ಸುದ್ದಿಗಳು

ಕ್ಯಾನ್ಸರ್ ಸಂಶೋಧನೆಗಾಗಿ 1.5 ಮಿಲಿಯನ್ ಡಾಲರ್ ಸಹಾಯ ಮಾಡಿದ ‘ಜಿಮ್ಮಿ ಕಿಮ್ಮೆಲ್’…!

ಬಾಲ್ಯದಲ್ಲೇ ಕಾಣಿಸಿಕೊಳ್ಳುವ ಕ್ಯಾನ್ಸರ್ ಚಿಕಿತ್ಸೆಗಾಗಿ ಸಂಶೋಧನೆಯನ್ನು ಬೆಂಬಲಿಸಲು ಅಮೇರಿಕನ್ ಟಾಕ್ ಶೋ ಹೋಸ್ಟ್ ಜಿಮ್ಮಿ ಕಿಮ್ಮೆಲ್ 1.5 ದಶಲಕ್ಷ ಡಾಲರ್ ನಷ್ಟು ಹಣವನ್ನು ಸಹಾಯ ಮಾಡಿದ್ದಾರೆ.

ಪೇಜ್ ಸಿಕ್ಸ್ ವರದಿ

ಈ ನಿಧಿಸಂಗ್ರಹ ಕಾರ್ಯಕ್ರಮವನ್ನು ಯುಸಿಎಲ್ಎ ಆಯೋಜಿಸಿತ್ತು. ಈ ಸಮಾರಂಭದಲ್ಲಿ ಟಿಮೊಥಿ ಆಲಿಫೆಂಟ್ ಮತ್ತು ರೆಬೆಕ್ಕಾ ಮೆಟ್ಜ್ ಮುಂತಾದ ಹಾಲಿವುಡ್ ನ ಪ್ರಸಿದ್ಧ ವ್ಯಕ್ತಿಗಳು ಹಾಜರಿದ್ದರು ಎಂದು ಪೇಜ್ ಸಿಕ್ಸ್ ವರದಿ ಮಾಡಿದೆ.

ಹರಾಜಿನ ಮೂಲಕ ಹಣವನ್ನು ದಾನ ಮಾಡಿದ ದಾನಿಗಳನ್ನು ಜಿಮ್ಮಿ ಕಿಮ್ಮೆಲ್ ಅವರು ಊಟಕ್ಕಾಗಿ ಆಹ್ವಾನಿಸಿದರು. ಆಡಮ್ ಪೆರ್ರಿ ಲ್ಯಾಂಗ್ ಮತ್ತು ಅನಿಮಲ್ಸ್ ಜಾನ್ ಷೂಕ್ ಮತ್ತು ವಿನ್ನಿಯ ಡೊಟೊ ಅವರುಗಳು 300,000 ಡಾಲರ್ ಮೊತ್ತದ ದೇಣಿಗೆಯನ್ನು ನೀಡಿದರು.ಚಾರಿಟಿಯನ್ನು ಪ್ರಾರಂಭಿಸಿದ ಅಲೆಕ್ಸ್ ಸ್ಕಾಟ್

2004ರಲ್ಲಿ 4 ವರ್ಷ ವಯಸ್ಸಿನ ಕ್ಯಾನ್ಸರ್ ರೋಗಿ ಅಲೆಕ್ಸ್ ಸ್ಕಾಟ್ ಅವರು ಚಾರಿಟಿಯನ್ನು ಪ್ರಾರಂಭಿಸಿದರು. ಕ್ಯಾನ್ಸರ್ ಕುರಿತಾದ ಸಂಶೋಧನೆಗಾಗಿ ನಿಂಬೆಹಣ್ಣುಗಳನ್ನು ಮಾರಾಟ ಮಾಡುವ ಮೂಲಕ 2,000 ಡಾಲರ್ ನಷ್ಟು ಮೊತ್ತವನ್ನು ಕಲೆ ಹಾಕಿದರು.

ಅಲೆಕ್ಸ್ ಅವರ ಮರಣದ ನಂತರ ಲಿಂಬೆಡ್ ಸ್ಟ್ಯಾಂಡ್ ಎಂಬ ಒಂದು ದೊಡ್ಡ ಸಂಘಟನೆಯಾಗಿ ಬೆಳೆಯಿತು. ಇದುವರೆಗೆ 150 ದಶಲಕ್ಷ ಡಾಲರ್ ಗಳಷ್ಟು ಹಣವನ್ನು ಸಂಗ್ರಹಿಸಲಾಗಿದೆ.

Tags