾಗೆ ಮಾರಲು ನಿರ್ಧರಿಸಿದ ನಂತರ, ಬೆಲೆ ತೀವ್ರವಾಗಿ ಕುಸಿದು 3.3 ಮಿಲಿಯನ್ ಡಾಲರ್ ಗೆ ಮಾರಾಟ ಮಾಡಿದರು. ಅಮೆರಿಕದ ಫ್ಲೋರಿಡಾದಲ್ಲಿ ಹೃದಯಾಘಾತದಿಂದ 82 ವರ್ಷದ ನಟ ಗುರುವಾರ ನಿಧನರಾದರು.

Tags