ಸುದ್ದಿಗಳು

ಕಾರ್ಟೂನ್ ನೆಟ್ವರ್ಕ್ ನ ‘ಅಡ್ವೆಂಚರ್ ಟೈಮ್’ ಗೆ ವಿದಾಯ

'ಅಡ್ವೆಂಚರ್ ಟೈಮ್' ಕಾರ್ಯಕ್ರಮದ ಸೃಷ್ಟಿಕರ್ತ ಪೆಂಡಲ್ಟನ್

‘ಅಡ್ವೆಂಚರ್ ಟೈಮ್’ ಕಾರ್ಯಕ್ರಮದ ಸೃಷ್ಟಿಕರ್ತ ಪೆಂಡಲ್ಟನ್ ವಾರ್ಡ್ ಪ್ರಕಾರ, ಪಾತ್ರಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡುವ ಮೂಲಕ ತೆರೆ ಮೇಲೆ ಉತ್ತಮ ಪ್ರದರ್ಶನ ನೀಡಲು ಮುಂದಾದೆವು ಎಂದಿದ್ದಾರೆ.

ಬೆಂಗಳೂರು, ಸೆ.03: ಕಾರ್ಟೂನ್ ನೆಟ್ವರ್ಕ್ ನ ‘ಅಡ್ವೆಂಚರ್ ಟೈಮ್’ ಕಾರ್ಯಕ್ರಮದ 10ನೇ ಸೀಸನ್  ಸೆಪ್ಟೆಂಬರ್ 3ರಂದು ಕೊನೆಗೊಳ್ಳಲಿದೆ. ಸೆಪ್ಟೆಂಬರ್ 4ರಂದು ಸೀಸನ್ 8 ರಿಂದ 10 ರವರೆಗಿನ ಡಿವಿಡಿ ಬಾಕ್ಸ್ ಸೆಟ್ ಬಿಡುಗಡೆಯಾಗುತ್ತಿದೆ.

 ಅಡ್ವೆಂಚರ್ ಟೈಮ್ ನ ಪ್ರಮುಖ ಪಾತ್ರಗಳು

ಫ್ಯಾಂಟಸಿ ಪ್ರದರ್ಶನದಲ್ಲಿ ಜೇಕ್ ದಿ ಡಾಗ್, ಮಾರ್ಸೆಲಿನ್ ವ್ಯಾಂಪೈರ್ ಕ್ವೀನ್, ಪ್ರಿನ್ಸೆಸ್ ಬಬಲ್ಗಮ್ ಮತ್ತು ಲೇಡಿ ರೈನಿಕಾರ್ನ್ (ಅರ್ಧ ಮಳೆಬಿಲ್ಲು ಮತ್ತು ಅರ್ಧ ಯುನಿಕಾರ್ನ್) ಪಾತ್ರಗಳು ಪ್ರಮುಖವಾಗಿದ್ದವು.ಅಂತಿಮ ಸಂಚಿಕೆಯ ಬಗ್ಗೆ ಮಾತನಾಡಿದ ಮೊಟೊ

ಪ್ರದರ್ಶನದ ಅದ್ಭುತ ಪಾತ್ರದ ಬಗ್ಗೆ ಮಾತನಾಡಿದ ಆಡಮ್ ಮೊಟೊ, ಸರಣಿ ಪ್ರದರ್ಶನದ ಆರಂಭಿಕ ದಿನಗಳಲ್ಲಿ ಹೋರಾಡಬೇಕಾಯಿತು. ಆದರೆ ಪ್ರತಿ ಸಂಚಿಕೆಯ ಪ್ರದರ್ಶನದ ನಂತರ ಫಲಿತಾಂಶಗಳನ್ನು ಕಾರ್ಟೂನ್ ನೆಟ್ವರ್ಕ್ ನೋಡಿದಾಗ ವೀಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಹೊರಬಂದಿತು. ‘ಅಡ್ವೆಂಚರ್ ಟೈಮ್’ ಕಾರ್ಯಕ್ರಮದ ಸೃಷ್ಟಿಕರ್ತ ಪೆಂಡಲ್ಟನ್ ವಾರ್ಡ್ ಪ್ರಕಾರ, ಪಾತ್ರಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡುವ ಮೂಲಕ ತೆರೆ ಮೇಲೆ ಉತ್ತಮ ಪ್ರದರ್ಶನ ನೀಡಲು ಮುಂದಾದೆವು ಎಂದಿದ್ದಾರೆ.

ಅಂತಿಮ ಸಂಚಿಕೆಯ ಬಗ್ಗೆ ಮಾತನಾಡಿದ ಮೊಟೊ, ಕೊನೆಯ ಪ್ರದರ್ಶನವನ್ನು ನೋಡಿದ ಅಭಿಮಾನಿಗಳಿಗೆ ಸಂತೋಷ ಅಥವಾ ದುಃಖವೂ ಆಗಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

Tags